ಮಂಗಳವಾರ ನಾಗ್ಪುರದ(Nagpur) ವಾರ್ಧಾ ರಸ್ತೆಯಲ್ಲಿ ಕಾರಿನಲ್ಲಿ(Car) ಒಬ್ಬ ವ್ಯಕ್ತಿ ತನ್ನ ಹೆಂಡತಿ ಮತ್ತು ಮಗನೊಂದಿಗೆ ಬೆಂಕಿ ಹಚ್ಚಿಕೊಂಡಿದ್ದಾನೆ. ನಂತರದಲ್ಲಿ ಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪತ್ನಿ ಮತ್ತು ಮಗ ಬದುಕುಳಿದಿದ್ದಾರೆ. ಸ್ಥಳೀಯ ಮಾಹಿತಿಯ ಪ್ರಕಾರ, ಮೃತನನ್ನು ರಾಮರಾಜ್ ಎಂದು ಗುರುತಿಸಲಾಗಿದೆ, ಖಾಪ್ರಿಯ ನಿರ್ಜನ ಪ್ರದೇಶದಲ್ಲಿ ತನ್ನ ಮಾರುತಿ 800 ಕಾರನ್ನು ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುವುದಾಗಿ ಹೇಳಿ ಕಾರಿನಿಂದ ಇಳಿದಿದ್ದಾನೆ, ಬಳಿಕ ಕಾರಿನ ಹಿಂದೆ ಕುಳಿತು ಏಕಾಏಕಿ ಕಾರಿನ ಬಾಗಿಲನ್ನು ಮುಚ್ಚಿ ಬೆಂಕಿ ಹಚ್ಚಿದ್ದಾನೆ.
ಯಾವುದೇ ರೀತಿ ಸಹಾಯ ಸಾಧ್ಯವಾಗದೆ ಇದ್ದರೂ, ತಾಯಿ-ಮಗ ಇಬ್ಬರೂ ಕಾರಿನಿಂದ ಇಳಿದು ರಸ್ತೆಬದಿಯಲ್ಲಿ ಸಂಗ್ರಹವಾಗಿದ್ದ ಮಳೆ ನೀರಿನ ಮೇಲೆ ಮಲಗಿ ಬೆಂಕಿಯಿಂದ ಪಾರಾಗಿದ್ದಾರೆ. ಆದರೆ ರಾಮರಾಜ್ ವಾಹನದಲ್ಲೇ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದಾರೆ. ಅಪಘಾತದಲ್ಲಿ(Accident) ಗಂಭೀರವಾಗಿ ಗಾಯಗೊಂಡಿರುವ ಮೃತ ರಾಮರಾಜ್ ಪತ್ನಿ ಸಂಗೀತಾ ಭಟ್ ಹಾಗೂ ಪುತ್ರ ನಂದನ್ ಭಟ್ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರ ಸ್ಥಿತಿ ಸದ್ಯ ಚಿಂತಾಜನಕವಾಗಿದೆ.

ಘಟನೆ ನಡೆದ ಸ್ಥಳದಿಂದ ಪೊಲೀಸರಿಗೆ ಆತ್ಮಹತ್ಯೆ(Sucide) ಪತ್ರ ಸಿಕ್ಕಿದ್ದು, ಅದರಲ್ಲಿ ರಾಮರಾಜ್ ಅವರು ಆರ್ಥಿಕ ಸಮಸ್ಯೆಯಿಂದ ಜೀವನ ಅಂತ್ಯಗೊಳಿಸುತ್ತಿರುವುದಾಗಿ ಹೇಳಿದ್ದಾರೆ. ನಾಗ್ಪುರದ ನಿವಾಸಿಯಾಗಿದ್ದು, ಫ್ಲಾಟ್ ಹೊಂದಿದ್ದರು ಮತ್ತು ಗ್ಯಾರೇಜ್ ವ್ಯವಹಾರವನ್ನು ಹೊಂದಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದು ಕೋವಿಡ್(Covid 19) ಸಾಂಕ್ರಾಮಿಕ ರೋಗದಿಂದಾಗಿ ವ್ಯವಹಾರಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದರಿಂದ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದರು ಎಂದು ಹೇಳಲಾಗಿದೆ.