vijaya times advertisements
Visit Channel

ಯುದ್ಧ ಮುಗಿಯುವವರೆಗೂ ಶಸ್ತ್ರಾಸ್ತ್ರ ಕೆಳಗಿಳಿಸಬೇಡಿ – ಪ್ರಧಾನಿ

ನವದೆಹಲಿ  22: ಯುದ್ಧ ಮುಗಿಯುವವರೆಗೂ ಶಸ್ತ್ರಾಸ್ತ್ರ ಕೆಳಗಿಳಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

  ದೇಶದಲ್ಲಿ ಇದುವರೆಗೆ 100 ಕೋಟಿ ಕೊರೊನಾ ಲಸಿಕೆಯನ್ನು ನೀಡಿರುವ ಹಿನ್ನಲೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ,  ದೇಶದ ಜನತೆ ಎಚ್ಚರಿಕೆಯಿಂದಿರಬೇಕು, ನಾವು ಧರಿಸಿರುವ ಕವಚ ಎಷ್ಟೇ ಉತ್ತಮವಾಗಿದ್ದರೂ, ಅದುನಿಕವಾಗಿದ್ದರೂ, ಯುದ್ಧ ಮುಗಿಯುವವರೆಗೆ ಶಸ್ತ್ರಾಸ್ತ್ರ ಕೆಳಗಿಳಿಸಬಾರದು. ಹೇಗೆ ಪ್ರತಿನಿತ ಚಪ್ಪಲಿಯನ್ನು ಧರಿಸಿಯೇ ಮನೆಯಿಂದ ಹೊರಡುತ್ತೀವೋ ಹಾಗೆಯೇ ಮಾಸ್ಕ್ ಧರಿಸಿ ಮನೆಯಿಂದ ಹೊರಡಿ, ಲಸಿಕೆ ಸಿಗದವರು ಲಸಿಕೆ ಪಡೆಯಲು ಪ್ರಯತ್ನಿಸಿ ಲಸಿಕೆ ಸಿಕ್ಕವರು ಬೇರೆಯವರಿಗೆ ಪ್ರೇರಣೆಯನ್ನು ನೀಡಿ ಎಂದು ಹೇಳಿದರು.

ನಮ್ಮ ದೇಶವು ಒಂದು ಕಡೆ ಕರ್ತವ್ಯದ ಪಾಲನೆ ಮಾಡುತ್ತಿದೆ, ಮತ್ತೊಂದು ಕಡೆ ಸಫಲತೆ ಸಿಕ್ಕಿದೆ, 21 ಅಕ್ಟೋಬರ್ ರಂದು ಭಾರತವು 100 ಕೋಟಿ ಲಸಿಕೆಯನ್ನು ನೀಡಿ ಅಸಾಧಾರಣವಾದುದ್ದನ್ನು ಸಾಧಿಸಿ ತೋರಿಸಿದೆ. 130 ಕೋಟಿ ಜನರ ಕರ್ತವ್ಯ ಶಕ್ತಿ ಇದರಲ್ಲಿ ಅಡಕವಾಗಿದೆ ಎಂದು ಹೇಳಿದರು.

100 ಕೋಟಿ ಕೊರೊನಾ ಲಸಿಕೆ ದೇಶದ ಸಾಮರ್ಥ್ಯದ ಪ್ರತಿಬಿಂಬವಾಗಿದೆ, ಇತಿಹಾಸದ ಹೊಸ ಅಧ್ಯಾಯದ ರಚನೆಯಾಗಿದೆ, ಕಷ್ಟವಾದುದನ್ನು ಸಾಧಿಸಿ ತೋರಿಸಲಾಗಿದೆ ಇದರಿಂದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ ಎಂದು ನುಡಿದರು

ಪ್ರಧಾನಿ ಮೋದಿ ಭಾಷಣದ ಪ್ರಮುಖಾಂಶಗಳು

  • 100 ಕೋಟಿ ಮಂದಿಗೆ ಉಚಿತವಾಗಿ ಲಸಿಕೆ ನೀಡಲಾಗಿದೆ. ಭಾರತ ಹೊರನಾದಿಂದ ಸುರಕ್ಷಿತವಾಗಿದೆ. ಸಂಪೂರ್ಣ ವಿಶ್ವವೇ ಭಾರತೀಯರ ತಾಕತ್ತನ್ನು ನೋಡುತ್ತಿದೆ
  • `ಮತ್ತೊಮ್ಮೆಸಬ್ಕಾ ಸಾಥ್, ಸಬ್ಕಾ ಪ್ರಯಾಸ್, ಸಬಕಾ ವಿಕಾಸ್‌ ಸಾಬೀತಾಗಿದೆ.
  • ಕೊರೊನಾವು ಹೇಗೆ ಬಡವ ಬಲ್ಲಿದನೆಂಬ ಬೇಧಭಾವವಿಲ್ಲದೆ ಎಲ್ಲರನ್ನೂ ಆಕ್ರಮಿಸಿತೋ ಹಾಗೆಯೇ ಲಸಿಕೆಯನ್ನು ನೀಡುವಲ್ಲಿ ಬೇಧಭಾವ ಮಾಡಿಲ್ಲ. ವಿಐಪಿ ಕಲ್ಚರ್ಗೆ ಆಸ್ಪದ ಕೊಡದೆ ಎಲ್ಲರಿಗೂ ಒಂದೇ ರೀತಿಯ ಲಸಿಕೆಯನ್ನು ನೀಡಲಾಗಿದೆ
  • ಬೇರೆ ದೇಶಗಳನ್ನು ಗಮನಿಸುವುದಾದರೆ ಲಸಿಕೆಯನ್ನು ಪಡೆಯಲು ಈಗಲೂ ಜನರು ಮುಂದೆ ಬರುತ್ತಿಲ್ಲ. ಅಂತಹ ಸಂದರ್ಭದಲ್ಲಿ ಭಾರತದಲ್ಲಿ 100 ಕೋಟಿ ಕೊಡುವಾ ಲಸಿಕೆ ನೀಡಲಾಗಿದೆ ಎನ್ನುವುದು ಹೆಮ್ಮೆಯ ವಿಷಯ ಎಂದರು.
  • ಯಾವುದೇ ಸಣ್ಣ ಸಣ್ಣ ವಸ್ತುಗಳೇ ಆಗಿರಲಿ, ನಮ್ಮ ದೇಶದ್ದು ಎನ್ನುವ ಹೆಮ್ಮೆಯಿರಲಿ ಮೇಡ್ ಇನ್ ಇಂಡಿಯಾ ವಸ್ತುಗಳನ್ನು ಹೆಚ್ಚೆಚ್ಚು ಬಳಕೆಮಾಡಿ
  • ಹೇಗೆ ಸ್ವಚ್ಛ ಭಾರತ ಅಭಿಯಾನಕ್ಕೆ ನೀವೆಲ್ಲರೂ ಜೊತೆಯಾಗಿದ್ದೀರೋ ಹಾಗೆಯೇ ಮೇಡ್ ಇನ್ ಇಂಡಿಯಾ ಅಭಿಯಾನವನ್ನು ಕೂಡ ಯಶಸ್ವಿಗೊಳಿಸಿ

Latest News

ರಾಜ್ಯ

ಮುಸ್ಲಿಂ ವಿದ್ಯಾರ್ಥಿಯನ್ನು ‘ಭಯೋತ್ಪಾದಕ’ ಎಂದು ಕರೆದಿದ್ದಕ್ಕಾಗಿ ಪ್ರಾಧ್ಯಾಪಕ ಅಮಾನತು!

ನಾವು ಸ್ವಯಂಪ್ರೇರಿತ ಕ್ರಮವನ್ನು ತೆಗೆದುಕೊಂಡಿದ್ದೇವೆ. ವಾಸ್ತವವಾಗಿ ಯಾರೂ ಇಲ್ಲದ ಕಾರಣ ವಿದ್ಯಾರ್ಥಿಯು ನಿಜವಾಗಿಯೂ ಆತಂಕಕ್ಕೊಳಗಾಗಿದ್ದಾನೆ.

ರಾಜಕೀಯ

ನೀವು ಬಡವರು ಎಂದು ಹೇಳಿಕೊಳ್ಳುತ್ತೀರಿ, ಆದ್ರೆ ನಾನು ಅಸ್ಪೃಶ್ಯರಲ್ಲಿ ಒಬ್ಬ : ಮಲ್ಲಿಕಾರ್ಜುನ ಖರ್ಗೆ

ನಾನು ಅಸ್ಪೃಶ್ಯರಲ್ಲಿ ಒಬ್ಬ. ಜನರು ನಿಮ್ಮ ಚಹಾವನ್ನು ಕುಡಿಯುತ್ತಿದ್ದರು,  ಆದರೆ ಯಾರೂ ನನ್ನ ಚಹಾವನ್ನು ಸೇವಿಸಲಿಲ್ಲ ಎಂದು ಖರ್ಗೆ ಅವರು ಪರೋಕ್ಷವಾಗಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು.  

ರಾಜಕೀಯ

ಒಕ್ಕಲಿಗರಿಗೆ 4%-12% ಮೀಸಲಾತಿ ; ಇದು ಉತ್ತಮ ಬೇಡಿಕೆಯಾಗಿದೆ : ನಟ ಚೇತನ್

ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಕರ್ನಾಟಕದ ಒಕ್ಕಲಿಗ ಲಾಬಿಗಳು ಒಕ್ಕಲಿಗರಿಗೆ 4% – 12% ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದಾರೆ.