Ambari, Gold card rate hike: Dussehra will be expensive for common people
Mysore: ಮೈಸೂರು ದಸರಾ (Mysore Dussehra) ಎಷ್ಟೊಂದು ಸುಂದರ ಎನ್ನುತ್ತಾ ದೇಶ ವಿದೇಶಗಳಿಂದ ಲಕ್ಷಾಂತರ ಜನರು ದಸರಾ ಸಂಭ್ರಮವನ್ನು ಕಣ್ತುಂಬಿ ಕೊಳ್ಳಲು ಮೈಸೂರಿಗೆ ಆಗಮಿಸುತ್ತಾರೆ. ಈ ಬಾರಿ ಸರಕಾರ ದಸರಾ ಮಹೋತ್ಸವಕ್ಕೆ ಭಾರಿ ಅನುದಾನ ಘೋಷಿಸಿದ್ದರೂ ಜಿಲ್ಲಾಡಳಿತ ಡಬಲ್ ಡೆಕ್ಕರ್ ಬಸ್, ಗೋಲ್ಡ್ ಕಾರ್ಡ್ ಟಿಕೆಟ್ (Gold Card Ticket) ದರ ಏರಿಕೆ ಮಾಡಿರುಧಿವುದು, ಯುವ ದಸರೆಗೆ ಟಿಕೆಟ್ ಮಾಡಿರುವುದು ಜನರಲ್ಲಿ ಅಸಮಾಧಾನವನ್ನುಂಟು ಮಾಡಿದೆ. ಇದರಿಂದ ನಾನಾ ಮನೋರಂಜನಾ ಕಾರ್ಯಕ್ರಮಗಳಿಂದ ಜನಸಾಮಾನ್ಯರು ದೂರ ಉಳಿಯುವ ಸಾಧ್ಯತೆ ಹೆಚ್ಚಿದೆ.
ಅಕ್ಟೋಬರ್ (October). 3 ರಿಂದ 12 ರವರೆಗೆ ದಸರಾ ಸಂಭ್ರಮ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಳೆಗಟ್ಟಲಿದೆ. ಈ ಬಾರಿ ರಾಜ್ಯದಲ್ಲಿ ಮಳೆ, ಬೆಳೆ ಉತ್ತಮವಾಗಿರುವುದರಿಂದ ನಾಡಹಬ್ಬ ದಸರೆಯನ್ನು ಅದ್ಧೂರಿಯಾಗಿ ಆಚರಿಸಲು ಸರ್ಕಾರ ತೀರ್ಮಾನಿಸಿದೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) 40 ಕೋಟಿ ರೂ. ಅನುದಾನ ನೀಡಲಾಗುವುದೆಂದು ಈಗಾಗಲೇ ಘೋಷಣೆ ಮಾಡಿದ್ದಾರೆ. ಆದರೂ ಜನಾಕರ್ಷಣೆ ಕಾರ್ಯಕ್ರಮವಾದ ‘ಯುವ ದಸರೆ’ಗೆ ಇದೇ ಮೊದಲ ಬಾರಿಗೆ ಟಿಕೆಟ್ ವ್ಯವಸ್ಥೆ ಮಾಡಿ ಹಣ ಪಾವತಿಸಿಸಲು ಕರೆ ನೀಡಲಾಗಿದೆ.
ಅದರಲ್ಲೂ ಲಕ್ಷಕ್ಕೂ ಹೆಚ್ಚು ಮಂದಿ ಸೇರುವ ಕಾರ್ಯಕ್ರಮಕ್ಕೆ ಟಿಕೆಟ್ ಬಿಸಿ ತಟ್ಟಿದೆ. ವೇದಿಕೆ ಮುಂಭಾಗದ ಗ್ಯಾಲರಿ 1ರಲ್ಲಿ ಕುಳಿತು ಯುವದಸರೆ ನೋಡಲು 8 ಸಾವಿರ ರೂ. ದರ ನಿಗದಿಪಡಿಸಲಾಗಿದೆ. ಅದೇ ರೀತಿ ಗ್ಯಾಲರಿ (Gallery) 2 ರಲ್ಲಿ ಕುಳಿತು ವೀಕ್ಷಿಸಲು 5 ಸಾವಿರ ರೂ. ದರವಿದೆ. ಜತೆಗೆ 2500, 1500 ರೂ. ಹೀಗೆ ಒಂದೊಂದು ಗ್ಯಾಲರಿಯ ಒಂದೊಂದು ಸೀಟ್ ಗೆ ಪ್ರತ್ಯೇಕ ದರವನ್ನೂ ನಿಗದಿಪಡಿಸಲಾಗಿದೆ.
ಇನ್ನು ದಸರಾದ ಪ್ರಮುಖ ಆಕರ್ಷಣೆಯಾದ ಡಬಲ್ ಡೆಕ್ಕರ್ ಬಸ್ನಲ್ಲಿ(Double Dekker Bus) ಮೇಲಿನ ಆಸನದ ಮೂಲಕ ನಗರದ ದೀಪಾಲಂಕಾರ ಸೊಬಗನ್ನು ಕಣ್ತುಂಬಿಕೊಳ್ಳಲು 350 ರೂ. (ಒಬ್ಬರಿಗೆ) ಇದ್ದ ಟಿಕೆಟ್ ದರವನ್ನು ಈ ಸಲದಿಂದ 500 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಕೆಳಗಿನ ಆಸನಕ್ಕೆ 150ರೂ ಇದ್ದುದನ್ನು 250 ರೂಪಾಯಿಗಳಿಗೆ ಏರಿಸಲಾಗಿದೆ. ಹಾಗಾಗಿ ಈ ಸಲ ಕುಟುಂಬ ಸಮೇತ ದಸರಾ ಸಂಭ್ರಮಕಣ್ತುಂಬಿಕೊಳ್ಳೋಣ ಎಂದು ಬಂದರೆ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿ.