Mysore : ರಾಜ್ಯ ಯುವ ಕಾಂಗ್ರೆಸ್ (nalapad vs bjp) ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್ (Mohammad Nalapad) ಮೈಸೂರಿನ ಪಡವಾರಹಳ್ಳಿಯಲ್ಲಿರುವ ಸರ್ಕಾರಿ ಮಹಿಳಾ
ಕಾಲೇಜಿನಲ್ಲಿ ಮುಖ್ಯ ಅತಿಥಿಯಾಗಿ ಧ್ವಜಾರೋಹಣ ಮಾಡಿರುವುದಕ್ಕೆ (nalapad vs bjp) ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಈ ಕುರಿತು ಟ್ವೀಟ್ (Tweet) ಮಾಡಿರುವ ರಾಜ್ಯ ಬಿಜೆಪಿ. ಎತ್ತ ಸಾಗುತ್ತಿದೆ ಕರ್ನಾಟಕ..?? ಗೂಂಡಾ ರೌಡಿಯೊಬ್ಬ ಸರ್ಕಾರಿ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಬೇಕೆ..?
ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾರತದ ತ್ರಿವರ್ಣ ಧ್ವಜ ರಾರಾಜಿಸುವ ಬದಲು ಕಾಂಗ್ರೆಸ್ ಪಕ್ಷದ ಧ್ವಜ ಮತ್ತು ಚಿಹ್ನೆ ಮೇಳೈಸಬೇಕೆ..? ಸ್ವಾತಂತ್ರ್ಯ ದಿನದಂತಹ ಪವಿತ್ರ ದಿನದಂದು, ಮಕ್ಕಳು &
ಸಾರ್ವಜನಿಕರು ಗೂಂಡಾಗಳ ಭಾಷಣ ಕೇಳುವಂತಾಗಿರುವುದು ದುರಂತ ಎಂದು ಟೀಕಿಸಿದೆ.
ಇನ್ನು ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಹರೀಶ್ ಗೌಡ (Harish Gowda) ಮೊಹಮ್ಮದ್ ನಲಪಾಡ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದು ಸಾರ್ವಜನಿಕರ ಆಕ್ರೋಶಕ್ಕೆ
ಕಾರಣವಾಗಿದೆ. ಇನ್ನೊಂದೆಡೆ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆಯ ಫ್ಲೆಕ್ಸ್ (Flex) ಹಾಕಿರುವುದು ಟೀಕೆಗೆ ಕಾರಣವಾಗಿದೆ. ಸರ್ಕಾರಿ ಕಾಲೇಜು
ಕಾರ್ಯಕ್ರಮವನ್ನು ಕಾಂಗ್ರೆಸ್ ಕಾರ್ಯಕ್ರಮ ರೀತಿ ಮಾಡುವುದಕ್ಕೆ ಸೂಚಿಸಿದ್ದು ಯಾರು ಎಂದು ಪ್ರಶ್ನಿಸಲಾಗಿದೆ.
ಡಾಕ್ಟರ್ ಎಡವಟ್ಟು: ಆಪರೇಷನ್ ನಂತರ ಗರ್ಭಿಣಿ ಹೊಟ್ಟೆಯಲ್ಲಿಯೇ ಕತ್ತರಿ ಬಿಟ್ಟು ಹೊಲಿಗೆ ಹಾಕಿದ ವೈದ್ಯರು !
ಕಾಲೇಜಿನ ಆಡಳಿತ ಮಂಡಳಿ ಈ ರೀತಿಯ ವ್ಯಕ್ತಿಗಳನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸುವ ಅಗತ್ಯವೆನಿತ್ತು ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ.