Bangalore: ಅಮೆರಿಕ ಅಧ್ಯಕ್ಷ (President of America) ಡೊನಾಲ್ಡ್ ಟ್ರಂಪ್ (Donald Trump) ಅವರ ಪ್ರಮಾಣ ವಚನ ಸಮಾರಂಭಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ (Indian Prime Minister Narendra Modi) ಅವರಿಗೆ ಆಹ್ವಾನ ನೀಡಿಲ್ಲ. ಈ ಬಗ್ಗೆ ರಾಜ್ಯ ಕಾಂಗ್ರೆಸ್ (State Congress) ಟ್ವೀಟ್ ಮಾಡಿ ವ್ಯಂಗ್ಯವಾಡಿದೆ. ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರಿಗೆ ಆಹ್ವಾನ ನೀಡದಿರಲು ಗೌತಮ್ ಅದಾನಿ (Gautham Adani), ಮೋದಿ ಜನಪ್ರಿಯತೆ ಕುಸಿತ, ಅಮೆರಿಕ ಚೀನಾ ಕಡೆ ವಾಲುತ್ತಿದೆಯೇ? ಎಂಬ ಮೂರು ಕಾರಣ ಎಂದು ಹೇಳಿದೆ.

ರಾಜ್ಯ ಕಾಂಗ್ರೆಸ್ ಟ್ವೀಟ್ನಲ್ಲಿ ಏನಿದೆ?
ಅಮೆರಿಕಾದ ನೂತನ ಅಧ್ಯಕ್ಷರ ಪ್ರಮಾಣ ವಚನಕ್ಕೆ ಚೀನಾದ ಅಧ್ಯಕ್ಷ ಜಿನ್ಪಿಂಗ್ (Chinese President Xi Jinping), ಇಟಲಿಯ ಪ್ರಧಾನಿ ಜಿಯಾರ್ಜಿಯಾ ಮೆಲೋನಿಗೂ (Italian Prime Minister Giorgia Meloni), ಉದ್ಯಮಿ ಮುಕೇಶ್ ಅಂಬಾನಿ (Businessman Mukesh Ambani), ನೀತಾ ಅಂಬಾನಿ (Nita Ambani) ಸೇರಿದಂತೆ ಭಾರತದಲ್ಲಿ ಬ್ಯಾನ್ ಆದ TikTok ಕಂಪನಿಗೂ (TikTok company) ಆಹ್ವಾನ ನೀಡಿರುವ ಅಮೇರಿಕಾ ಭಾರತದ ಪ್ರಧಾನಿ ಮೋದಿಯವರನ್ನು ಆಹ್ವಾನಿಸದೆ ಕಡೆಗಣಿಸಿದೆ. ಹೌದು ಮೋದಿ, ನಮಸ್ತೆ ಟ್ರಂಪ್ ಕಾರ್ಯಕ್ರಮಗಳ ಮೂಲಕ ಟ್ರಂಪ್ಗೆ ಪ್ರಚಾರ ನೀಡಿದ್ದ, ಟ್ರಂಪ್ ಚುನಾವಣೆಗೂ ಸಹಾಯ ಮಾಡಿದ್ದ, ಮಾಧ್ಯಮಗಳಲ್ಲಿ ‘ಆಪ್ತಮಿತ್ರ’ ಎಂದೇ ಬಿಂಬಿಸಿಕೊಂಡಿದ್ದ ಮೋದಿಯವರನ್ನು ಪ್ರಮಾಣ ವಚನಕ್ಕೆ ಆಹ್ವಾನಿಸದಿರುವುದು ಅಮೆರಿಕಾ ಭಾರತದ ಪ್ರತಿಸ್ಪರ್ಧಿ ಚೀನಾ ಪರ ವಾಲುತ್ತಿರುವ ಲಕ್ಷಣವೇ? ಅಮೆರಿಕಾದಲ್ಲಿ ಲಂಚ, ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಪ್ರಧಾನಿಗಳ ‘ಗೆಳೆಯ’ ಅದಾನಿ ಮೋಹ, ಮೋದಿಯವರ ಜನಪ್ರಿಯತೆ ಕುಸಿದಿರುವುದೇ ಆಹ್ವಾನಿಸದಿರಲು ಕಾರಣವಾಯ್ತೇ?!
ಟ್ರಂಪ್ ಭಾರತಕ್ಕೆ ಬರಲಿದ್ದಾರಾ..?
ಡೊನಾಲ್ಡ್ ಟ್ರಂಪ್ (Donald Trump) ಅವರು ಅಧಿಕಾರ ಸ್ವೀಕರಿಸಿದ ನಂತರ ಚೀನಾ ಮತ್ತು ಭಾರತಕ್ಕೆ (China and India) ಭೇಟಿ ನೀಡಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ನವದೆಹಲಿ (New Delhi) ಹಾಗೂ ಬೀಜಿಂಗ್ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಈ ಎರಡು ದೇಶಗಳ ಭೇಟಿ ನೀಡುವ ಕುರಿತು ಸಲಹೆಗಾರರೊಂದಿಗೆ ಮಾತುಕತೆ ನಡೆಸಿದ್ದಾರೆ. ಏಪ್ರಿಲ್ ಅಥವಾ ಸೆಪ್ಟೆಂಬರ್ನಲ್ಲಿ ಅವರು ಭಾರತಕ್ಕೆ ಭೇಟಿ ನೀಡಬಹುದು ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.