ರಾಮೇಶ್ವರ ಒಂದು ಪುಣ್ಯಕ್ಷೇತ್ರ, ರಾಮೇಶ್ವರದ ಅಕ್ಕಪಕ್ಕದಲ್ಲಿರುವ ಒಂಬತ್ತು ಪವಿತ್ರ ತೀರ್ಥಗಳಲ್ಲಿ ಜಡಾ ತೀರ್ಥವೂ ಒಂದು. ಈ ತೀರ್ಥದಲ್ಲಿ ಸ್ನಾನ ಮಾಡಿದರೆ(mystery about ramayana) ಸಾಕು ಪಾಪಗಳೆಲ್ಲಾ ಪರಿಹಾರವಾಗಿ, ಗೊಂದಲಗಳೆಲ್ಲಾ ದೂರವಾಗಿ, ಮನಸ್ಸಿನಲ್ಲಿ ಉತ್ತಮ ಆಲೋಚನೆಗಳು ಮೂಡುತ್ತದೆ ಎನ್ನುವ ನಂಬಿಕೆಯಿದೆ.
ಈ ವಿಶೇಷವಾದ ಜಡಾ ತೀರ್ಥದಲ್ಲಿ ಶ್ರೀರಾಮನು ತನ್ನ ಜಡೆಯನ್ನು ತೊಳೆದಿದ್ದನು ಎನ್ನುವ ಉಲ್ಲೇಖ ಪುರಾಣಗಳಲ್ಲಿದೆ. ಹಾಗಾಗಿ ಇದಕ್ಕೆ ಜಡಾ ತೀರ್ಥ ಎನ್ನುವ ವಿಶಿಷ್ಟ ಹೆಸರು ಬಂದಿದೆ ಎನ್ನುತ್ತದೆ ಪುರಾಣ.
ಈ ಜಡಾ ತೀರ್ಥವೆಂಬ ಪುಣ್ಯಕ್ಷೇತ್ರವು ರಾಮೇಶ್ವರದಿಂದ ಸುಮಾರು 13 ಕಿಲೋಮೀಟರ್ ದೂರದಲ್ಲಿದೆ. ಧನುಷ್ಕೋಡಿಗೆ ಹೋಗುವ ದಾರಿಯಲ್ಲಿ ಕಾಣಸಿಗುವುದೇ ಜಡಾ ತೀರ್ಥ.
ಅಲ್ಲೊಂದು ಶ್ರೀರಾಮನ ಮಂದಿರವಿದೆ, ಇಲ್ಲಿ ಮಹಾಶಿವರಾತ್ರಿಯನ್ನು ಕೂಡ ವಿಜೃಂಭಣೆಯಿಂದ ಆಚರಿಸುತ್ತಾರೆ.
ಜೊತೆಗೆ, ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಮಹಾ ಮಕಾಮ್ ಉತ್ಸವವನ್ನು ಕೂಡ ಇಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಪುರಾಣಗಳ ಪ್ರಕಾರ, ಶ್ರೀ ರಾಮನು ರಾವಣನನ್ನು ಸಂಹರಿಸಿ(mystery about ramayana) ತೆರಳುತ್ತಿದ್ದಾಗ ಮಧ್ಯೆ ದಾರಿಯಲ್ಲಿ ಈ ತೀರ್ಥ ಸಿಗುತ್ತದೆ. ಆಗ ಈ ತೀರ್ಥದಲ್ಲಿ ರಾಮ ಹಾಗೂ ಲಕ್ಷ್ಮಣರು ತಮ್ಮ ಜಡೆಯನ್ನು ತೊಳೆದಿದ್ದರು ಎಂದು ಹೇಳಲಾಗುತ್ತದೆ.
ಈ ಕಾರಣದಿಂದ ತೀರ್ಥಕ್ಕೆ ಜಡಾ ತೀರ್ಥ ಎನ್ನುವ ಹೆಸರು ಬಂದಿತು.
ರಾಮ ಹಾಗೂ ಲಕ್ಷ್ಮಣರು ಈ ತೀರ್ಥದಲ್ಲಿ ಜಡೆಯನ್ನು ತೊಳೆದ ನಂತರ ರಾಮೇಶ್ವರಂಗೆ ಹೋಗಿ ಶಿವಲಿಂಗವನ್ನು ಪೂಜಿಸಿದ್ದರು.
ಇದಕ್ಕೆ ಪುಷ್ಟಿಯೆಂಬಂತೆ, ಈ ಜಡೆ ತೀರ್ಥದ ಬಳಿಯೇ ಒಂದು ಶಿವನ ಮಂದಿರವಿದೆ. ಈ ಮಂದಿರದಲ್ಲಿ ಶಿವಲಿಂಗದ ಪೂಜೆಯನ್ನ ಸ್ವತಃ ಶ್ರೀ ರಾಮನೇ ಮಾಡಿದ್ದರು ಎನ್ನುವ ನಂಬಿಕೆಯಿದೆ.
ಮರಳು ಹಾಗೂ ದಿಬ್ಬಗಳಿಂದ ಆವೃತವಾಗಿರುವ ಈ ತೀರ್ಥದ ನೀರು ಎಳನೀರಿನಷ್ಟೇ ಸಿಹಿಯಾಗಿರುತ್ತದೆ. ಪ್ರವಾಸಿಗರು ಕಾವೇರಿ ತೀರ್ಥಂ ಆವರಣದಲ್ಲಿ ಜಡಾ ತೀರ್ಥಮ್ ದೇವಾಲಯವನ್ನೂ ಕಾಣಬಹುದು.
ಈ ದೇವಾಲಯವು ದೊಡ್ಡ ಆಲದ ಮರದ ಕೊಂಬೆಯ ಕೆಳಗಿದೆ.
ದಂತಕತೆಯೊಂದರ ಪ್ರಕಾರ, ಶುಕ ಮಹರ್ಷಿ ಅನೇಕ ಯಜ್ಞಗಳನ್ನು ಮಾಡಿದರೂ ಮಹಾನ್ ಶಕ್ತಿಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ತರ ರಾಜ ಋಷಿ ಜನಕರ ಸಲಹೆ ಮೇರೆಗೆ ಈ ಸ್ಥಳಕ್ಕೆ ಬಂದು ಜಡಾ ತೀರ್ಥಂನಲ್ಲಿ ಸ್ನಾನ ಮಾಡಿ,
ನಂತರ ಧ್ಯಾನಲಿಂಗಗಳು, ಜ್ಞಾನೇಶ್ವರರ್ ಮತ್ತು ಅಗ್ನೇಸ್ವರರನ್ನು ಪೂಜಿಸಿ ದೊಡ್ಡ ಋಷಿಯಾಗುತ್ತಾರೆ.
ಇಲ್ಲಿ ತೀರ್ಥ ಸ್ನಾನ ಮಾಡಿದರೆ ಪುಣ್ಯಶ್ರೀ ರಾಮನಾಥಸ್ವಾಮಿ ಮತ್ತು ಧ್ಯಾನಲಿಂಗವು ಭಕ್ತರಿಗೆ ಜ್ಞಾನ ಹಾಗೂ ಬುದ್ಧಿವಂತಿಕೆಯನ್ನು ವರವಾಗಿ ನೀಡುತ್ತದೆ. ಈ ಪವಿತ್ರ ತೀರ್ಥವು ಭಕ್ತರನ್ನು ಕಾಮ, ಕ್ರೋಧ ಮಧದಿಂದ ರಕ್ಷಿಸುತ್ತದೆ.
ಈ ಜಡಾ ತೀರ್ಥದಲ್ಲಿ ಒಂದು ಬಾರಿ ಸ್ನಾನ ಮಾಡಿದರೆ ಸಾಕು, ಕುಂಭಕೋಣದಲ್ಲಿಯೇ ಸ್ನಾನ ಮಾಡಿದಷ್ಟು ಪುಣ್ಯ ಬರುತ್ತದೆ ಎನ್ನುತ್ತಾರೆ.
ಇಲ್ಲಿ ಸ್ನಾನ ಮಾಡುವ ಜನರಿಗೆ ಬಡತನ ಹಾಗೂ ಪಾಪಗಳಿಂದ ಕೂಡ ಮುಕ್ತಿ ಸಿಗುತ್ತಂತೆ. ಜೊತೆಗೆ, ಗೊಂದಲಗಳಿಂದ ಮುಕ್ತವಾಗಿ ಒಳ್ಳೆಯ ಆಲೋಚನೆಯನ್ನು ಪಡೆಯುತ್ತಾರಂತೆ.