ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ನೈತಿಕ ಹೊಣೆ ಹೊತ್ತು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳೀನ್ ಕುಮಾರ್ ಕಟೀಲ್ (Nalin clarified about resignation)
ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅವರು ತಮ್ಮ ರಾಜೀನಾಮೆಯನ್ನು ಲಿಖಿತವಾಗಿ ಮತ್ತು ಮೌಖಿಕವಾಗಿ ಸಲ್ಲಿಸಿದ್ದಾರೆ ಎಂಬ ಸುದ್ದಿ ರಾಜ್ಯ ಬಿಜೆಪಿಯಲ್ಲಿ (BJP)
ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಈ ಬಗ್ಗೆ ಮಧ್ಯಮಗಳ ಜೊತೆ ಮಾತನಾಡಿದ ಬಿಜೆಪಿಯ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ರಾಜೀನಾಮೆಯ ಕಾರಣಗಳ ಬಗ್ಗೆ ಸ್ಪಷ್ಟನೆ ನೀಡುವ (Nalin clarified about resignation) ಪ್ರಯತ್ನ ಮಾಡಿದರು. ‘ನೋಡಿ,
ನೈತಿಕ ಹೊಣೆ ಹೊರುತ್ತೇನೆ ಅನ್ನೋ ಮಾತನ್ನು ನಾನು ಹೇಳಿದ್ದೇನೆ. ರಾಜ್ಯದಲ್ಲಿ ರಾಷ್ಟ್ರೀಯ ನಾಯಕರ ಗಮನಕ್ಕೆ ಸೋತ ಸಂದರ್ಭದಲ್ಲಿ ತಂದಿದ್ದೇನೆ. ಈ ಪದ್ಧತಿ ನಮ್ಮ ಪಕ್ಷದಲ್ಲಿ ಇಲ್ಲ.
ಹಾಗಾಗಿ ನನ್ನ ಅವಧಿಯೂ ಮುಗಿದಿದೆ. ಯಾವತ್ತೂ ಬೇಕಾದರೂ ರಾಷ್ಟ್ರೀಯ ನಾಯಕರೂ ತೀರ್ಮಾನ ತೆಗೆದುಕೊಳ್ಳಬಹುದು ಹಾಗೇನಿಲ್ಲ.
ಈಗಾಗಲೇ ರಾಷ್ಟ್ರೀಯ ನಾಯಕರ ಗಮನಕ್ಕೆ ತಂದಿದ್ದೇನೆ. ನೈತಿಕ ಹೊಣೆ ಹೊರುತ್ತೇನೆ ಎನ್ನುವ ಮಾತನ್ನು ನಾನು ತಿಳಿಸಿದ್ದೇನೆ. ಆ ಸಂದರ್ಭದಲ್ಲೇ ಹೇಳಿದ್ದೇನೆ. ಮತ್ತು ನನ್ನ ಅವಧಿಯೂ
ಕೂಡ ಈಗಾಗಲೇ ಮುಗಿದಿದೆ. ಬದಲಾವಣೆಗಳನ್ನು ಯಾವಾಗ ಬೇಕಾದರೂ ಮಾಡಬಹುದು ಅಂತಾ ಹೇಳಿದ್ದೇನೆ. ಈ ವಿಚಾರ ರಾಷ್ಟ್ರೀಯ ನಾಯಕರ ತೀರ್ಮಾನಕ್ಕೆ ಬಿಟ್ಟಿದ್ದೇನೆ
ಎಂದು ಈಗಾಗಲೇ ಹೇಳಿದ್ದೇನೆ’ ಎಂದು ಕಟೀಲ್ ಹೇಳಿದ್ದಾರೆ.ಆದರೆ, ತಾವು ರಾಜೀನಾಮೆ ನೀಡಿಲ್ಲ ಎನ್ನುವ ಮಾತನ್ನು ಅಲ್ಲಿಯೂ ಕೂಡ ಅವರು ಎಲ್ಲಿಯೂ ಹೇಳಿಲ್ಲ.
‘ನನ್ನ ರಾಜ್ಯಾಧ್ಯಕ್ಷ ಅವಧಿ ಈಗಾಗಲೇ ಮುಗಿದಿದೆ, ರಾಷ್ಟ್ರೀಯ ನಾಯಕರು ತೀರ್ಮಾನ ತೆಗೆದುಕೊಳ್ಳಬಹುದು’ ಎಂದಷ್ಟೇ ಮಾತನಾಡಿದ್ದಾರೆ.
ಬಿಜೆಪಿ ಮಾಧ್ಯಮ ಪ್ರಕಟಣೆ:
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳೀನ್ ಕುಮಾರ್ ಕಟೀಲ್ ರಾಜೀನಾಮೆ ಕೊಟ್ಟಿಲ್ಲ. ಮಾಧ್ಯಮಗಳಲ್ಲಿ (Media) ಈ ಕುರಿತಂತೆ ಬರುತ್ತಿರುವ ಮಾಹಿತಿ ಸತ್ಯಕ್ಕೆ ದೂರವಾದುದು ಎಂದು
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ. ಈ ಬಗ್ಗೆ ಇಂದು ಇಂದು ಪತ್ರಿಕಾ ಹೇಳಿಕೆ ನೀಡಿ ಅವರು, ವಿ. ಸೋಮಣ್ಣ (V.Somanna) ರಾಜ್ಯಾಧ್ಯಕ್ಷ ಸ್ಥಾನದ
ಆಕಾಂಕ್ಷೆಯನ್ನು ಪ್ರಕಟಿಸಿದ ಕುರಿತ ಪ್ರಶ್ನೆಗೆ ಬಳ್ಳಾರಿಯಲ್ಲಿ ಉತ್ತರಿಸುವ ವೇಳೆ ಸೋಲಿನ ನೈತಿಕ ಹೊಣೆ ಹೊರುತ್ತೇನೆ. ಪಕ್ಷದ ಹಿರಿಯರಿಗೆ ಸೋಲಿನ ಕಾರಣಗಳ ಕುರಿತಂತೆ ಮಾಹಿತಿ ನೀಡಿದ್ದೇನೆ.
ನಾನು 4 ವರ್ಷಗಳಿಂದ ಅಧ್ಯಕ್ಷ ಸ್ಥಾನದಲ್ಲಿದ್ದೇನೆ ಎಂದು ತಿಳಿಸಿದ್ದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಪಕ್ಷವು ಸೂಕ್ತ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷರ ನೇಮಕ ಕುರಿತಂತೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ
ಎಂದು ಅವರು ತಿಳಿಸಿದ್ದಾರೆ. ನಾನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾಗಿ ಹೇಳಿಲ್ಲ. ತಪ್ಪಾಗಿ ನನ್ನ ಹೇಳಿಕೆಯನ್ನು ಅರ್ಥೈಸಿ ಸುದ್ದಿ ಬಿತ್ತರಿಸಲಾಗುತ್ತಿದೆ ಎಂದು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಬಳ್ಳಾರಿಯಲ್ಲಿ (Bellari) ಭಾಷಣ ಮಾಡಿದ ಕಟೀಲು ಕಳೆದ ಒಂಬತ್ತು ವರ್ಷಗಳಿಂದ ಕೇಂದ್ರದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡುವಲ್ಲಿ ಬಿಜೆಪಿಯ ಸಾಧನೆಗಳನ್ನು ಎತ್ತಿ ತೋರಿಸಿದರು. ಭಯೋತ್ಪಾದಕ
ಚಟುವಟಿಕೆಯಲ್ಲಿ ಗಮನಾರ್ಹ ಇಳಿಕೆ ಮತ್ತು ನಕ್ಸಲಿಸಂ ಆತಂಕವನ್ನು ನಿರ್ಮೂಲನೆ ಮಾಡಲು ನಡೆಯುತ್ತಿರುವ ಪ್ರಯತ್ನಗಳನ್ನು ಅವರು ಉಲ್ಲೇಖಿಸಿದ್ದಾರೆ.
ಕೇಂದ್ರ ಸರ್ಕಾರವು ನಿರಂತರವಾಗಿ 5 ಕೆಜಿ ಅಕ್ಕಿಯನ್ನು ನೀಡುತ್ತಿದೆ ಮತ್ತು ಅದನ್ನು ದೇಶದ ಎಲ್ಲಾ ರಾಜ್ಯಗಳಿಗೆ ವಿತರಿಸುತ್ತದೆ.
ಇದನ್ನೂ ಓದಿ : ಇಂದಿರಾ ಕ್ಯಾಂಟೀನ್ ಊಟದ ಮೆನು ಬದಲಾವಣೆ : ಹೊಸ ಸೇರ್ಪಡೆ ಪಟ್ಟಿ ಇಲ್ಲಿದೆ ನೋಡಿ
ರಾಜ್ಯಾದ್ಯಂತ ನಿರೀಕ್ಷೆಗೂ ಮೀರಿದ ಫಲಿತಾಂಶಗಳು ಬಂದಿವೆ. ಕಾಂಗ್ರೆಸ್ ನ(Congress) ಗ್ಯಾರಂಟಿ ಕಾರ್ಡ್ ಮೇಲೆ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆದ್ದರಿಂದ. ಒಳ ಒಪ್ಪಂದದ ಕುರಿತು ಬಿಜೆಪಿ
ಮುಖಂಡರ ಹೇಳಿಕೆಯನ್ನು ಉಲ್ಲೇಖಿಸಿದ ಅವರು, “ಒಳ ಒಪ್ಪಂದದ ಹೇಳಿಕೆ ನೀಡಿದವರನ್ನು ಕರೆದು ಅಭಿಪ್ರಾಯ ಕೇಳಿದ್ದೇವೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಆಂತರಿಕ ಒಪ್ಪಂದವಿಲ್ಲ” ಎಂದು ಅವರು ಹೇಳಿದರು.
ರಾಜ್ಯದಲ್ಲಿ ಲಿಂಗಾಯತರನ್ನು ಕಡೆಗಣಿಸುತ್ತಿರುವ ಬಿಜೆಪಿ
ರಾಜ್ಯದಲ್ಲಿ ಲಿಂಗಾಯತರ ಕಡೆಗಣನೆ ವಿಚಾರದಲ್ಲಿ ಮಾತನಾಡಿದ ಕಟೀಲ್, ಬಿಎಸ್‌ವೈ (B.S.Yediyurappa) ಲಿಂಗಾಯತರನ್ನು ಕಡೆಗಣಿಸಿಲ್ಲ ಎಂದು ಹೇಳಿದರು. ಬಿಜೆಪಿ ಲಿಂಗಾಯತರಾದ
ಬೊಮ್ಮಾಯಿಯವರನ್ನು(Basavaraj Bommai) ಕರ್ನಾಟಕದ ಮುಖ್ಯಮಂತ್ರಿಯನ್ನಾಗಿ ನೇಮಿಸಿದರು. ಲಿಂಗಾಯತರು ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕಾದರೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದರು.
ಇದನ್ನೂ ಓದಿ : ನಂದಿನಿ ಹಾಲಿನ ದರ ಲೀಟರಿಗೆ 5 ರೂ. ಏರಿಕೆಗೆ ಬೇಡಿಕೆ ಇಟ್ಟಿದ್ದೇವೆ : KMF ನೂತನ ಅಧ್ಯಕ್ಷ ಭೀಮಾ ನಾಯ್ಕ್
ಇದಾದ ಬಳಿಕ ಬಿಜೆಪಿಯ ಮುಂದಿನ ಕಮಲಾಧಿಪತಿ ಯಾರಾಗುತ್ತಾರೆ ಎಂಬ ಕುತೂಹಲ ಜನರಲ್ಲಿ ಮೂಡಿದೆ. ನೂತನ ರಾಜ್ಯಾಧ್ಯಕ್ಷರನ್ನು ಮತ್ತು ವಿಪಕ್ಷ ನಾಯಕ ಸ್ಥಾನ ಆಯ್ಕೆ ಮಾಡುವ ಸವಾಲು ಬಿಜೆಪಿಯ ಮುಂದಿದೆ.
ವಿ ಸೋಮಣ್ಣ ಅಲ್ಲದೆ ಸಿಟಿ ರವಿ (C.T Ravi) ಹಾಗೂ ಅಶ್ವತ್ಥ್ ನಾರಾಯಣ್ (Ashwath Narayan) ಮತ್ತು ಆರ್.ಅಶೋಕ್ (R.Ashok) ಅವರ ಹೆಸರೂ ಕೂಡ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹರಿದಾಡುತ್ತಿದೆ.
ಬಿಜೆಪಿಯಲ್ಲಿ ಮೂಲಗಳ ಪ್ರಕಾರ ಮೊದಲಿಗೆ ವಿಪಕ್ಷ ನಾಯಕನ ಆಯ್ಕೆಯಾಗಲಿದ್ದು ರಾಜ್ಯಾಧ್ಯಕ್ಷ ಸ್ಥಾನ ಆ ಬಳಿಕವೇ ತೀರ್ಮಾನವಾಗುವ ಸಾಧ್ಯತೆ ಇದೆ. ಬಿಜೆಪಿಯಲ್ಲಿ ನಳೀನ್ ಕುಮಾರ್ ಕಟೀಲ್
ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲಿಯೇ, ಈ ಸ್ಥಾನಕ್ಕೆ ತೀವ್ರ ಪೈಪೋಟಿಯಾಗಿದೆ.
ರಶ್ಮಿತಾ ಅನೀಶ್