84.31 ಲಕ್ಷ ಮತದಾರರ ಬಗ್ಗೆ (name not deleted from voter list) ಹರಿದಾಡಿದ ಸುದ್ದಿಗೆ ಬ್ರೇಕ್
ಕೇವಲ ಮೃತರು ಮತ್ತು ಡುಪ್ಲಿಕೇಟ್ ಹೆಸರುಗಳಷ್ಟೇ ತೆಗೆದುಹಾಕಲಾಗುತ್ತದೆ ಎಂದ ಸಿಇಒ
ಮನೆ-ಮನೆ ಪರಿಶೀಲನೆ ಬಳಿಕವೇ ಅಂತಿಮ ತೀರ್ಮಾನ, ಮತದಾರರಿಗೆ ದಾಖಲೆ ತಿದ್ದುಪಡಿ ಮಾಡಲು ಆಗಸ್ಟ್ 8ರವರೆಗೆ ಅವಕಾಶ
Bengaluru : ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ (name not deleted from voter list) ಸುಮಾರು 84 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅಳಿಸಲಾಗುತ್ತಿದೆ ಎಂಬ ಆತಂಕ ರಾಜಕೀಯ ವಲಯದಲ್ಲಿ ವ್ಯಕ್ತವಾಗಿತ್ತು.
ಈ ಬಗ್ಗೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ (CEO) ವಿ. ಅನ್ಬುಕುಮಾರ್ ಸ್ಪಷ್ಟನೆ ನೀಡಿ, ASDDO ಪಟ್ಟಿಯಲ್ಲಿ ಗುರುತಿಸಲ್ಪಟ್ಟಿರುವ ಎಲ್ಲ ಮತದಾರರ ಹೆಸರನ್ನು ಒಂದೇ ಬಾರಿಗೆ ಅಳಿಸುವುದಿಲ್ಲ ಎಂದು ಹೇಳಿದ್ದಾರೆ.

ಸೂಕ್ತ ಪರಿಶೀಲನೆ, ದಾಖಲೆಗಳ ದೃಢೀಕರಣ ಹಾಗೂ ಕಾನೂನುಬದ್ಧ ಪ್ರಕ್ರಿಯೆಯ ಬಳಿಕ ಮಾತ್ರ ಮೃತರು ಮತ್ತು ಈಗಾಗಲೇ ಬೇರೆಡೆ ನೋಂದಾಯಿಸಿಕೊಂಡಿರುವ ಡುಪ್ಲಿಕೇಟ್ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಮುಖ್ಯ ಚುನಾವಣಾಧಿಕಾರಿಗಳ ಮಾಹಿತಿ ಪ್ರಕಾರ, ASDDO ವಿಭಾಗದಲ್ಲಿ (name not deleted from voter list) ಗೈರುಹಾಜರಿರುವವರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ಮೃತರು, ಡುಪ್ಲಿಕೇಟ್ ನೋಂದಣಿದಾರರು ಹಾಗೂ ಇತರೆ ವಿಭಾಗದ ಮತದಾರರನ್ನು ಗುರುತಿಸಲಾಗಿದೆ.
ಆದರೆ ಈ ಪೈಕಿ ಗೈರುಹಾಜರಿರುವವರು ಅಥವಾ ಸ್ಥಳಾಂತರಗೊಂಡಿರುವವರಿಗೆ ತಮ್ಮ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಹಾಗೂ ಹೊಸ ಮಾಹಿತಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.
ಆಗಸ್ಟ್ 8ರವರೆಗೆ ನಡೆಯುವ ಮನೆ-ಮನೆಗೆ ಭೇಟಿ ಪರಿಶೀಲನೆ ವೇಳೆ ಬೂತ್ ಮಟ್ಟದ ಅಧಿಕಾರಿಗಳು (BLO) ಮತ್ತು ಮತದಾರರ ನೋಂದಣಿ ಅಧಿಕಾರಿಗಳು (ERO) ಮತದಾರರ ವಿವರಗಳನ್ನು ಪರಿಶೀಲಿಸಿ ಅಗತ್ಯ ತಿದ್ದುಪಡಿಗಳನ್ನು ಮಾಡಲಿದ್ದಾರೆ.
ಡಿಜಿಟಲೀಕರಣ ಪ್ರಕ್ರಿಯೆ ಪೂರ್ಣಗೊಂಡ ನಂತರವೂ ಅಗತ್ಯವಿದ್ದರೆ ದಾಖಲೆಗಳಲ್ಲಿ ಬದಲಾವಣೆ ಮಾಡುವ ಅವಕಾಶ ಇರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ಮತದಾರರ ಹೆಸರುಗಳನ್ನು ಅಕ್ರಮವಾಗಿ ಅಳಿಸಲಾಗುತ್ತಿದೆ ಎಂಬ ಆರೋಪಗಳಿಗೂ ಮುಖ್ಯ ಚುನಾವಣಾಧಿಕಾರಿ ಪ್ರತಿಕ್ರಿಯೆ ನೀಡಿದ್ದಾರೆ.
ಈವರೆಗೆ ಮತದಾರರ ಹೆಸರುಗಳನ್ನು ಅನ್ಯಾಯವಾಗಿ ತೆಗೆದುಹಾಕಲಾಗಿದೆ ಎಂದು ಯಾವುದೇ ಅಧಿಕೃತ ಹಾಗೂ ಸಹಿ ಮಾಡಲಾದ ದೂರು ತಮ್ಮ ಕಚೇರಿಗೆ ಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಆದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯನ್ನು ನಂಬುವ ಬದಲು, ಅಧಿಕೃತ ಮಾಹಿತಿಯನ್ನೇ ಪರಿಗಣಿಸುವಂತೆ ಅವರು ಮನವಿ ಮಾಡಿದ್ದಾರೆ.
ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಪರಿಶೀಲಿಸಿ ಅಗತ್ಯವಿದ್ದರೆ ಸಮಯಮಿತಿಯೊಳಗೆ ತಿದ್ದುಪಡಿ ಅರ್ಜಿ ಸಲ್ಲಿಸಬಹುದು
ಎಂದು ತಿಳಿಸಿದ್ದಾರೆ. ಜುಲೈ 29ರವರೆಗಿನ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು 84,31,612 ಮತದಾರರನ್ನು ASDDO ವಿಭಾಗದಲ್ಲಿ ಗುರುತಿಸಲಾಗಿದೆ.
ಇವರಲ್ಲಿ ಸುಮಾರು 14.99 ಲಕ್ಷ ಮಂದಿ ಮೃತರು, 51.74 ಲಕ್ಷ ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು, 5.62 ಲಕ್ಷ ಮಂದಿ ಈಗಾಗಲೇ ಬೇರೆಡೆ ಮತದಾರರಾಗಿ
ನೋಂದಾಯಿಸಿಕೊಂಡಿರುವ ಡುಪ್ಲಿಕೇಟ್ ಪ್ರಕರಣಗಳು, 11.61 ಲಕ್ಷ ಮಂದಿ ಗೈರುಹಾಜರಿರುವವರು ಹಾಗೂ 33 ಸಾವಿರಕ್ಕೂ ಹೆಚ್ಚು ಮಂದಿ ಇತರೆ ವಿಭಾಗದಲ್ಲಿದ್ದಾರೆ.
ಇದೇ ವೇಳೆ ರಾಜ್ಯದಲ್ಲಿ 4.26 ಕೋಟಿಗೂ ಅಧಿಕ ಗಣತಿ ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದ್ದು, ಇದು ಒಟ್ಟು ಪ್ರಕ್ರಿಯೆಯ ಶೇ.92ಕ್ಕೂ ಹೆಚ್ಚು ಪೂರ್ಣಗೊಂಡಿರುವುದಾಗಿ ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ಡಿಜಿಟಲೀಕರಣ ಪ್ರಕ್ರಿಯೆ ಇನ್ನೂ ಮುಂದುವರಿದಿದ್ದು, ಈ ಭಾಗದಲ್ಲಿ ಸುಮಾರು 47.92 ಲಕ್ಷ ಗಣತಿ ನಮೂನೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ.
ಅಲ್ಲದೆ ಸುಮಾರು 39.38 ಲಕ್ಷ ಮತದಾರರನ್ನು ASDDO ಪಟ್ಟಿಯಲ್ಲಿ ಗುರುತಿಸಲಾಗಿದೆ. ಇವರಲ್ಲಿ ಹೆಚ್ಚಿನವರು ಶಾಶ್ವತವಾಗಿ ಸ್ಥಳಾಂತರಗೊಂಡವರಾಗಿದ್ದು, ನಂತರ ಗೈರುಹಾಜರಿರುವವರು, ಮೃತರು, ಡುಪ್ಲಿಕೇಟ್ ಮತದಾರರು ಹಾಗೂ ಇತರೆ ವಿಭಾಗದವರು ಸೇರಿದ್ದಾರೆ.
ಈ ಪಟ್ಟಿಯನ್ನು ಬೂತ್ ಮಟ್ಟದ ಏಜೆಂಟ್‌ಗಳಿಗೆ (BLA) ನೀಡಲಾಗಿದ್ದು, ಸ್ಥಳೀಯ ಮಟ್ಟದಲ್ಲಿ ಪರಿಶೀಲಿಸಿ ಅಗತ್ಯ ತಿದ್ದುಪಡಿ ಮಾಹಿತಿಯನ್ನು ಸಲ್ಲಿಸುವಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ.
ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನಿಖರತೆ ಕಾಪಾಡುವ ಉದ್ದೇಶದಿಂದ ಈ ವಿಶೇಷ ಪರಿಷ್ಕರಣೆ ನಡೆಯುತ್ತಿದ್ದು, ಅರ್ಹ ಮತದಾರರ ಹಕ್ಕುಗಳಿಗೆ ಯಾವುದೇ ಧಕ್ಕೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಇದನ್ನು ಓದಿ : https://vijayatimes.com/earthquake-in-japan-2/