ಹೈದರಾಬಾದ್: ಟಾಲಿವುಡ್‌ನಲ್ಲಿ ದೊಡ್ಡ ಮಟ್ಟದ ಖ್ಯಾತಿ ಪಡೆದುಕೊಂಡಿರುವ ನಟ ನಂದಮೂರಿ ಬಾಲಕೃಷ್ಣ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.ಆದರೆ ಈಗ ಅವರ ಅಭಿಮಾನಿಗಳು ಆತಂಕಗೊಳ್ಳುವ ಸುದ್ಧಿಯೊಂದು ಹೊರ ಬಿದ್ದಿದೆ. ಬಾಲಕೃಷ್ಣಅವರು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ, ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಹಾಗಾದರೆ ನಟ ಬಾಲಕೃಷ್ಣಅವರಿಗೆ ಏನಾಗಿದೆ???
ನಟ ಬಾಲಕೃಷ್ಣಅವರು ಕಳೆದ ಹಲವಾರು ದಿನಗಳಿಂದ ಭುಜದ ನೋವು ಕಾಡುತ್ತಿತ್ತು,ಅವರು ಶಸ್ತ್ರ ಚಿಕಿತ್ಸೆಮಾಡಿಕೊಳ್ಳಬೇಕಿತ್ತು.ಆದರೆ ಶಸ್ತ್ರ ಚಿಕಿತ್ಸೆ ಮಾಡಿಕೊಂಡರೆ ಅವರು ವಿಶ್ರಾಂತಿ ಪಡೆಯಬೇಕು. ವಿಶ್ರಾಂತಿ ತಗೊಂಡರೆ ಅವರ ಎಲ್ಲಾ ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಬೇಕಾಗಿತ್ತು.ಈ ಕಾರಣಕ್ಕೆ ಅವರು ಮುಂದೂಡುತ್ತಲೇ ಇದ್ದರು.
ಅಕ್ಟೋಬರ್ 29ರಂದು ಪುನೀತ್‌ರವರು ಹೃದಯಾಘಾತದಿಂದ ಮೃತಪಟ್ಟಿದ್ದರು.ಇದನ್ನ ಕೇಳಿ ನಟ ಬಾಲಕೃಷ್ಣಅವರು ತುಂಬಾ ಭಾವುಕರಾಗಿದ್ದರು ಹಾಗೂ ಅವರಿಗೆ ಕೊನೆಯ ನಮನ ಸಲ್ಲಿಸೋಕೆ ಬಾಲಕೃಷ್ಣ ಅವರು ಬೆಂಗಳೂರಿಗೆ ಆಗಮಿಸಿದ್ದರು.ಇದಾದ ನಂತರ ನವಂಬರ್ 2 ರಂದು ಬಾಲಕೃಷ್ಣ ಅವರಿಗೆ ತೀವ್ರವಾಗಿ ಭುಜದ ನೋವು ಬಂದಿತ್ತು ಅವರನ್ನುಕೂಡಲೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಾಲ್ಕು ಗಂಟೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ,ಹಾಗೂ ಆರೋಗ್ಯಯುತವಾಗಿದ್ದಾರೆ.ಸದ್ಯಕ್ಕೆ ಬಾಲಕೃಷ್ಣ ಅವರು ಆಸ್ಪತ್ರೆಯಲ್ಲೇ ಇದ್ದಾರೆ ಹಾಗೂ ಶೀಘ್ರದಲ್ಲೇ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತಿದೆ.ಇನ್ನೂ ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ಧಾರೆ.