Bengaluru: ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ನಾರಾಯಣ ನೇತ್ರಾಲಯವು (Narayana Nethralaya’s gene therapy) ಆನುವಂಶಿಕ ಅಸ್ವಸ್ಥತೆಗಳಾದ ಕೆರಾಟೋಕೊನಸ್, ಕಾರ್ನಿಯಲ್
ಡಿಸ್ಟ್ರೋಪಿ, ಇರುಳು ಕುರುಡು ಮುಂತಾದ ಕಾಯಿಲೆಗೆ ಚಿಕಿತ್ಸೆ ನೀಡಲು ಜೀನ್ ಥೆರಪಿ (Gene Therapy) ಪ್ರಯೋಗಗಳನ್ನು ಆರಂಭಿಸಲಿದೆ. ಡಿಸೆಂಬರ್ ವೇಳೆಗೆ ಈ ಚಿಕಿತ್ಸೆಯು ಪ್ರಾರಂಭವಾಗುವ ನಿರೀಕ್ಷೆಯಿದೆ.

ಬೆಂಗಳೂರಿನ ನಾರಾಯಣ ನೇತ್ರಾಲಯವು ಕಣ್ಣಿನ ಅನುವಂಶಿಕ ಅಸ್ವಸ್ಥತೆಗಳಿಗೆ ಚಿಕಿತ್ಸೆ ಕೊಡಲು ರೋಗಿಗಳ ಮೇಲೆ ಜೀನ್ ಥೆರಪಿ (Gene Therapy) ಪ್ರಯೋಗಗಳನ್ನು ಅತೀ ಶೀಘ್ರದಲ್ಲೇ ಪ್ರಾರಂಭಿಸಲಿದೆ.
ಇದು ಭಾರತದಲ್ಲಿಯೇ ಮೊದಲ ಜೀನ್ ಥೆರಪಿ ಪ್ರಯೋಗ ಎಂದು ವರದಿಗಳ (Narayana Nethralaya’s gene therapy) ಪ್ರಕಾರ ತಿಳಿಸಲಾಗಿದೆ.
ಅನೇಕ ಅನುವಂಶಿಕ ಅಸ್ವಸ್ಥತೆಗಳಾದ ಇರುಳು ಕುರುಡು, ಒಣ ಕಣ್ಣಿನ ಕಾಯಿಲೆ, ಕಾರ್ನಿಯಲ್ ಡಿಸ್ಟ್ರೋಫಿ, ಮಸ್ಕ್ಯುಲರ್ ಡಿಸ್ಟ್ರೋಫಿ (Muscular Dystrophy) ಸೇರಿದಂತೆ ಚಿಕಿತ್ಸೆ ನೀಡಲು ಜೀನ್
ಥೆರಪಿಯನ್ನು ಬಳಸಲಾಗುತ್ತದೆ. ಮೂಲಗಳ ಪ್ರಕಾರ ಜೀನ್ ಥೆರಪಿ ಪ್ರಯೋಗವು ಡಿಸೆಂಬರ್ನಲ್ಲಿ ಪ್ರಾರಂಭವಾಗುವ ಲಕ್ಷಣಗಳಿವೆ.
ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ. ರೋಹಿತ್ ಶೆಟ್ಟಿ (Dr. Rohit Shetty) ಅವರು ಇಂತಹ ಅನುವಂಶಿಕ ಕಾಯಿಲೆಯಿಂದ ದೇಶದಲ್ಲಿ 10,000 ಸಾವಿರ ಜನರಲ್ಲಿ ಒಬ್ಬರು ಬಳಲುತ್ತಿದ್ದು, ಜೀನ್ ಥೆರಪಿ ಅಧ್ಯಯನವು
ಈ ಅಸ್ವಸ್ಥತೆಗಳನ್ನು ಗುಣಪಡಿಸಲು ಅತೀ ಮುಖ್ಯ. ತಾಯಿಯಿಂದ ಮಗುವಿಗೆ ಅನುವಂಶಿಕವಾಗಿ ಹರಡುವ ಅಸ್ವಸ್ಥತೆಗಳನ್ನು ತಡೆಯಲು ಮಾತ್ರವಲ್ಲದೆ, ರೋಗಿಗಳನ್ನು ಕಾಯಿಲೆಯಿಂದ ಗುಣಪಡಿಸಲು ಜೀನ್ ಚಿಕಿತ್ಸೆಯು
ಸಹಾಯ ಮಾಡಲು ಸಹಕಾರಿ ಎಂದು ಹೇಳಿದ್ದಾರೆ.
ಜೀನ್ ಥೆರಪಿಯು ದೇಶದಲ್ಲಿ 70 ಲಕ್ಷಕ್ಕೂ ಹೆಚ್ಚು ಅನುವಂಶಿಕ ಅಸ್ವಸ್ಥತೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. ಹೊರ ದೇಶಗಳಲ್ಲಿ ಮಾತ್ರ ಪ್ರಸ್ತುತ ಜೀನ್ ಥೆರಪಿ ಚಿಕಿತ್ಸೆಯು
ಲಭ್ಯವಿದ್ದು, ಆ ದೇಶಗಳಲ್ಲಿ ಒಬ್ಬ ರೋಗಿಗೆ ಚಿಕಿತ್ಸೆ ಮಾಡಲು 1.4 ಮಿಲಿಯನ್ ಡಾಲರ್ (11,51,74,640.00) ವರೆಗೂ ಖರ್ಚು ಆಗುತ್ತದೆ.
ಇಂದಿನವರೆಗೂ ಭಾರತದಲ್ಲಿ ಯಾವುದೇ ರೀತಿಯ ಪ್ರಯೋಗಗಳನ್ನು ಮಾಡಲಾಗಿಲ್ಲ. ಹಾಗಾಗಿ ಕಡಿಮೆ ವೆಚ್ಚದಲ್ಲಿ ಅನುವಂಶಿಕ ಅಸ್ವಸ್ಥತೆಗಳನ್ನು ಗುಣಪಡಿಸಲು ನಾರಾಯಣ ನೇತ್ರಾಲಯವು ಜೀನ್ ಥೆರಪಿ
ಪ್ರಯೋಗವನ್ನು ಶುರುಮಾಡಲಿದೆ.

ಜೀನ್ ಥೆರಪಿ ಸಂಶೋಧನೆಯನ್ನು ನಾರಾಯಣ ನೇತ್ರಾಲಯದ ಸಂಸ್ಥಾಪಕ ಮತ್ತು ಮಾಜಿ ಅಧ್ಯಕ್ಷ ಡಾ. ಭುಜಂಗ ಶೆಟ್ಟಿ (Dr. Bhujanga Shetty) ನೇತೃತ್ವದಲ್ಲಿ 10 ವರ್ಷಗಳ ಹಿಂದೆ ಪ್ರಾರಂಭಿಸಲಾಗಿದ್ದು,
ಇಲ್ಲಿಯವರೆಗೆ 150 ಕೋಟಿ ರೂಪಾಯಿಗಳನ್ನು ಹಲವಾರು ಪ್ರಯೋಗಗಳನ್ನು ಸ್ಥಾಪಿಸಲು ಮತ್ತು ಜೀನ್ ಥೆರಪಿ ಪ್ರಯೋಗವನ್ನು ಪ್ರಾರಂಭಿಸಲು ಸಂಸ್ಥೆಯು ಖರ್ಚು ಮಾಡಿದೆ.
ಜೀನ್ ಚಿಕಿತ್ಸೆ ಎಂದರೆ:
ಜೀನ್ ಥೆರಪಿ ಎಂದರೆ ಇದೊಂದು ರೀತಿಯ ವೈದ್ಯಕೀಯ ಚಿಕಿತ್ಸಾ ಮಾದರಿಯಾಗಿದ್ದು, ಆಧಾರವಾಗಿರುವ ಅನುವಂಶಿಕ ಸಮಸ್ಯೆಗಳನ್ನು ಸರಿಪಡಿಸುವ ಮೂಲಕ ರೋಗವನ್ನು ಗುಣಪಡಿಸುತ್ತದೆ.
ಅನುವಂಶಿಕ ಅಸ್ವಸ್ಥತೆಯನ್ನು ಜೀನ್ ಥೆರಪಿ ಸಹಾಯದಿಂದ ಔಷಧಿಗಳು ಅಥವಾ ಶಸ್ತ್ರಚಿಕಿತ್ಸೆಯ ಬದಲಿಗೆ, ವೈದ್ಯರು ವ್ಯಕ್ತಿಯ ಅನುವಂಶಿಕ ಪರಿಸ್ಥಿತಿಗಳನ್ನು ಬದಲಾಯಿಸುವ ಮೂಲಕ ಚಿಕಿತ್ಸೆ ನೀಡುತ್ತಾರೆ.
ಜೀನ್ ಥೆರಪಿಯಲ್ಲಿ ದೋಷಮುಕ್ತ ಜೀನ್ಗಳನ್ನು ಬದಲಾಯಿಸಲಾಗುತ್ತದೆ ಮತ್ತು ರೋಗವನ್ನು ನಿವಾರಿಸಲು ಅಥವಾ ಅದರ ವಿರುದ್ಧ ಹೋರಾಡಲು ದೇಹದ ಸಾಮರ್ಥ್ಯವನ್ನು ಹೆಚ್ಚಿಸಲು ಹೊಸ ಜೀನ್ಗಳನ್ನು ಸೇರಿಸಲಾಗುತ್ತದೆ.
ಭವ್ಯಶ್ರೀ.ಆರ್.ಜೆ