ಇಂತವರ “ಕೈ” ಗೆ ಇನ್ನೊಮ್ಮೆ ಅಧಿಕಾರ ಕೊಟ್ಟರೆ ಇನ್ನೆಷ್ಟು ತಲೆಮಾರಿಗೆ ಸಂಪಾದಿಸುತ್ತಾರೆ ಎಂದು ರಾಜ್ಯದ ನಾಗರಿಕರು ಕೇಳುತ್ತಿದ್ದಾರೆ. ಗಾಂಧಿ ಕುಟುಂಬದಿಂದ 3-4 ತಲೆಮಾರಿಗೆ ಆಗುವಷ್ಟು ಸಂಪಾದಿಸಿದ್ದೇವೆ ಎಂದು ಸತ್ಯ ಹೇಳಿರುವ ಕಾಂಗ್ರೆಸ್(Congress) ಹಿರಿಯ ನಾಯಕ ರಮೇಶ್ ಕುಮಾರ್(Ramesh Kumar), ಸೋನಿಯಾ ಗಾಂಧಿಯ(Sonia Gandhi) ಸಮಾಧಾನಕ್ಕಾಗಿ ಬೀದಿಗೆ ಇಳಿಯಲು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ(BJP State President) ನಳೀನ್ ಕುಮಾರ್ ಕಟೀಲ್(Nalin Kumar Kateel) ವ್ಯಂಗ್ಯವಾಡಿದ್ದಾರೆ.

ಈ ಕುರಿತು ಸರಣಿ ಟ್ವೀಟ್(Tweet) ಮಾಡಿರುವ ಅವರು, ಸಿಎಂ ಭ್ರಮೆಯಿಂದ ತಮ್ಮ ಪಕ್ಷದಲ್ಲಿ ಅನೇಕರ ನಿದ್ದೆ ಹಾಳು ಮಾಡಿರುವ ಸಿದ್ದರಾಮಯ್ಯ(Siddaramaiah) ಹಾಗೂ ಡಿ.ಕೆ.ಶಿವಕುಮಾರ್(DK Shivkumar) ಅವರಿಂದ ಪಕ್ಷದ ಕಾರ್ಯಕರ್ತರು ಭ್ರಮನಿರಸನಗೊಂಡಿದ್ದಾರೆ. ದುರ್ಬಲ ಹೈಕಮಾಂಡ್ ಆಂತರಿಕ ಕಚ್ಚಾಟ ಸರಿ ಮಾಡಲಾಗದೇ ಕೈ ಚೆಲ್ಲಿದ್ದು, ಇವರ ಕೈಗೆ ಅಧಿಕಾರ ಕೊಟ್ಟರೆ ಕಚ್ಚಾಟವೇ ಗ್ಯಾರಂಟಿ ಎಂದು ರಾಜ್ಯದ ಜನರಿಗೆ ಗೊತ್ತಾಗಿದೆ. ಕಾಂಗ್ರೆಸ್ ನಾಯಕರು ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರದಿಂದ 3-4 ತಲೆಮಾರಿಗಾಗುವಷ್ಟು ಸಂಪಾದಿಸಿದ್ದೇವೆ ಎಂದು ರಮೇಶ್ ಕುಮಾರ್ ವಾಸ್ತವ ಒಪ್ಪಿಕೊಂಡಿದ್ದಾರೆ.
ಇಂತವರ “ಕೈ”ಗೆ ಇನ್ನೊಮ್ಮೆ ಅಧಿಕಾರ ಕೊಟ್ಟರೆ ಇನ್ನೆಷ್ಟು ತಲೆಮಾರಿಗೆ ಸಂಪಾದಿಸುತ್ತಾರೆ ಎಂದು ರಾಜ್ಯದ ನಾಗರಿಕರು ಕೇಳುತ್ತಿದ್ದಾರೆ. ಗಾಂಧಿ ಕುಟುಂಬದಿಂದ 3-4 ತಲೆಮಾರಿಗೆ ಆಗುವಷ್ಟು ಸಂಪಾದಿಸಿದ್ದೇವೆ ಎಂದು ಸತ್ಯ ಹೇಳಿರುವ ಕಾಂಗ್ರೆಸ್ ಹಿರಿಯ ನಾಯಕ ರಮೇಶ್ ಕುಮಾರ್, ಸೋನಿಯಾ ಗಾಂಧಿಯ ಸಮಾಧಾನಕ್ಕಾಗಿ ಬೀದಿಗೆ ಇಳಿಯಲು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಇವರ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆತ್ಮಸಾಕ್ಷಿ ಬದಿಗಿಟ್ಟು ಹೋರಾಟ ಮಾಡಬೇಕಿದೆ ಎಂದು ಲೇವಡಿ ಮಾಡಿದ್ದಾರೆ. ಇನ್ನು ಕಾಂಗ್ರೆಸ್ ಹಿರಿಯ ನಾಯಕ ರಮೇಶ್ ಕುಮಾರ್ ಗಾಂಧಿ ಕುಟುಂಬದಿಂದ 3-4 ತಲೆಮಾರಿಗೆ ಆಗುವಷ್ಟು ಸಂಪಾದಿಸಿದ್ದೇವೆ.

ಹೀಗಾಗಿ ಅದರ ಋಣ ಸಂಧಾನಕ್ಕಾಗಿ ಅವರ ಪರವಾಗಿ ಹೋರಾಟ ಮಾಡಬೇಕಿದೆ ಎಂದಿದ್ದರು. ಅದರ ವಿರುದ್ದ ಬಿಜೆಪಿ(BJP) ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ.