Coimbatore : ಕೊಯಮತ್ತೂರು ಕಾರ್ ಸ್ಫೋಟ(Car Blast) ಪ್ರಕರಣದಲ್ಲಿ ಬಳಸಲಾದ ಕಾರನ್ನು ಮಾರಾಟ ಮಾಡಿದ ವ್ಯಕ್ತಿ ಮೊಹಮ್ಮದ್ದಲ್ಕಾ ಅವರ ತಾಯಿ, ತನ್ನ ಮಗನಿಗೂ ಅಪರಾಧಕ್ಕೂ ಯಾವುದೇ ಸಂಬಂಧವಿಲ್ಲ (My son is not the culprit) ಮತ್ತು ಅವನನ್ನು ಭಯೋತ್ಪಾದಕನಂತೆ ಚಿತ್ರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಮಾತನಾಡಿರುವ ಆರೋಪಿಯ ತಾಯಿ, “ತನ್ನ ಮಗ ದಲ್ಕಾ, ಕಾರನ್ನು ಬೇರೆ ಗ್ರಾಹಕರಿಗೆ ಮಾರಾಟ ಮಾಡುವಂತೆ ಮೃತ ವ್ಯಕ್ತಿ ಮುಬಿನ್ಗೂ(My son is not the culprit) ಮಾರಾಟ ಮಾಡಿದ್ದಾನೆ.
ಹೀಗಾಗಿ ಸ್ಫೋಟಕ್ಕೂ, ಆತನಿಗೂ ಯಾವುದೇ ಸಂಬಂಧವಿಲ್ಲ. ನನ್ನ ಮಗ ಕಮಿಷನ್ಗಾಗಿ ಕಾರು ಮಾರಾಟ ಮಾಡಿದ್ದಾನೆ ಎಂದು ಆರೋಪಿಯ ತಾಯಿ ಹಫ್ಸತ್ ಬೀವಿ ಹೇಳಿದ್ದಾರೆ.
ಇದನ್ನೂ ಓದಿ : https://vijayatimes.com/pocso-overrides-personal-law/
ಇನ್ನು ಅಕ್ಟೋಬರ್ 23ರ ಭಾನುವಾರದಂದು ಸಂಭವಿಸಿದ ಕಾರ್ ಸಿಲಿಂಡರ್ ಸ್ಫೋಟವು ತನಿಖೆಯಿಂದ ಶಂಕಿತ ಭಯೋತ್ಪಾದನೆಯ ಸಂಚಿಗೆ ತಿರುಗಿತು.
ತೀವ್ರ ತನಿಖೆ ನಡೆಸಿದ ಕೇರಳ ಪೊಲೀಸರು(Kerala Police), ಮುಬೀನ್ ನಿವಾಸದ ಬಳಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಅಜರುದ್ದೀನ್, ಫಿರೋಜ್, ನವಾಜ್ ಮತ್ತು ರಿಯಾಜ್ರನ್ನು ಬಂಧಿಸಿದ್ದಾರೆ.
ನಂತರ ಸೆಕೆಂಡ್ ಹ್ಯಾಂಡ್ ವಾಹನ ಮತ್ತು ಸ್ಕ್ರ್ಯಾಪ್ ಡೀಲರ್ ಆಗಿರುವ ದಲ್ಕಾ ಅವರು ಮುಬಿನ್ಗೆ ಕಾರು ಮಾರಾಟ ಮಾಡಿದ್ದರಿಂದ ಮೊಹಮ್ಮದ್ ದಲ್ಕಾ ಅವರನ್ನು ಬಂಧಿಸಲಾಯಿತು.
ನಂತರ, ಆನ್ಲೈನ್ ಸ್ಟೋರ್ಗಳ ಮೂಲಕ ಸ್ಫೋಟಕ್ಕೆ ಬಳಸಿದ ವಸ್ತುಗಳನ್ನು ಖರೀದಿಸಲು ಮುಬೀನ್ಗೆ ಸಹಾಯ ಮಾಡಿದ್ದಕ್ಕಾಗಿ ಮುಬೀನ್ನ ಸಂಬಂಧಿ ಅಫ್ಜರ್ ಖಾನ್ ನನ್ನು ಬಂಧಿಸಲಾಯಿತು.

ಮುಬೀನ್ ಅವರ ನಿವಾಸದಿಂದ ನೈಟ್ರೋ-ಗ್ಲಿಸರಿನ್, ಪಿಇಟಿಎನ್ ಪೌಡರ್, ಕಪ್ಪು ಪುಡಿ, ಗಂಧಕ, ಪೊಟ್ಯಾಸಿಯಮ್ ನೈಟ್ರೇಟ್, ಅಲ್ಯೂಮಿನಿಯಂ ಪೌಡರ್, ಫ್ಯೂಸ್ ಮತ್ತು ಕೆಂಪು ರಂಜಕ ಸೇರಿದಂತೆ 109 ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಇಡೀ ಸಂಚಿನಲ್ಲಿ ಮುಬೀನ್ಗೆ ಸಹಾಯ ಮಾಡಿರುವ ಆರೋಪವನ್ನು ಮೊಹಮ್ಮದ್ ದಲ್ಕಾ ಮೇಲೆ ಹೊರಿಸಲಾಗಿದೆ.
https://youtu.be/kY6kuAgq0Cg ಸಾಲು-ಸಾಲು ಸಮಸ್ಯೆಗಳ ಊರು!
ಇಬ್ಬರು ನಿರ್ದಿಷ್ಟ ಕಾರ್ಯಸೂಚಿಯನ್ನು ಹೊಂದಿದ್ದರು. ಹೀಗಾಗಿ ದಲ್ಕಾ ಅನೇಕ ರೀತಿಯ ಸಹಾಯವನ್ನು ಮುಬೀನ್ಗೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ತನ್ನ ಮಗನ ಮೇಲೆ ಪೊಲೀಸರು ಹೊರಿಸಿರುವ ಆರೋಪಗಳು ಸುಳ್ಳು, ಆತನನ್ನು ಪೊಲೀಸರು ಬಲಿಪಶು ಮಾಡುತ್ತಿದ್ದಾರೆ ಎಂದು ಮೊಹಮ್ಮದ್ ದಲ್ಕಾ ತಾಯಿ ಹಫ್ಸತ್ ಬೀವಿ ಆರೋಪಿಸಿದ್ದಾರೆ.
- ಮಹೇಶ್.ಪಿ.ಎಚ್