ರಕ್ಷಣೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ಪಂಜಾಬ್‍ನ(Punjab) ಪಠಾಣಕೋಟ್(Patankot) ಮೂಲದ ಮುಸ್ಲಿಂ ದಂಪತಿಯ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಸ್ಜಿತ್ ಸಿಂಗ್ ಬೇಡಿ ಅವರ ಏಕಸದಸ್ಯ ಪೀಠ, 16 ವರ್ಷ ಮೇಲ್ಪಟ್ಟ ಮುಸ್ಲಿಂ ಹುಡುಗಿಯರು ವಿವಾಹ ಮಾಡಿಕೊಳ್ಳಬಹುದು ಎಂದು ಮಹತ್ವದ ತೀರ್ಪು(Verdict) ನೀಡಿದೆ.

ಅರ್ಜಿ ವಿಚಾರಣೆ ನಡೆಸಿದ ಪಂಜಾಬ್(Punjab) ಮತ್ತು ಹರ್ಯಾಣ(Haryana) ಹೈಕೋರ್ಟ್‍ನ ನ್ಯಾಯಮೂರ್ತಿ ಜಸ್ಜಿತ್ ಸಿಂಗ್ ಬೇಡಿ ಅವರ ಏಕಸದಸ್ಯ ಪೀಠ, 16ವರ್ಷ ಮೇಲ್ಪಟ್ಟ ಯುವತಿ ಮತ್ತು 21 ವರ್ಷ ಮೇಲ್ಪಟ್ಟ ಯುವಕ ಕುಟುಂಬ ಸದಸ್ಯರ ಇಚ್ಛೆಗೆ ವಿರುದ್ಧವಾಗಿ ವಿವಾಹವಾದರು ಎಂಬ ಕಾರಣಕ್ಕಾಗಿ ಅವರು ಮೂಲಭೂತ ಹಕ್ಕುಗಳಿಂದ ವಂಚಿತರಾಗಲು ಸಾಧ್ಯವಿಲ್ಲ. ನಮ್ಮ ಸಂವಿಧಾನ(Constitution) ಅವರಿಗೆ ಮದುವೆಯಾಗುವ ಮೂಲಭೂತ ಹಕ್ಕನ್ನು ನೀಡಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಉಲ್ಲೇಖಿಸಿದೆ.
ಇನ್ನು ಇಸ್ಲಾಮಿಕ್(Islamic) ಶರಿಯಾ(Sharia) ನಿಯಮವನ್ನು ಉಲ್ಲೇಖಿಸಿರುವ ನ್ಯಾಯಮೂರ್ತಿ(Judge) ಜಸ್ಜಿತ್ ಸಿಂಗ್ ಬೇಡಿ(Jusjith Singh Bedi), ‘ಪ್ರಿನ್ಸಿಪಲ್ಸ್ ಆಫ್ ಮೊಹಮ್ಮದನ್ ಲಾ’ ಪುಸ್ತಕದ ಆರ್ಟಿಕಲ್ 195 ರ ಪ್ರಕಾರ, ಹುಡುಗಿ 16 ವರ್ಷಕ್ಕಿಂತ ಮೇಲ್ಪಟ್ಟವಳಾಗಿದ್ದು, ಹುಡುಗ 21 ವರ್ಷ ಮೀರಿದರೆ ಮದುವೆಯಾಗಬಹುದು. ಹೀಗಾಗಿ ಅರ್ಜಿದಾರರ ಮದುವೆ ಕಾನೂನುಬದ್ಧವಾಗಿದೆ. ಮುಸ್ಲಿಂ ವೈಯಕ್ತಿಕ ಕಾನೂನು ಅಡಿ ಈ ಮದುವೆಯನ್ನು ಮಾನ್ಯ ಮಾಡಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಇನ್ನು ಅರ್ಜಿದಾರ ದಂಪತಿಯು 2022 ಜೂನ್ 8 ರಂದು ಮುಸ್ಲಿಂ ವಿಧಿಗಳ ಪ್ರಕಾರ ಮದುವೆಯಾಗಿದ್ದರು. ಆದರೆ, ಅವರಿಬ್ಬರ ಕುಟುಂಬಗಳು ಈ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ದಂಪತಿಗಳಿಗೆ ಬೆದರಿಕೆ ಹಾಕಿದ್ದರು. ಹೀಗಾಗಿ ಅವರಿಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದರು.