Bengaluru : ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್(Nalinkumar tweeted against congress) ಇದೀಗ ಕಾಂಗ್ರೆಸ್ ಮತ್ತು ಜನತಾದಳ ಪಕ್ಷದ ವಿರುದ್ಧ ನೇರ ಆರೋಪ ಮುಂದುವರೆಸಿದ್ದು, ರಾಜ್ಯ ಕಾಂಗ್ರೆಸ್ ಪಕ್ಷ ಮತ್ತು ಜೆಡಿಎಸ್ ಪಕ್ಷದ ನಾಯಕ ಹೆಚ್.ಡಿ ಕುಮಾರಸ್ವಾಮಿ(HD Kumaraswamy) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸರಣಿ ಟ್ವೀಟ್(Tweet) ಮಾಡುವ ಮೂಲಕ ಎರಡು ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ನಳೀನ್ ಕುಮಾರ್ ಕಟೀಲ್, ಹಳೆ ಮೈಸೂರು ಭಾಗದಲ್ಲಿ ನಮ್ಮ ಪಕ್ಷದ ಸಂಘಟನಾ ಕಾರ್ಯಗಳನ್ನು ನೋಡಿ ಹೆಚ್.ಡಿ ಕುಮಾರಸ್ವಾಮಿ ಅವರು ಹೆದರಿದ್ದಾರೆ.
ಮೊನ್ನೆ ಮಂಡ್ಯಲ್ಲಿ(Mandya) ನಡೆದ ನಮ್ಮ ಜನಸಂಕಲ್ಪ ಯಾತ್ರೆಯ ಯಶಸ್ಸಿನಿಂದ ಕಂಗೆಟ್ಟಿರುವ ಜೆಡಿಎಸ್(JDS),
ಕಳೆದುಹೋಗುತ್ತಿರುವ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ನಂದಿನಿಯ(Nandini) ವಿಷಯದಲ್ಲಿ ಸುಳ್ಳು ಹರಡತೊಡಗಿದೆ.
ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ತನ್ನ ನೀಚ ಬುದ್ದಿಯನ್ನು ಇನ್ನಷ್ಟು ತೆರೆದಿಡುತ್ತಿದೆ.

ಅಭಿವೃದ್ಧಿಯ ವಿಷಯದಲ್ಲಿ ಬಿಜೆಪಿಯ ಮಟ್ಟಕ್ಕೇರಲು ಸಾಧ್ಯವಿಲ್ಲ ಎಂದು ಅರಿತ ಕಾಂಗ್ರೆಸ್(Congress), ಸುಳ್ಳುಗಳನ್ನು ಸೃಷ್ಟಿಸುತ್ತ ಜನರ ದಾರಿ ತಪ್ಪಿಸುತ್ತಿದೆ.
ನಮ್ಮ ಪಕ್ಷ ರಾಜ್ಯದ ಅಭಿವೃದ್ಧಿಯ ವಿಷಯದಲ್ಲಿ ಸಾಸಿವೆ ಕಾಳಿನಷ್ಟೂ ರಾಜಿಯಾಗುವುದಿಲ್ಲ.
ರಾಜಕೀಯವಾಗಿ ಅತಂತ್ರ ಪರಿಸ್ಥಿತಿಯಲ್ಲಿರುವ ಜೆಡಿಎಸ್, ಸ್ವಹಿತ ಸಾಧನೆಗೆ ಜನರ ದಿಕ್ಕು ತಪ್ಪಿಸುವ ಹೆಚ್.ಡಿ ಕುಮಾರಸ್ವಾಮಿ,
ದೇಶದ ಸರ್ವತೋಮುಖ ಬೆಳವಣಿಗೆಯ ಪರವಾಗಿರುವ ಬಿಜೆಪಿಯ ವಿರುದ್ಧ ಜನರನ್ನು ಎತ್ತಿಕಟ್ಟುವ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: https://vijayatimes.com/congress-retaliated-nalinkumar-statement/
ನಂದಿನಿಯ ವಿಲೀನದ ಪ್ರಸ್ತಾಪವೇ ಇಲ್ಲ. ಈಗಾಗಲೇ ಮುಖ್ಯಮಂತ್ರಿಗಳೂ ಕೂಡ ಇದನ್ನು ಸ್ಪಷ್ಟಪಡಿಸಿದ್ದಾರೆ. ಕರ್ನಾಟಕದ ಹೆಗ್ಗುರುತಾಗಿರುವ ನಂದಿನಿಯನ್ನು ದೇಶದ ಇತರೆ ಸಂಸ್ಥೆಗಳ ಸಹಯೋಗದೊಂದಿಗೆ ಅಭಿವೃದ್ದಿಪಡಿಸಿ ಮತ್ತೊಂದು ಎತ್ತರಕ್ಕ ಕೊಂಡೊಯ್ಯುತ್ತೇವೆ.
ಕೆಎಂಎಫ್(KMF) ಅನ್ನು ತಮ್ಮ ಕುಟುಂಬದ ಆಸ್ತಿಯೆಂಬಂತೆ ಮಾಡಿಕೊಂಡಿದ್ದವರಿಗೆ ಈ ಭಯ ಸಹಜ! ಕಾಂಗ್ರೆಸ್ ಕೇವಲ ಒಂದು ಸಮುದಾಯದ ತುಷ್ಟೀಕರಣ ಮಾಡುತ್ತಾ ದೇಶದ ಬಹುಸಂಖ್ಯಾತರನ್ನು ಕಡೆಗಣಿಸಿತು.
ಲವ್ ಜಿಹಾದ್(Love jihad) ಹೆಸರಿನಲ್ಲಿ ನಡೆಯುವ ಮತಾಂತರವನ್ನು ಗಂಭೀರವಾಗಿ ಪರಿಗಣಿಸಲೇಬೇಕು.
ರಾಜ್ಯವನ್ನು ಪ್ರಗತಿಯ ಹಾದಿಯಲ್ಲಿ ಕೊಂಡೊಯ್ದು ರಾಜ್ಯದ ಸಾಂಸ್ಕೃತಿಕ ಪರಂಪರೆಗೆ ಯಾವುದೇ ಚ್ಯುತಿ ಬಾರದಂತೆ ನಾವು ನಿಗಾ ವಹಿಸುತ್ತೇವೆ ಎಂದು ಸರಣಿ ಟ್ವೀಟ್ ಮೂಲಕ ಜೆಡಿಎಸ್ ಮತ್ತು ಕಾಂಗ್ರೆಸ್ ಮಾಡಿರುವ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.