Job News : ನಬಾರ್ಡ್ (Nabard consultancy services jobs) ಕನ್ಸಲ್ಟೆನ್ಸಿ ಸರ್ವಿಸಸ್ನಲ್ಲಿ ಇದೀಗ ಇರುವ ಖಾಲಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಜೂನಿಯರ್ ಕನ್ಸಲ್ಟೆಂಟ್ ಹುದ್ದೆಗಳನ್ನು ಈ ನೇಮಕಾತಿ ಅಡಿಯಲ್ಲಿ ಭರ್ತಿ ಮಾಡಲಾಗುತ್ತಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬಹುದು.
ಈ ನೇಮಕಾತಿ ಕುರಿತಾಗಿ ಬೇಕಾಗಿರುವ ಪ್ರಮುಖ ಲಿಂಕ್ ಗಳು ಹಾಗೂ ಮತ್ತಷ್ಟು (Nabard consultancy services jobs) ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಗಳ ವಿವರಗಳು:
ಬ್ಯಾಂಕ್ ಹೆಸರು : ನಬಾರ್ಡ್ ಕನ್ಸಲ್ಟೆನ್ಸಿ ಸರ್ವೀಸಸ್ ( NABCONS )
ಉದ್ಯೋಗ ಸ್ಥಳ: ಅಖಿಲ ಭಾರತ
ಹುದ್ದೆಗಳ ಸಂಖ್ಯೆ: 18
ಹುದ್ದೆಯ ಹೆಸರು: ಜೂನಿಯರ್ ಕನ್ಸಲ್ಟೆಂಟ್
ಶೈಕ್ಷಣಿಕ ಅರ್ಹತೆಗಳು :
NABCONS ಹೊರಡಿಸಿರುವ ಅಧಿಕೃತ ಅಧಿಸೂಚನೆಯ ಪ್ರಕಾರ ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಅಭ್ಯರ್ಥಿಯು ಪದವಿಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ:
ನಬಾರ್ಡ್ ಕನ್ಸಲ್ಟೆನ್ಸಿ ಸೇವೆಗಳ ನೇಮಕಾತಿ ಅಧಿಸೂಚನೆಯ ಪ್ರಕಾರ, ಕನಿಷ್ಠ 25 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳ ಒಳಗೆ ಅಭ್ಯರ್ಥಿಯ ವಯಸ್ಸುಇರಬೇಕು

ರಾಜ್ಯವ್ಯಾಪಿ ಹುದ್ದೆಗಳ ವಿವರಗಳು:
ಕರ್ನಾಟಕ- 1
ತಮಿಳುನಾಡು- 1
ಕೇರಳ- 1
ರಾಜಸ್ಥಾನ- 1
ಅಂಡಮಾನ್ ಮತ್ತು ನಿಕೋಬಾರ್- 1
ಅರುಣಾಚಲ ಪ್ರದೇಶ- 1
ಉತ್ತರ ಪ್ರದೇಶ- 1
ಲಡಾಖ್ 1
ಮಿಜೋರಾಂ- 1
ಗೋವಾ- 1
ಹಿಮಾಚಲ ಪ್ರದೇಶ- 1
ಜಮ್ಮು- 1
ಸಿಕ್ಕಿಂ- 1
ಮೇಘಾಲಯ- 1
ತ್ರಿಪುರಾ- 1
ನಾಗಾಲ್ಯಾಂಡ್- 1
ಉತ್ತರಾಖಂಡ- 1
ಒರಿಸ್ಸಾ- 1
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.
ಮಾಸಿಕ ವೇತನ: ಮಾಸಿಕ ವೇತನವಾಗಿ 40 ಸಾವಿರ ರೂ. ಅನ್ನು ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನೀಡಲಾಗುತ್ತದೆ.
ಇದನ್ನು ಓದಿ: ‘ಕಾರ್ನ್ ಸಿಲ್ಕ್’ ಜೋಳದ ಕೂದಲನ್ನು ಬಿಸಾಡುವ ಮುನ್ನ ಈ ವರದಿ ಓದಿ
ಪ್ರಮುಖ ದಿನಾಂಕಗಳು: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18-07-2023
ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿ ನೀಡಲಾಗಿರುವ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಈ ಹುದ್ದೆಗಳಿಗೆ ನೇರವಾಗಿ ಅರ್ಜಿ ಸಲ್ಲಿಸಬಹುದು

ಈ ನೇಮಕಾತಿ ಕುರಿತಾದ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಹಾಗೂ ಮತ್ತಷ್ಟು ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ ಇಲ್ಲಿ ನೀಡಲಾಗಿದೆ. ಇಲ್ಲಿ ಕ್ಲಿಕ್ ಮಾಡಿ.
ಅಧಿಕೃತ ವೆಬ್‌ಸೈಟ್:
http://nabcons.com/
ರಶ್ಮಿತಾ ಅನೀಶ್