ಶ್ರೀನಗರ,ಜೂ.21: ಉತ್ತರ ಕಾಶ್ಮೀರದ ಸೊಪೋರ್ ಗ್ರಾಮದಲ್ಲಿ ಹಿರಿಯ ಲಷ್ಕರ್ ಉಗ್ರ ಮುದಾಸೀರ್ ಪಂಡಿತ್ ಮತ್ತು ಇನ್ನಿಬ್ಬರು ಉಗ್ರರು ಹತ್ಯೆಗೀಡಾಗಿದ್ದಾರೆ.
ಭಯೋತ್ಪಾದನೆಗೆ ಸಂಬಂಧಿಸಿದ ಹಲವಾರು ಅಪರಾಧಗಳ ಹೊರತಾಗಿ ಇತ್ತೀಚೆಗೆ ಮೂವರು ಪೊಲೀಸರು, ಇಬ್ಬರು ಕೌನ್ಸಿಲರ್ಗಳು ಮತ್ತು ಇಬ್ಬರು ನಾಗರಿಕರ ಹತ್ಯೆಯಲ್ಲಿ ಪಂಡಿತ್ ಭಾಗಿಯಾಗಿದ್ದಾನೆ. ಭದ್ರತಾ ಪಡೆಗಳೊಂದಿಗಿನ ಮುಖಾಮುಖಿ ಭಾನುವಾರ ಸಂಜೆ ತಂತ್ರಾಯಿಪೊರಾ ಬ್ರಾಥ್ ಗ್ರಾಮದಲ್ಲಿ ಆರಂಭವಾಗಿತ್ತು ಎಂದು ಕಾಶ್ಮೀರದ ಪೊಲೀಸ್ ಮುಖ್ಯಸ್ಥ (ಐಜಿ) ವಿಜಯ್ ಕುಮಾರ್ ಹೇಳಿದ್ದಾರೆ.