• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಮ್ಯೂಚುವಲ್ ಫಂಡ್ ಸ್ಕೀಮ್‌ಗಳು: ಹೂಡಿಕೆಗಿಂತ ಮೊದಲು ನೀವು ಕಡ್ಡಾಯವಾಗಿ ಪರಿಶೀಲಿಸಬೇಕಾದ ಶುಲ್ಕಗಳಿವು

Teju Srinivas by Teju Srinivas
in ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಮ್ಯೂಚುವಲ್ ಫಂಡ್ ಸ್ಕೀಮ್‌ಗಳು: ಹೂಡಿಕೆಗಿಂತ ಮೊದಲು ನೀವು ಕಡ್ಡಾಯವಾಗಿ ಪರಿಶೀಲಿಸಬೇಕಾದ ಶುಲ್ಕಗಳಿವು
0
SHARES
37
VIEWS
Share on FacebookShare on Twitter
  • ಹೂಡಿಕೆ ಮಾಡುವ ಮುನ್ನ ತಿಳಿಯಿರಿ (Mutual Fund Schemes) ಎಕ್ಸಿಟ್ ಲೋಡ್, ಟ್ರಾನ್ಸಾಕ್ಷನ್ ಚಾರ್ಜ್, ಎಕ್ಸ್‌ಪೆನ್ಸ್ ರೇಶಿಯೋ
  • ಎಂಟ್ರಿ ಲೋಡ್‌ದಿಂದ TERವರೆಗಿನ ಎಲ್ಲಾ ವೆಚ್ಚಗಳು ನಿಮ್ಮ ರಿಟರ್ನ್ ಮೇಲೆ ಪರಿಣಾಮ ಬೀರುತ್ತವೆ
  • NAV ಒಳಗೆ ಸೇರಿಸಿರುವ ಎಕ್ಸ್‌ಪೆನ್ಸ್ ರೇಶಿಯೋ ಬಗ್ಗೆ ತಿಳಿಯದೇ ಹೂಡಿಕೆ ಮಾಡಿದರೆ ನಷ್ಟವಾಗಬಹುದು

ಮ್ಯೂಚುವಲ್ ಫಂಡ್ಸ್ (Mutual Funds) ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು (Mutual Fund Schemes) ಜನಪ್ರಿಯತೆ ಪಡೆದ ಹೂಡಿಕೆ ಆಯ್ಕೆಯಾಗಿದೆ.

ವಿವಿಧ ಫಂಡ್ ಹೌಸ್‌ಗಳು ಸಹಸ್ರಾರು ಸ್ಕೀಮ್‌ಗಳನ್ನು ಹೂಡಿಕೆದಾರರಿಗೆ ಆಫರ್ (Offer) ಮಾಡುತ್ತಿವೆ.

ಆದರೆ, ಮ್ಯೂಚುವಲ್ ಫಂಡ್ ಎಂದಾಕ್ಷಣ ಕೇವಲ ಹೂಡಿಕೆ ಪ್ರಮಾಣ ಮತ್ತು ಇದರಿಂದ ದೊರೆಯುವ ಲಾಭವಷ್ಟೇ ಗಮನಕ್ಕೆ ಬರಬಾರದು; ಏಕೆಂದರೆ, ಫಂಡ್ ನಿರ್ವಹಣೆಗೆ ಸಂಬಂಧಿಸಿದ ಹಲವಾರು ವೆಚ್ಚಗಳನ್ನು ಹೂಡಿಕೆದಾರರಿಂದಲೇ ವಿವಿಧ ಶುಲ್ಕಗಳ ರೂಪದಲ್ಲಿ ವಸೂಲಿ ಮಾಡಲಾಗುತ್ತದೆ.

Mutual Fund Schemes

ಮಾರುಕಟ್ಟೆ ಸಂಶೋಧನೆ, ಫಂಡ್ ಮ್ಯಾನೇಜರ್ ಫೀ (Fund Manager Fee) , ಮಾರ್ಕೆಟಿಂಗ್, ಡಿಸ್ಟ್ರಿಬ್ಯೂಶನ್ (Distribution) , ಅಕೌಂಟಿಂಗ್ ಮತ್ತು ಸರ್ವಿಸ್ ವೆಚ್ಚ ಸೇರಿದಂತೆ ಅನೇಕ ವೆಚ್ಚಗಳನ್ನು ಪರಿಗಣಿಸಿ ಫಂಡ್ ಕಂಪನಿಗಳು ಈ ಶುಲ್ಕಗಳನ್ನು ನಿಗದಿ ಮಾಡುತ್ತವೆ.

ಹೀಗಾಗಿ, ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೊದಲು ಇವುಗಳಾದ (Mutual Fund Schemes) ಎಂಟ್ರಿ ಲೋಡ್, ಎಕ್ಸಿಟ್ ಲೋಡ್ (Exit Load) , ಟ್ರಾನ್ಸಾಕ್ಷನ್ ಚಾರ್ಜ್, ಎಕ್ಸ್‌ಪೆನ್ಸ್ ರೇಶಿಯೋ (Expense Ratio) ಮತ್ತು ಸ್ವಿಚ್ ಪ್ರೈಸ್ ಬಗ್ಗೆ ತಿಳಿದಿರುವುದು ಬಹುಮುಖ್ಯ.

ಈ ಶುಲ್ಕಗಳು ನಿಮ್ಮ ನೆಟ್ ರಿಟರ್ನ್ (Net Return) ಮೇಲೆ ನೇರವಾದ ಪರಿಣಾಮ ಬೀರುತ್ತವೆ ಎಂಬುದರ ಅರಿವು ಹೂಡಿಕೆದಾರರಲ್ಲಿ ಅತ್ಯಗತ್ಯವಾಗಿದೆ.

ಮೊದಲಿಗೆ, ಕೆಲವು ವರ್ಷಗಳ ಹಿಂದೆ ಮ್ಯೂಚುವಲ್ ಫಂಡ್‌ಗಳಲ್ಲಿ ಎಂಟ್ರಿ ಲೋಡ್ ಅಂದರೆ ಪ್ರವೇಶ ಶುಲ್ಕವನ್ನು ವಿಧಿಸಲಾಗುತ್ತಿತ್ತು.

ಹೊಸ ಹೂಡಿಕೆ ಮಾಡುವಾಗ ಈ ಶುಲ್ಕವನ್ನು ಕಟ್ ಮಾಡಲಾಗುತ್ತಿತ್ತು.

ಆದರೆ, Securities and Exchange Board of India (SEBI) ಮಾರುಕಟ್ಟೆ ಪಾರದರ್ಶಕತೆ ಹೆಚ್ಚಿಸುವ ದೃಷ್ಟಿಯಿಂದ ಎಂಟ್ರಿ ಲೋಡ್ ವಸೂಲಿಯನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ಈಗ ಯಾವುದೇ ಸ್ಕೀಮ್‌ಗಳಲ್ಲಿ ಮನಿ ಇನ್‌ಫ್ಲೋ ಆಗುವಾಗ ಪ್ರವೇಶ ಶುಲ್ಕ ಇರುವುದಿಲ್ಲ. ಎಕ್ಸಿಟ್ ಲೋಡ್ ಮಾತ್ರ ಕೆಲವೊಂದು ಸ್ಕೀಮ್‌ಗಳಲ್ಲಿ ಮುಂದುವರಿದಿದೆ.

ಎಕ್ಸಿಟ್ ಲೋಡ್ ಎಂದರೆ ನಿಗದಿತ ಅವಧಿಯ ಮೊದಲೇ ಹಣ ಹಿಂಪಡೆಯುವಾಗ ವಿಧಿಸುವ ಶುಲ್ಕ. ಸಾಮಾನ್ಯವಾಗಿ ಇದು 1 ವರ್ಷ ಅವಧಿಗೆ ಅನ್ವಯಿಸುತ್ತದೆ.

ಉದಾಹರಣೆಗೆ, 1% ಎಕ್ಸಿಟ್ ಲೋಡ್ ಇರುವ ಸ್ಕೀಮ್‌ನಲ್ಲಿ ನೀವು 1 ಲಕ್ಷ ರೂ ಹೂಡಿಕೆ ಮಾಡಿ 12 ತಿಂಗಳೊಳಗೆ ವಿತ್‌ಡ್ರಾ ಮಾಡಿದರೆ, ನಿಮಗೆ 1,000 ರೂಪಾಯಿ ಶುಲ್ಕ ಕಟ್ ಆಗುತ್ತದೆ.

ಹೀಗಾಗಿ, ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ ಕನಿಷ್ಠ ಒಂದು ವರ್ಷದ ಅವಧಿ ಪಾಲಿಸುವುದು, ಶುಲ್ಕ ತಪ್ಪಿಸುವ ಉತ್ತಮ ನಿರ್ಧಾರವಾಗಿದೆ.

ಇನ್ನು ಟ್ರಾನ್ಸಾಕ್ಷನ್ ಚಾರ್ಜ್ ಕೂಡ ಕೆಲವು ಸಂದರ್ಭಗಳಲ್ಲಿ ಅನ್ವಯಿಸುತ್ತದೆ.

10,000 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಲಂಪ್‌ಸಮ್ ಹೂಡಿಕೆ ಮಾಡಿರುವವರಿಗೆ ಈ ಶುಲ್ಕ ವಿಧಿಸಲಾಗುತ್ತದೆ.

ಸಾಮಾನ್ಯವಾಗಿ ಇದು 100 ರಿಂದ 150 ರೂಪಾಯಿವರೆಗೆ ಇರುತ್ತದೆ. 10,000 ರೂಪಾಯಿ ಒಳಗಿನ ಹೂಡಿಕೆಗಳಿಗೆ ಈ ಶುಲ್ಕ ವಸೂಲಿಯಾಗುವುದಿಲ್ಲ.

SIP (Systematic Investment Plan) ಮೂಲಕವೂ ಕೆಲವೊಮ್ಮೆ ಟ್ರಾನ್ಸಾಕ್ಷನ್ ಚಾರ್ಜ್ ಅನ್ವಯಿಸಬಹುದು, ಆದರೆ ಬಹುತೇಕ AMCಗಳು SIP ಹೂಡಿಕೆಗಳಿಗೆ ಈ ಶುಲ್ಕವನ್ನು ಮನ್ನಾ ಮಾಡಿರುತ್ತವೆ.

ಹೀಗೆ ಪ್ರತಿಯೊಂದು ಹೂಡಿಕೆಗೂ ಅನ್ವಯಿಸುವ ವೆಚ್ಚಗಳನ್ನು ತಿಳಿದುಕೊಂಡರೆ, ಹೂಡಿಕೆದಾರರು ತಮ್ಮ ಹೂಡಿಕೆ ತಂತ್ರವನ್ನು ಹೆಚ್ಚು ಲಾಭದಾಯಕವಾಗಿ ರೂಪಿಸಿಕೊಳ್ಳಬಹುದು.

ಮ್ಯೂಚುವಲ್ ಫಂಡ್‌ನಲ್ಲಿರುವ ಅತಿ ಪ್ರಮುಖ ಶುಲ್ಕ Expense Ratio (ಟೋಟಲ್ ಎಕ್ಸ್‌ಪೆನ್ಸ್ ರೇಶಿಯೋ – TER) ಆಗಿದೆ. ಇದು ವಾರ್ಷಿಕವಾಗಿ AMCಗಳು (Asset Management Companies) ಹೂಡಿಕೆದಾರರಿಂದ ವಸೂಲಿ ಮಾಡುವ ಮೊತ್ತ.

ಫಂಡ್ ಮ್ಯಾನೇಜರ್ ಫೀ, ಡಿಸ್ಟ್ರಿಬ್ಯೂಷನ್ ಕಮಿಷನ್, ಅಕೌಂಟಿಂಗ್, ಆಪರೇಷನಲ್ ವೆಚ್ಚ, ಟ್ರಸ್ಟಿ ಫೀ, ಮತ್ತು ಸರ್ವಿಸ್ ವೆಚ್ಚಗಳನ್ನು ಸೇರಿಸಿ TER ಗಣನೆ ಮಾಡಲಾಗುತ್ತದೆ.

ಹೆಚ್ಚು TER ಇರುವ ಫಂಡ್‌ನಲ್ಲಿ ನಿಮ್ಮ ಹೂಡಿಕೆ ಲಾಭದ ಒಂದು ಭಾಗ ಶುಲ್ಕಕ್ಕೆ ಹೋಗುತ್ತದೆ.

SEBI ಇದಕ್ಕಾಗಿ ಗರಿಷ್ಟ ಮಿತಿಯನ್ನು ನಿಗದಿ ಮಾಡಿದೆ — ಉದಾಹರಣೆಗೆ, 500 ಕೋಟಿ ರೂ ಗಾತ್ರದ ಈಕ್ವಿಟಿ ಫಂಡ್‌ಗೆ 2.25% ವರೆಗೆ TER ಇರಬಹುದು, ಆದರೆ ಫಂಡ್ ಗಾತ್ರ ಹೆಚ್ಚಾದಂತೆ TER ಶೇ.1.05 ರ ಮಟ್ಟಕ್ಕೆ ಇಳಿಯುತ್ತದೆ.

TER ನೇರವಾಗಿ NAVಗೆ ಅಡಕವಾಗಿರುವುದರಿಂದ ಹೂಡಿಕೆದಾರರಿಗೆ ಇದು ಬೇರೆ ಸೇರಿಸುವ ಶುಲ್ಕವಾಗಿ ಕಾಣುವುದಿಲ್ಲ.

ಆದರೂ, ಶೇ.1 ರ TER ಇದ್ದರೂ 1 ಲಕ್ಷ ರೂ ಹೂಡಿಕೆಗೆ ವರ್ಷಕ್ಕೆ 1,000 ರೂ AMCಗೆ ತೆರಬೇಕಾಗುತ್ತದೆ.

ಹೀಗಾಗಿ, ಕಡಿಮೆ ಎಕ್ಸ್‌ಪೆನ್ಸ್ ರೇಶಿಯೋ ಇರುವ ಫಂಡ್‌ಗಳನ್ನು ಆರಿಸುವುದು ದೀರ್ಘಾವಧಿಯ ಲಾಭಕ್ಕೆ ಸಹಾಯಕ.

ಮ್ಯೂಚುವಲ್ ಫಂಡ್‌ಗಳಲ್ಲಿ ಡೈರೆಕ್ಟ್ ಪ್ಲಾನ್ vs ರೆಗ್ಯುಲರ್ ಪ್ಲಾನ್ ಎಂಬ ಎರಡು ರೀತಿಯ ಹೂಡಿಕೆ ಮಾರ್ಗಗಳಿರುತ್ತವೆ.

ರೆಗ್ಯುಲರ್ ಪ್ಲಾನ್‌ಗಳಲ್ಲಿ ಡಿಸ್ಟ್ರಿಬ್ಯೂಟರ್‌ಗಳಿಗೆ ಅಥವಾ ಸಲಹೆಗಾರರಿಗೆ ನೀಡಲಾಗುವ ಕಮಿಷನ್‌ನಿಂದಾಗಿ TER ಹೆಚ್ಚು ಇರುತ್ತದೆ.

ಆದರೆ ಡೈರೆಕ್ಟ್ ಪ್ಲಾನ್‌ಗಳಲ್ಲಿ AMCಗಳಿಗೆ ನೇರವಾಗಿ ಹೂಡಿಕೆ ಮಾಡುವುದರಿಂದ ಮಧ್ಯವರ್ತಿಗಳಿಲ್ಲ, ಹೀಗಾಗಿ TER ಕಡಿಮೆ.

ಉದಾಹರಣೆಗೆ, ಡೈರೆಕ್ಟ್ ಪ್ಲಾನ್ 12% CAGR ನೀಡಿದರೆ, ಅದೇ ಸ್ಕೀಮ್‌ನ ರೆಗ್ಯುಲರ್ ಪ್ಲಾನ್ 11% ಮಾತ್ರ ನೀಡಿಬಹುದು. ದೀರ್ಘಾವಧಿಯಲ್ಲಿ ಇದು ದೊಡ್ಡ ವ್ಯತ್ಯಾಸವನ್ನು ಸೃಷ್ಟಿಸುತ್ತದೆ.

ಹೀಗಾಗಿ, ಹೂಡಿಕೆ ಮಾಡಲು ಸ್ವಯಂ ಅಧ್ಯಯನ ಮತ್ತು ಸ್ವತಂತ್ರ ನಿರ್ಧಾರಗಳ ಸಾಮರ್ಥ್ಯವಿದ್ದರೆ ಡೈರೆಕ್ಟ್ ಪ್ಲಾನ್ ಉತ್ತಮ. ಆದರೆ, ಆರಂಭಿಕರಿಗೆ ರೆಗ್ಯುಲರ್ ಪ್ಲಾನ್ ಸೂಕ್ತ ನೆರವು ನೀಡುತ್ತದೆ.

ಇದನ್ನು ಓದಿ : ಜಪಾನ್‌ನಲ್ಲಿ 24 ಗಂಟೆಗಳಲ್ಲಿ 5 ಬಾರಿ ಕಂಪಿಸಿದ ಭೂಮಿ: 6.7 ತೀವ್ರತೆಯ ಭೂಕಂಪ, ಜನರಲ್ಲಿ ಹೆಚ್ಚಿದ ಆತಂಕ
Tags: feesfinancemutualfundsscheme

Related News

ಪ್ರಪಂಚದಲ್ಲಿ ಸೆಕೆಂಡ್‌, ದೇಶದಲ್ಲಿ ಮೊದಲು: ಅತೀ ಹೆಚ್ಚು ಟ್ರಾಫಿಕ್ ಹೊಂದಿರುವ ನಗರ ಎಂದು ಕುಖ್ಯಾತಿಗೆ ಪಾತ್ರವಾದ ಬೆಂಗಳೂರು
ಪ್ರಮುಖ ಸುದ್ದಿ

ಪ್ರಪಂಚದಲ್ಲಿ ಸೆಕೆಂಡ್‌, ದೇಶದಲ್ಲಿ ಮೊದಲು: ಅತೀ ಹೆಚ್ಚು ಟ್ರಾಫಿಕ್ ಹೊಂದಿರುವ ನಗರ ಎಂದು ಕುಖ್ಯಾತಿಗೆ ಪಾತ್ರವಾದ ಬೆಂಗಳೂರು

January 22, 2026
ಗಣರಾಜೋತ್ಸವ ಹಿನ್ನೆಲೆ ದೆಹಲಿಯಲ್ಲಿ ಹೈಅಲರ್ಟ್‌ : ಅಪರಾಧಿಗಳ ಸುಳಿವು ಪತ್ತೆಗಾಗಿ ಪೊಲೀಸರಿಗೆ ಫೇಶಿಯಲ್ ರೆಕಗ್ನಿಷನ್, AI ಸ್ಮಾರ್ಟ್ ಕನ್ನಡಕ, ಆಂಟಿ-ಡ್ರೋನ್ ಯೂನಿಟ್‌
ದೇಶ-ವಿದೇಶ

ಗಣರಾಜೋತ್ಸವ ಹಿನ್ನೆಲೆ ದೆಹಲಿಯಲ್ಲಿ ಹೈಅಲರ್ಟ್‌ : ಅಪರಾಧಿಗಳ ಸುಳಿವು ಪತ್ತೆಗಾಗಿ ಪೊಲೀಸರಿಗೆ ಫೇಶಿಯಲ್ ರೆಕಗ್ನಿಷನ್, AI ಸ್ಮಾರ್ಟ್ ಕನ್ನಡಕ, ಆಂಟಿ-ಡ್ರೋನ್ ಯೂನಿಟ್‌

January 22, 2026
SBIನಲ್ಲಿ ಉಚಿತ ಸೇವೆ ಬಂದ್: ಫೆಬ್ರವರಿ 15 ರಿಂದ ಹಣ ವರ್ಗಾವಣೆಗೆ ಶುಲ್ಕ ಮತ್ತು ಜಿಎಸ್‌ಟಿ ಅನ್ವಯ
ಪ್ರಮುಖ ಸುದ್ದಿ

SBIನಲ್ಲಿ ಉಚಿತ ಸೇವೆ ಬಂದ್: ಫೆಬ್ರವರಿ 15 ರಿಂದ ಹಣ ವರ್ಗಾವಣೆಗೆ ಶುಲ್ಕ ಮತ್ತು ಜಿಎಸ್‌ಟಿ ಅನ್ವಯ

January 22, 2026
ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಯು – ಟರ್ನ್ ಹೊಡೆದ ಟ್ರಂಪ್: ಯುರೋಪಿನ 8 ರಾಷ್ಟ್ರಗಳ ಮೇಲೆ ಶೇ.10ರಷ್ಟು ಸುಂಕ ಹೇರಿಕೆ ಹಿಂಪಡೆಯಲು ನಿರ್ಧಾರ
ದೇಶ-ವಿದೇಶ

ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಯು – ಟರ್ನ್ ಹೊಡೆದ ಟ್ರಂಪ್: ಯುರೋಪಿನ 8 ರಾಷ್ಟ್ರಗಳ ಮೇಲೆ ಶೇ.10ರಷ್ಟು ಸುಂಕ ಹೇರಿಕೆ ಹಿಂಪಡೆಯಲು ನಿರ್ಧಾರ

January 22, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.