Cricket : ಪಾಕಿಸ್ತಾನದ(Pakistan) ಮಾಜಿ ನಾಯಕ ಮತ್ತು ವಿಶ್ವದ ಅತ್ಯಂತ ಡೆಂಜರಸ್ ಆಲ್ರೌಂಡರ್ಗಳಲ್ಲಿ ಒಬ್ಬರಾದ ಶಾಹಿದ್ ಅಫ್ರಿದಿ(Shahid Afridi) ವಿವಾದಗಳಿಗೆ ಹೆಚ್ಚು ಹೆಸರುವಾಸಿ. ಗೌತಮ್ ಗಂಭೀರ್(Gowtham Gambir) ಮತ್ತು ಇತರ ಭಾರತೀಯ ಕ್ರಿಕೆಟಿಗರೊಂದಿಗೆ ಅವರ ನೇರ ಹಣಾಹಣಿ ಕ್ರಿಕೆಟ್ ಪ್ರಿಯರಿಗೆ ಚಿರಪರಿಚಿತ.

ಶಾಯಿದ್ ಅಫ್ರಿದಿ ಅವರ ಹಲವು ವೀಡಿಯೊಗಳು(Videos) ಸಾಮಾಜಿಕ ಜಾಲತಾಣದಲ್ಲಿ(Social Media) ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇದೇ ರೀತಿ ಸದಾ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಇರುವ ಶಾಯಿದ್ ಅಫ್ರಿದಿ ಸದ್ಯ ಪ್ರತಿಯೊಬ್ಬರೂ ಅಚ್ಚರಿ ಪಡುವಂತ ಕಮೆಂಟ್ ಮಾಡಿದ್ದರೆ, ಅದೇನೆಂದು ತಿಳಿಯುವುದಾದರೆ ಹೀಗಿದೆ.
ವಿಶೇಷವಾಗಿ ಕಳೆದ ವಾರ ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ 2022ರ ಪಂದ್ಯದಲ್ಲಿ ಪಾಕಿಸ್ತಾನದ ಧ್ವಜ ಹಾರಿಸುವಾಗ ನನ್ನ ಮಗಳು ಭಾರತದ ಧ್ವಜವನ್ನು ಬೀಸುತ್ತಿದ್ದಳು ಎಂದು ಆಫ್ರಿದಿ ಬಹಿರಂಗಪಡಿಸಿದ್ದಾರೆ. ಪಾಕಿಸ್ತಾನದ ಟೆಲಿವಿಷನ್ ಚಾನೆಲ್ನಲ್ಲಿ ಮಾತನಾಡಿದ ಶಾಹಿದ್ ಅಫ್ರಿದಿ,
https://vijayatimes.com/high-alert-on-gyanvapi-case-verdict/

ಸ್ಟೇಡಿಯಂನಲ್ಲಿ ಕೇವಲ 10 ಪ್ರತಿಶತದಷ್ಟು ಪಾಕಿಸ್ತಾನಿ ಅಭಿಮಾನಿಗಳಿದ್ದರೆ, ಶೇಕಡಾ 90 ರಷ್ಟು ಅಭಿಮಾನಿಗಳು ಭಾರತದವರು ಎಂದು ಹೇಳಿದರು. ಅಲ್ಲಿ ಹೆಚ್ಚು ಭಾರತೀಯ ಅಭಿಮಾನಿಗಳಿದ್ದರು ಎಂದು ತಿಳಿದು ಬಂದಿದೆ ಎಂದು ಸಾಮಾ ಟಿವಿಯಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
https://twitter.com/nomanedits/status/1566827073397727233?s=20&t=JY5wtaUkCPWWP7vrVr1y2g
ಭಾರತ-ಪಾಕ್ ಪಂದ್ಯದ ವೇಳೆ ನನ್ನ ಮಗಳು ಭಾರತದ ಧ್ವಜವನ್ನು ಬೀಸುತ್ತಿದ್ದಳು ಎಂದು ಶಾಹಿದ್ ಅಫ್ರಿದಿ ಹೇಳಿಕೊಂಡಿದ್ದಾರೆ. ಪಾಕಿಸ್ತಾನದ ಗೆಲುವಿನ ನಂತರ, ಅಫ್ರಿದಿ ಅವರು ಬಾಬರ್ ಅಜಮ್ ಅವರನ್ನು ಅಭಿನಂದಿಸಿದ್ದಾರೆ ಮತ್ತು ಉಭಯ ದೇಶಗಳ ನಡುವಿನ ಪಂದ್ಯಗಳನ್ನು “ಶ್ರೇಷ್ಠ ಕ್ರೀಡಾಕೂಟ” ಎಂದು ಬಣ್ಣಿಸಿದ್ದಾರೆ.
Source : NDTV