Bengaluru: ಬಡಜನರಿಗೆ ಎಂದೇ ಆರಂಭವಾದ ನಮ್ಮ ಕ್ಲಿನಿಕ್ (Namma Clinic) ಗೆ ಜನರೇ ಬರ್ತಿಲ್ಲ.ಹಲವಾರು ಸೌಲಭ್ಯಗಳು ಇಲ್ಲಿದ್ದರೂ ಜನ ಮಾತ್ರ ಇತ್ತ ಗಮನ ಹರಿಸುತ್ತಲೇ ಇಲ್ಲ.ಹಾಗಾಗಿ ಇದೀಗ ಬಿಬಿಎಂಪಿ (Bengaluru BBMP) ಹೊಸ ಪ್ಲಾನ್ ಮಾಡಿದೆ. ಇನ್ಮುಂದೆ ಕ್ಲಿನಿಕ್ನಲ್ಲೇ ಯೋಗ ಕ್ಲಾಸ್ (Yoga Classes) ನಡೆಸೋಕೆ ತಯಾರಿ ನಡೆಸಿದೆ. ಬಿಬಿಎಂಪಿ ನಿರ್ಧಾರಕ್ಕೆ ಸಿಟಿ ಮಂದಿ (People) ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೊಳೆಗೇರಿ ನಿವಾಸಿಗಳು (Slum dwellers) , ದಿನಗೂಲಿ ಕಾರ್ಮಿಕರು ಮತ್ತು ದುರ್ಬಲ ವರ್ಗಗಳಿಗೆ (Wage laborers and Weaker sections) ಸುಲಭವಾಗಿ ವೈದ್ಯಕೀಯ ಸೇವೆ ನೀಡಬೇಕು ಅನ್ನೋ ಉದ್ದೇಶದಿಂದ ನಮ್ಮ ಕ್ಲೀನಿಕ್ಗಳನ್ನ ಆರಂಭಿಸಲಾಗಿದೆ. ಆದರೆ ಈ ಕ್ಲಿನಿಕ್ಗಳು ಹೆಸರಿಗಷ್ಟೇ ಇದ್ದು, ಜನರನ್ನು ಮಾತ್ರ ಸೆಳೆಯುವಲ್ಲಿ ವಿಫಲವಾದ ಕಾರಣ ಔಷಧಿ ಕೊರತೆ (Drug shortage) ಸೇರಿದಂತೆ ಮೂಲಸೌಕರ್ಯ ಕೊರತೆಯಿಂದ ಚಿಕಿತ್ಸೆ ಬರಲು ಹಿಂದೇಟು ಹಾಕ್ತಿದ್ದಾರೆ. ಇದೀಗ ಕ್ಲಿನಿಕ್ಗಳಿಗೆ ಹೊಸ ಟಚ್ ಕೊಡೋದಕ್ಕೆ ಪಾಲಿಕೆ ಮುಂದಾಗಿದೆ. ನಗರದ 230 ಕ್ಲಿನಿಕ್ಗಳಲ್ಲಿ ವಾರಕ್ಕೊಮ್ಮೆ ಯೋಗ ಶಿಕ್ಷಣ ನೀಡಲು ಬಿಬಿಎಂಪಿ ಸಜ್ಜಾಗಿದೆ.
ಇನ್ನು ಈ ಕುರಿತಾಗಿ ಮಾಹಿತಿ ನೀಡಿರುವ ಬಿಬಿಎಂಪಿ (BBMP) ಚೀಫ್ ಕಮಿಷನರ್ ತುಷಾರ್ ಗಿರಿನಾಥ್, ಯೋಗ, ಆಯುರ್ವೇದ ಚಿಕಿತ್ಸೆ ಕೂಡ ಕೊಡಬೇಕು ಅಂತ ಮಾಡಿದ್ದೇವೆ. 2022-23ರಲ್ಲಿಯೇ ಈ ಯೋಜನೆ ಜಾರಿ ಮಾಡುವ ಪ್ಲ್ಯಾನ್ ಮಾಡಲಾಗಿತ್ತು. ಕೆಲವು ಕಡೆ ಸ್ವಯಂ (Self) ಪ್ರೇರಣೆಯಿಂದ ಮಾಡಿದ್ದಾರೆ. ನ್ಯಾಷನಲ್ ಹೆಲ್ತ್ ಮಿಷನ್ (National Health Mission) ಅಡಿಯಲ್ಲಿ ವಾರಕ್ಕೊಮ್ಮೆ ಯೋಗ ಕ್ಲಾಸ್ ನಡೆಸೋಕೆ ಪ್ಲಾನ್ ಮಾಡಿರೋ ಪಾಲಿಕೆ, ಇದಕ್ಕಾಗಿ ಆಶಾ ಕಾರ್ಯಕರ್ತೆಯರನ್ನ ಬಳಸಿಕೊಳ್ಳೋದಕ್ಕೆ ತಯಾರಿ ನಡೆಸಿದೆ. ನಮ್ಮ ಕ್ಲಿನಿಕ್ಗಳಲ್ಲಿ ಪ್ರತ್ಯೇಕ (Separate in clinics) ಕೊಠಡಿಗಳನ್ನೂ ಸಿದ್ಧಪಡಿಸ್ತಿದೆ. ಸದ್ಯ ತಿಂಗಳಲ್ಲಿ 4 ದಿನ ಯೋಗ ತರಗತಿ ನಡೆಸೋಕೆ ನಿರ್ಧಾರ ಮಾಡಿದ್ದು, ಈ ಮೂಲಕ ಜನರನ್ನ ಆಕರ್ಷಿಸಲು ಮುಂದಾಗಿದೆ.ನಮ್ಮ ಹಣದ ಇತಿ ಮಿತಿ ನೋಡಿಕೊಂಡು ಮುಂದಿನ ದಿನಗಳಲ್ಲಿ ಮತ್ತಷ್ಟು ಯೋಜನೆ ಜಾರಿ ಮಾಡ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.