• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಮೈಸೂರು ದಸರಾ ಸಂಭ್ರಮದಲ್ಲಿ ನಡೆದ ಪೈಶಾಚಿಕ ಕೃತ್ಯ: ಬಲೂನ್ ಮಾರುತ್ತಿದ್ದ ಬಾಲಕಿಯ ಮೇಲೆ ಅ*ಚಾರವೆಸಗಿದ ಆರೋಪಿಗೆ ಪೊಲೀಸರ ಗುಂಡೇಟು

Shwetha Mohan by Shwetha Mohan
in ಪ್ರಮುಖ ಸುದ್ದಿ, ಮಾಹಿತಿ, ರಾಜ್ಯ, ವಿಜಯ ಟೈಮ್ಸ್‌
ಮೈಸೂರು ದಸರಾ ಸಂಭ್ರಮದಲ್ಲಿ ನಡೆದ ಪೈಶಾಚಿಕ ಕೃತ್ಯ: ಬಲೂನ್ ಮಾರುತ್ತಿದ್ದ ಬಾಲಕಿಯ ಮೇಲೆ ಅ*ಚಾರವೆಸಗಿದ ಆರೋಪಿಗೆ ಪೊಲೀಸರ ಗುಂಡೇಟು
0
SHARES
42
VIEWS
Share on FacebookShare on Twitter
  • ಮೈಸೂರಿನಲ್ಲಿ ದಸರಾ ವೇಳೆ ನಡೆದ ಕ್ರೂರ ಕೃತ್ಯ ಬಲೂನ್ ಮಾರಾಟ ಮಾಡುತ್ತಿದ್ದ ಬಾಲಕಿಯ ಹ* ಆರೋಪಿ ಬಂಧನ
  • ಸಿಸಿಟಿವಿ ಆಧಾರದಲ್ಲಿ ಪತ್ತೆಯಾದ ಆರೋಪಿ ಕಾರ್ತಿಕ್ ಕಾಲಿಗೆ ಗುಂಡೇಟು ಹೊಡೆದು ಬಂಧಿಸಿದ ಪೊಲೀಸರು
  • ಕಠಿಣ ಶಿಕ್ಷೆ ನೀಡುವಂತೆ ಸ್ಥಳೀಯರ ಮತ್ತು ಜನರ ಮನವಿ

Mysore: ಸಂಭ್ರಮದ ಮೈಸೂರು ದಸರಾ ಹಬ್ಬದ ಮಧ್ಯೆ ನಡೆದ ಒಂದು ಪೈಶಾಚಿಕ ಘಟನೆ ರಾಜ್ಯದ ಜನಮನವನ್ನು ಕಲುಕಿದೆ. ಹೊಟ್ಟೆಪಾಡಿಗಾಗಿ ಬಲೂನ್ ಮಾರಾಟ ಮಾಡಲು

ಕುಟುಂಬದೊಂದಿಗೆ ಬಂದಿದ್ದ 10 ವರ್ಷದ ಬಾಲಕಿಯ ಮೇಲೆ ಕ್ರೂರ ಅ*ಚಾರ ಎಸಗಿ ಕೊಲೆ ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಈ ಪ್ರಕರಣದ ಆರೋಪಿ ಕಾರ್ತಿಕ್‌ನ್ನು ಪೊಲೀಸರು ಬಂಧಿಸಿ,

ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕಾಲಿಗೆ ಗುಂಡೇಟು ಹೊಡೆದಿದ್ದಾರೆ. ದಸರಾ ಹಬ್ಬದ ಸಂಭ್ರಮಕ್ಕಾಗಿ ಕಲಬುರಗಿ ಕಡೆಯಿಂದ ಹಕ್ಕಿಪಿಕ್ಕಿ ಜನಾಂಗದ ಸುಮಾರು 50 ಕುಟುಂಬಗಳು ಮೈಸೂರಿಗೆ ಬಂದಿದ್ದವು.

ಇವರು ಅರಮನೆ ಎದುರಿನ ದೊಡ್ಡಕೆರೆ ಮೈದಾನದ ಬಳಿ ಬಲೂನ್ ಮಾರಾಟಕ್ಕಾಗಿ ತಾತ್ಕಾಲಿಕ ಟೆಂಟ್‌ಗಳಲ್ಲಿ ವಾಸಿಸುತ್ತಿದ್ದರು. ಬುಧವಾರ ರಾತ್ರಿ ವ್ಯಾಪಾರ ಮುಗಿಸಿ ಮಲಗಿದ್ದ ಕುಟುಂಬದ 10 ವರ್ಷದ

ಮಗಳು ಗುರುವಾರ ಬೆಳಗ್ಗೆ ಕಾಣೆಯಾಗಿದ್ದಳು.ತಂದೆತಾಯಿ ಹುಡುಕಾಟ ನಡೆಸಿದಾಗ, ಟೆಂಟ್‌ನಿಂದ ಕೇವಲ 50 ಮೀಟರ್ ದೂರದಲ್ಲಿರುವ ಮಣ್ಣಿನ ಗುಡ್ಡದ ಬಳಿ ಬಾಲಕಿಯ ಶ* ಪತ್ತೆಯಾಯಿತು.

Mysore girl murder case
ಶ*ದ ಮೇಲೆ ಬಟ್ಟೆ ಇರದ ಕಾರಣ ಅತ್ಯಾಚಾರದ ಶಂಕೆ ವ್ಯಕ್ತವಾಗಿತ್ತು.

ನಂತರದಲ್ಲಿ ಪೊಲೀಸರು ತಕ್ಷಣ ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸಿ ಕಾರ್ತಿಕ್ ಎಂಬ ಯುವಕ ಈ ಕೃತ್ಯ ಎಸಗಿದ್ದಾನೆಂಬುದು ಪತ್ತೆಯಾಯಿತು. ಕಾರ್ತಿಕ್ ಮೈಸೂರಿನ ಸಿದ್ದಲಿಂಗಪುರದ ನಿವಾಸಿ.

ಹಿಂದೆ ಮಂಡ್ಯದಲ್ಲಿ ಮಹಿಳೆಯೊಬ್ಬರ ಮೇಲೆ ಅ*ಚಾರ ಯತ್ನದ ಪ್ರಕರಣದಲ್ಲೂ ಬಂಧನಕ್ಕೊಳಗಾಗಿದ್ದನು. ಆ ಪ್ರಕರಣದಲ್ಲಿ ಎರಡು ವರ್ಷ ಶಿಕ್ಷೆ ಅನುಭವಿಸಿ ನಾಲ್ಕು ತಿಂಗಳ ಹಿಂದಷ್ಟೇ ಜೈಲಿನಿಂದ ಹೊರ ಬಂದಿದ್ದ.

ಇನ್ನು ಬಿಡುಗಡೆಯಾದ ನಂತರ ಊರಿಗೆ ಹಿಂದಿರುಗದೆ ಮದ್ಯಪಾನದಲ್ಲಿ ಅಲೆದಾಡುತ್ತಿದ್ದ ಕಾರ್ತಿಕ್, ಹಕ್ಕಿಪಿಕ್ಕಿ ಜನಾಂಗದ ಟೆಂಟ್‌ಗಳ ಬಳಿ ಸಂಚರಿಸುತ್ತಿದ್ದ.

ಬಾಲಕಿಯು ಮಲಗಿದ್ದ ವೇಳೆ ಆಕೆಯನ್ನು ಎತ್ತಿಕೊಂಡು ಹೋಗಿ ಅ*ಚಾರ ಎಸಗಿ ಕೊಲೆ ಮಾಡಿದ್ದಾನೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಘಟನೆಯ ನಂತರ ಕಾರ್ತಿಕ್ ಮೈಸೂರು ಬಸ್ ನಿಲ್ದಾಣದಿಂದ ಕೊಳ್ಳೇಗಾಲದತ್ತ ಪರಾರಿಯಾಗಿದ್ದ. ಪೊಲೀಸರು ಶೋಧ ತೀವ್ರಗೊಳಿಸಿ ಕೊಳ್ಳೇಗಾಲದಲ್ಲಿ ಅವನನ್ನು ಪತ್ತೆ ಹಚ್ಚಿದರು.

ಬಂಧಿಸುವ ವೇಳೆ ಆತ ಕಾನ್ಸ್‌ಟೇಬಲ್ ವೆಂಕಟೇಶ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ, ಸಬ್ ಇನ್ಸ್‌ಪೆಕ್ಟರ್ ಜೈಕೀರ್ತಿ ಎಚ್ಚರಿಕೆಯ ಗುಂಡು ಹಾರಿಸಿದರು.

ಗುಂಡು ಕಾರ್ತಿಕ್ ಕಾಲಿಗೆ ಬಿದ್ದು ಆತ ನೆಲಕ್ಕೆ ಬಿದ್ದನು. ತಕ್ಷಣವೇ ಪೊಲೀಸರು ಆರೋಪಿಯನ್ನು ಬಂಧಿಸಿ ಕೆ.ಆರ್ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಆಸ್ಪತ್ರೆಗೆ

ಭೇಟಿ ನೀಡಿ ಸ್ಥಿತಿ ಪರಿಶೀಲಿಸಿ ಇಂತಹ ಪೈಶಾಚಿಕ ಕೃತ್ಯ ಎಸಗುವವರಿಗೆ ಯಾವುದೇ ದಯೆ ತೋರಲಾಗುವುದಿಲ್ಲ. ಕಾನೂನು ಪ್ರಕಾರ ಗರಿಷ್ಠ ಶಿಕ್ಷೆ ವಿಧಿಸಲಾಗುತ್ತದೆ ಎಂದಿದ್ದಾರೆ.

ಇನ್ನು ಈ ದುರ್ಘಟನೆ ರಾಜ್ಯದಾದ್ಯಂತ ಆಕ್ರೋಶ ಮೂಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು ಕಠಿಣ ಶಿಕ್ಷೆಗೆ ಆಗ್ರಹಿಸುತ್ತಿದ್ದಾರೆ. ಕೆಲವರು ಗಲ್ಲು ಶಿಕ್ಷೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದರೆ,

ಇನ್ನು ಕೆಲವರು ಪೊಲೀಸರು ಕೈಗೊಂಡ ತ್ವರಿತ ಕ್ರಮವನ್ನು ಶ್ಲಾಘಿಸುತ್ತಿದ್ದಾರೆ. ಸ್ಥಳೀಯರು ಹೇಳುವಂತೆ,ಹಬ್ಬದ ವೇಳೆ ಸಾವಿರಾರು ಜನರು ಮೈಸೂರಿಗೆ ಬರುತ್ತಾರೆ.

ಇದನ್ನು ಓದಿ : ಮಧ್ಯಪ್ರದೇಶದಲ್ಲಿ ಕೆಮ್ಮಿನ ಸಿರಪ್‌ ಸೇವಿಸಿದ 6 ಮಕ್ಕಳು ಮೂತ್ರಪಿಂಡ ವೈಫಲ್ಯದಿಂದ ಸಾ*: ಸಾ*ನ ಸಂಖ್ಯೆ 20ಕ್ಕೆ ಏರಿಕೆ

ಇಂತಹ ಸಂದರ್ಭಗಳಲ್ಲಿ ಮಕ್ಕಳ ಸುರಕ್ಷತೆಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.

Tags: murder caseMysoremysore dasaraPolice CommissionerSeema LatkarSub-Inspector Jaikeerthi

Related News

ಆಸ್ಪತ್ರೆ ಬಿಲ್‌ನಲ್ಲಿ ಔಷಧಗಳ ಖರೀದಿ ಬೆಲೆ, ಎಂಆರ್‌ಪಿ ನಮೂದು ಕಡ್ಡಾಯ: ಕರ್ನಾಟಕ ಸರ್ಕಾರದಿಂದ ಮಹತ್ವದ ಆದೇಶ
ಪ್ರಮುಖ ಸುದ್ದಿ

ಆಸ್ಪತ್ರೆ ಬಿಲ್‌ನಲ್ಲಿ ಔಷಧಗಳ ಖರೀದಿ ಬೆಲೆ, ಎಂಆರ್‌ಪಿ ನಮೂದು ಕಡ್ಡಾಯ: ಕರ್ನಾಟಕ ಸರ್ಕಾರದಿಂದ ಮಹತ್ವದ ಆದೇಶ

October 10, 2026
ಲ್ಯಾಪ್‌ಟಾಪ್ ಬಳಸಿ ಬೆನ್ನುನೋವು ಬಂದಿದೆಯಾ? ಈ 7 ಸಲಹೆಗಳನ್ನು ಪಾಲಿಸಿ
ಆರೋಗ್ಯ

ಲ್ಯಾಪ್‌ಟಾಪ್ ಬಳಸಿ ಬೆನ್ನುನೋವು ಬಂದಿದೆಯಾ? ಈ 7 ಸಲಹೆಗಳನ್ನು ಪಾಲಿಸಿ

October 10, 2026
ಮಹಿಳೆಯರ ಮೇಲ್ತುಟಿಯಲ್ಲಿ ಕೂದಲು ಬೆಳೆಯೋದು ಯಾಕೆ? ಶಾಶ್ವತ ಪರಿಹಾರ ಇದೆಯಾ?
ಆರೋಗ್ಯ

ಮಹಿಳೆಯರ ಮೇಲ್ತುಟಿಯಲ್ಲಿ ಕೂದಲು ಬೆಳೆಯೋದು ಯಾಕೆ? ಶಾಶ್ವತ ಪರಿಹಾರ ಇದೆಯಾ?

October 10, 2026
ರಷ್ಯಾದ ತೈಲ ಖರೀದಿಗೆ ವಿರೋಧಿಸಿದ್ದ ಟ್ರಂಪ್ ಈಗ ಅದೇ ದೇಶದೊಂದಿಗೆ ಡೀಸೆಲ್ ಖರೀದಿಗೆ ಒಪ್ಪಂದ: ಅಮೆರಿಕದ ನಿರ್ಧಾರಕ್ಕೆ ಜಾಗತಿಕ ಮಟ್ಟದಲ್ಲಿ ಚರ್ಚೆ
ದೇಶ-ವಿದೇಶ

ರಷ್ಯಾದ ತೈಲ ಖರೀದಿಗೆ ವಿರೋಧಿಸಿದ್ದ ಟ್ರಂಪ್ ಈಗ ಅದೇ ದೇಶದೊಂದಿಗೆ ಡೀಸೆಲ್ ಖರೀದಿಗೆ ಒಪ್ಪಂದ: ಅಮೆರಿಕದ ನಿರ್ಧಾರಕ್ಕೆ ಜಾಗತಿಕ ಮಟ್ಟದಲ್ಲಿ ಚರ್ಚೆ

October 10, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.