ಸಾಮಾನ್ಯವಾಗಿ ಎಲ್ಲರ ಅಡುಗೆ ಮನೆಯಲ್ಲಿಯೂ ಸಾಸಿವೆ (Mustard) ಇದ್ದೇ ಇರುತ್ತದೆ. ನಾವು ಸೇವಿಸುವ ಎಲ್ಲಾ ಆಹಾರಕ್ಕೂ ಸಾಸಿವೆ ಒಗ್ಗರಣೆ (Mustard infusion) ಇರಲೇ ಬೇಕು. ಅದರಲ್ಲೂ ಉಪ್ಪಿನಕಾಯಿಗೆ (Pickle) ಸಾಸಿವೆ ಬೇಕೇ ಬೇಕು. ಆದರೆ ಸಾಸಿವೆ ಕಾಳುಗಳು (Mustard seeds) ಕೇವಲ ರುಚಿಯ ದೃಷ್ಟಿಯಿಂದ ಮಾತ್ರವಲ್ಲ ಆರೋಗ್ಯದ ಹಿತದೃಷ್ಟಿಯಿಂದಲೂ ತುಂಬಾ ಮುಖ್ಯ. ಅದರಲ್ಲೂ ಮುಖ್ಯವಾಗಿ ತಲೆನೋವು (Headache), ಅಜೀರ್ಣ (Indigestion), ಸ್ನಾಯು ನೋವು (Muscle pain) ಮತ್ತು ಉಸಿರಾಟಕ್ಕೆ ಸಂಬಂಧಿಸಿದ ಅನೇಕ ಕಾಯಿಲೆಗಳಿಗೆ ಪರಿಹಾರವನ್ನು ನೀಡುವ ಔಷಧೀಯ ಗುಣಗಳನ್ನು (Medicinal properties) ಸಾಸಿವೆ (Mustard) ಹೊಂದಿದೆ.

ಸಾಸಿವೆಯಲ್ಲಿ ಕಂಡುಬರುವ ಪೋಷಕಾಂಶಗಳು (Nutrients) ನಮ್ಮ ದೇಹಕ್ಕೆ ತುಂಬಾ ಪ್ರಯೋಜನಯಾಗಿವೆ. ಸಾಸಿವೆ ಕ್ಯಾಲ್ಸಿಯಂ (Calcium), ಸೆಲೆನಿಯಮ್ (Selenium), ಕಬ್ಬಿಣ (Iron), ರಂಜಕ (Phosphorus), ಮೆಗ್ನೀಸಿಯಮ್ (Magnesium) ಮತ್ತು ಮ್ಯಾಂಗನೀಸ್ನಂತಹ (Manganese) ಖನಿಜಗಳಲ್ಲಿ (Minerals) ಸಮೃದ್ಧವಾಗಿವೆ. ಇದರೊಂದಿಗೆ ಸಾಕಷ್ಟು ವಿಟಮಿನ್ ಬಿ (Vitamin B), ಪ್ರೋಟೀನ್ (Protein) ಮತ್ತು ಫೈಬರ್ (Fiber) ಸಹ ಇದರಲ್ಲಿ ಕಂಡುಬರುತ್ತದೆ. ಸಾಸಿವೆ ಕಾಳುಗಳು ಫೈಟೊನ್ಯೂಟ್ರಿಯೆಂಟ್ಗಳನ್ನು (Phytonutrients) ಸಹ ಒಳಗೊಂಡಿರುತ್ತವೆ, ಇದು ಒಂದು ರೀತಿಯ ಉತ್ಕರ್ಷಣ ನಿರೋಧಕವಾಗಿದೆ (Antioxidant) ಮತ್ತು ಕ್ಯಾನ್ಸರ್ (Cancer) ನಿಂದ ನಮ್ಮನ್ನು ರಕ್ಷಿಸುತ್ತದೆ, ವಿಶೇಷವಾಗಿ ಕರುಳಿಗೆ ಸಂಬಂಧಿಸಿದ ಕ್ಯಾನ್ಸರ್ (Colon cancer). ಸಂಧಿವಾತ (Arthritis) ಮತ್ತು ಚರ್ಮದ ಕಾಯಿಲೆಗಳಂತಹ (Skin diseases) ಕಾಯಿಲೆಗಳನ್ನು ನಿಯಂತ್ರಣದಲ್ಲಿಡುವ ಉರಿಯೂತದ ಗುಣಲಕ್ಷಣಗಳು (Anti-inflammatory properties) ಸಹ ಸಾಸಿವೆಯಲ್ಲಿವೆ, ಸಾಸಿವೆ ಕಾಳುಗಳು ಬ್ಯಾಕ್ಟೀರಿಯಾ ವಿರೋಧಿ (Anti bacterial) ಮತ್ತು ಆಂಟಿಫಂಗಲ್ (Antifungal) ಗುಣಲಕ್ಷಣಗಳನ್ನು ಹೊಂದಿದೆ.

ಇನ್ನು ಕಪ್ಪು ಸಾಸಿವೆ ಕಾಳುಗಳು (Black mustard seeds) ಹೈಪೊಗ್ಲಿಸಿಮಿಕ್ (Hypoglycemic) ಮತ್ತು ಆಂಟಿಡಯಾಬಿಟಿಕ್ (Antidiabetic) ಗುಣಲಕ್ಷಣಗಳನ್ನು ಹೊಂದಿವೆ ಎಂದು ಸಂಶೋಧನೆಯೊಂದರಿಂದ (From a research) ತಿಳಿದುಬಂದಿದೆ. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು (Blood glucose levels) ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಪ್ಪು ಸಾಸಿವೆ ಬೀಜಗಳು ಟೈಪ್ 2 ಡಯಾಬಿಟಿಸ್ (Type 2 diabetes) ಸಮಸ್ಯೆಗೆ ಪರಿಹಾರವನ್ನು ಒದಗಿಸುವ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲದೆ ಸಾಸಿವೆ ಬೀಜಗಳು ಜೀರ್ಣಕ್ರಿಯೆ ಉತ್ತಮಗೊಳಿಸಲು (Improve digestion) ಸಹಾಯ ಮಾಡುತ್ತವೆ ಮತ್ತು ಚಯಾಪಚಯ ಕ್ರಿಯೆಯ
(Metabolism) ದರವನ್ನು ಉತ್ತೇಜಿಸುತ್ತವೆ, ಇದು ಮಲಬದ್ಧತೆ (Constipation) ಮತ್ತು ಅತಿಸಾರದಂತಹ ಸಮಸ್ಯೆಗಳನ್ನು (Problems like diarrhea) ಗುಣಪಡಿಸುತ್ತದೆ. ನಾವು ಪ್ರತಿದಿನ ಬಳಸುವ ಸಾಸಿವೆಯಲ್ಲಿ ಬೋಫ್ಲಾವಿನ್ (Boflavin) ಎಂಬ ವಿಟಮಿನ್ ಇರುತ್ತದೆ, ಇದು ಮೈಗ್ರೇನ್ (Migraine) ಅಪಾಯವನ್ನು ಕೂಡ ಕಡಿಮೆ ಮಾಡುತ್ತದೆ.