ಹಾಲಿನ ದರ 5 ರೂ. ಹೆಚ್ಚಾಗುವ ಸಾದ್ಯತೆ
ರಾಜ್ಯದ ಜನರಿಗೆ ಅಮೃತವಾಗುತ್ತಾ ಹಾಲು! (Nandini milk price hike)
ದರ ಏರಿಕೆಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್
ಅಧಿವೇಶನ ಬಳಿಕ ದರ ಹೆಚ್ಚಳವಾಗುತ್ತಾ?
Bangalore : ಈಗಾಗಲೇ ದಿನನಿತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ.ಬಸ್,ಮೆಟ್ರೋ (Metro) ದರ ಸೇರಿದಂತೆ ಅನೇಕ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಈಗ ನಂದಿನಿ ಹಾಲಿನ ದರ ಏರಿಕೆಯಿಂದ ಜನರಿಗೆ ಹೊರೆ ಹೆಚ್ಚಾಗಿದೆ.
ಹಾಲಿನ ದರ ಏರಿಕೆ ಮಾಡಲು ಈಗಾಗಲೇ ಸರ್ಕಾರ ಸಿದ್ದತೆ ನಡೆಸಿದ್ದು, ಅಧಿವೇಶನದ ಬಳಿಕ ಪ್ರತಿ ಲೀಟರ್ ಹಾಲಿನ ದರ 5 ರೂ ಹೆಚ್ಚಾಗುವುದು ಖಚಿತ ಎನ್ನಲಾಗುತ್ತಿದೆ.ಹಾಲಿನ ದರ ಏರಿಕೆ ಮಾಡುವ ಕುರಿತು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ (KMF) ಅವರು ಸಿಎಂ ಜೊತೆ ಮಾತುಕತೆ ನಡೆಸಲಿದ್ದಾರೆ.ರೈತರು ಹಾಲಿನ ದರ ಹೆಚ್ಚಳ ಮಾಡುವಂತೆ ಕೆಲ ದಿನಗಳ ಹಿಂದೆ ಪ್ರತಿಭಟನೆ ಮಾಡಿತ್ತಿದ್ದರು.
ಜೊತೆಗೆ ಹಾಲು ಒಕ್ಕೂಟಗಳಿಂದ ನಂದಿನಿ ಹಾಲಿನ ದರ ಹೆಚ್ಚಳ ಮಾಡುವಂತೆ ಕೆಎಂಎಫ್ ಮೇಲೆ ಒತ್ತಡ ಹಾಕುತ್ತಿವೆ,ಹೀಗಾಗಿ ನಂದಿನಿ ಹಾಲಿನ ದರವನ್ನು ಏರಿಕೆ ಮಾಡಲು ಅನುಮತಿ ನೀಡುವಂತೆ ಕೆಎಂಎಫ್ ಆಡಳಿತ ಮಂಡಳಿ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

2025-26 ರ ಬಜೆಟ್ ಅಧಿವೇಶನ ನಡೆಯುತ್ತಿದ್ದು, ಸಿಎಂ ಅನುಮತಿ ಸಿಕ್ಕ ನಂತರ ಹಾಲಿನ ದರ ಏರಿಕೆ ಆಗುವ ಸಾಧ್ಯತೆಯಿದೆ.ಬಜೆಟ್ ಅಧಿವೇಶನ (session) ಮುಗಿದ ಬಳಿಕ ಪ್ರತಿ ಲೀಟರ್ ಹಾಲಿಗೆ ಸುಮಾರು 5 ರೂ. ಗಳು ಹೆಚ್ಚಾಗುವ ಸಂಭವವಿದೆ.ಸಾಕಷ್ಟು ಭಾರಿ ಹಾಲಿನ ದರ ಏರಿಕೆ ಮಾಡುವಂತೆ ಹಾಲಿನ ಒಕ್ಕೂಟಗಳು ಸರ್ಕಾರಕ್ಕೆ ಮನವಿ ಮಾಡಿದ್ದವು ಆದರೆ ಸರ್ಕಾರ ಇದಕ್ಕೆ ಅನುಮತಿ ನೀಡಿರಲಿಲ್ಲ.
ಆದರೆ ರೈತರು ಹಾಲಿನ ದರ ಹೆಚ್ಚಳ ಮಾಡುವಂತೆ ಒತ್ತಾಯ ಮಾಡಿರುವುದರಿಂದ ದರ ಏರಿಕೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.ಅಧಿವೇಶನದ ಬಳಿಕ ಜನರಿಗೆ ಹಾಲಿನ ದರದ ಬಿಸಿ ತಟ್ಟುವ ಸಾದ್ಯತೆ ಇದ್ದು, ಕಾಂಗ್ರೆಸ್ ಸರ್ಕಾರ (Congress ) ಅಧಿಕಾರಕ್ಕೆ ಬಂದ ಬಳಿಕ ಎರಡನೇ ಬಾರಿಗೆ ಹಾಲಿನ ದರ ಹೆಚ್ಚಳ ಮಾಡಲಾಗುತ್ತಿದೆ.ಕಳೆದ ವರ್ಷ ಜೂನ್ ನಲ್ಲಿ ಹಾಲಿನ ದರವನ್ನು ಏರಿಕೆ ಮಾಡಲಾಗಿತ್ತು.
ಪ್ರತಿ ಲೀಟರ್ ಗೆ 10 ರೂಪಯಿ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಕೆಎಂಎಫ್ (Nandini milk price hike) ಪ್ರಸ್ತಾವನೆ ಕಳಿಸಿತ್ತು,ದರ ಏರಿಕೆ ಮಾಡುತ್ತಿರುವ ಕಾರಣಗಳು,ಸಾಧಕ ಭಾದಕಗಳ ಬಗ್ಗೆ ಕೆಎಂಎಫ್ ಹಾಲು ಒಕ್ಕೂಟಗಳ ಜೊತೆ ಸಭೆ ಕರೆದು ಮಾತನಾಡಿದೆ.ದರ ಪರಿಷ್ಕರಣೆಗೆ ಮುಖ್ಯಮಂತ್ರಿಗಳ ಅನುಮತಿಗಾಗಿ ಕೆಎಂಎಫ್ ಆಡಳಿತ ಮಂಡಳಿ ಕಾಯುತ್ತಿದೆ.
ಇದನ್ನು ಓದಿ: ನಂದಿನಿ ಹಾಲಿನ ದರವನ್ನು ಹೆಚ್ಚಿಸುವ ಸುಳಿವು ನೀಡಿದ ಸಿಎಂ ಸಿದ್ದರಾಮಯ್ಯ
ಸಿಎಂ ಅನುಮತಿ ಸಿಕ್ಕ ಬೆನ್ನಲ್ಲೆ ದರ ಏರಿಕೆಗೆ ಕೆಎಂಎಫ್ ತಯಾರಿ ಮಾಡಿದೆ.ಮಾರ್ಚ್ 3 ರಿಂದ ಮಾರ್ಚ್ 21 ರವರೆಗೆ ಅಧಿವೇಶನ ನಡೆಯುತ್ತಿದ್ದು ವಿಧಾನಮಂಡಲದ ಅಧೀವೇಶನದ ಬಳಿಕ ಸಹಕಾರ ಸಚಿವರು,ಪಶು ಸಂಗೋಪನಾ ಸಚಿವರು,ಕೆಎಂಎಫ್ ಅಧ್ಯಕ್ಷರು,ಜಿಲ್ಲಾ ಹಾಲು ಒಕ್ಕೂಟಗಳ ಪ್ರತಿನಿಧಿಗಳ ಜೊತೆಗ ಸಭೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ಮುಖ್ಯಮಂತ್ರಿಗಳು ಗ್ರಾಹಕರಿಗೂ ಹೊರೆಯಾಗದಂತೆ ಆರ್ಥಿಕವಾಗಿ ಹಾಲು ಒಕ್ಕೂಟಗಳಿಗೂ ಸಮಸ್ಯೆಯಾಗದಂತೆ ದರ ಏರಿಕೆ ಬಗ್ಗೆ ನಿರ್ಣಯ ಕೈಗೊಳ್ಳಲಿದ್ದಾರೆ. ಹಾಲಿನ ದರವನ್ನು ಲೀಟರ್ಗೆ 3 ರೂ. ಹೆಚ್ಚಳ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.