Kochi : ಭಾರತದ(India) ಮೊದಲ ದೇಶಿಯ ನಿರ್ಮಿತ ಯುದ್ದ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್(INS Vikrant) ಇಂದು ಕೊಚ್ಚಿನ್ ಶಿಪ್ಯಾರ್ಡ್ನಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರಿಂದ ಕಾರ್ಯಾರಂಭ ಮಾಡಲಿದೆ.

ಯುದ್ದ ವಾಹಕನೌಕೆಗಳನ್ನು ಹೊಂದಿರುವ ಕೆಲವೇ ಕೆಲವು ರಾಷ್ಟ್ರಗಳ ಸಾಲಿಗೆ ಭಾರತವೂ ಕೂಡಾ ಸೇರ್ಪಡೆಯಾಗಲಿದೆ. ಭಾರತ ದೇಶಿಯವಾಗಿ ನಿರ್ಮಿಸಿರುವ ಈ ಯುದ್ದ ನೌಕೆಯ ಕೆಲ ವಿಶೇಷತೆಗಳ ವಿವರ ಇಲ್ಲಿದೆ ನೋಡಿ.
- ಐಎನ್ಎಸ್ ವಿಕ್ರಾಂತ್ ಯುದ್ದನೌಕೆಯನ್ನು 23,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.
- ನೌಕೆಯನ್ನು ಲೋಕಾರ್ಪಣೆ ಮಾಡುವ ಸಂದರ್ಭದಲ್ಲಿ ಹೊಸ ನೌಕಾ ಧ್ವಜವನ್ನು ಮೋದಿ ಅನಾವರಣಗೊಳಿಸಲಿದ್ದಾರೆ.
- ವಿಕ್ರಾಂತ್ ಎಂದರೆ ವಿಜಯಶಾಲಿ ಮತ್ತು ಧೀರ ಎಂದರ್ಥ.
- ದೇಶಿಯವಾಗಿ ವಿಮಾನವಾಹಕ ನೌಕೆಯನ್ನು ನಿರ್ಮಿಸುವ ಸಾಮರ್ಥ್ಯವನ್ನು ಯುಎಸ್, ಯುಕೆ, ರಷ್ಯಾ, ಚೀನಾ ಮತ್ತು ಫ್ರಾನ್ಸ್ ಮಾತ್ರ ಹೊಂದಿವೆ. ಇದೀಗ ಈ ಗುಂಪಿಗೆ ಭಾರತವೂ ಸೇರ್ಪಡೆಯಾಗಿದೆ.

- ಯುದ್ಧನೌಕೆಯನ್ನು ಭಾರತದ ಪ್ರಮುಖ ಕೈಗಾರಿಕಾ ಸಂಸ್ಥೆಗಳು ಮತ್ತು 100 ಕ್ಕೂ ಹೆಚ್ಚು MSME ಗಳು ಒದಗಿಸಿದ ಸ್ಥಳೀಯ ಉಪಕರಣಗಳು ಮತ್ತು ಯಂತ್ರೋಪಕರಣಗಳನ್ನು ಬಳಸಿ ನಿರ್ಮಿಸಲಾಗಿದೆ.
- ವಿಕ್ರಾಂತ್ ಕಾರ್ಯಾರಂಭದೊಂದಿಗೆ, ಭಾರತವು ಎರಡು ಕಾರ್ಯಾಚರಣೆಯ ವಿಮಾನವಾಹಕ ನೌಕೆಗಳನ್ನು ಹೊಂದಿರುತ್ತದೆ.
- ಭಾರತೀಯ ನೌಕಾಪಡೆಯ ಆಂತರಿಕ ಸಂಸ್ಥೆಯಾದ ವಾರ್ಶಿಪ್ ಡಿಸೈನ್ ಬ್ಯೂರೋ ಮತ್ತು ಸಾರ್ವಜನಿಕ ವಲಯದ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ ಈ ನೌಕೆಯನ್ನು ಜಂಟಿಯಾಗಿ ನಿರ್ಮಿಸಿವೆ.
- ನೌಕೆಯ ನಿರ್ಮಾಣ ಕಾರ್ಯ ಆಗಸ್ಟ್ 2013 ರಲ್ಲಿ ಪೂರ್ಣಗೊಂಡಿತು. ಆದರೆ ಕಳೆದ ಅನೇಕ ವರ್ಷಗಳಿಂದ ನೌಕೆಯನ್ನು ಪ್ರಯೋಗಕ್ಕೆ ಒಳಪಡಿಸಲಾಯಿತು.

- ಇದು ಸುಮಾರು 2,200 ವಿಭಾಗಗಳನ್ನು ಹೊಂದಿದೆ. ಸುಮಾರು 1,600 ಸಿಬ್ಬಂದಿಗಾಗಿ ವಿನ್ಯಾಸಗೊಳಿಸಲಾಗಿದೆ, ಇದರಲ್ಲಿ ಮಹಿಳಾ ಅಧಿಕಾರಿಗಳು ಮತ್ತು ನಾವಿಕರಿಗೆ ಅವಕಾಶ ಕಲ್ಪಿಸಲು ವಿಶೇಷ ಕ್ಯಾಬಿನ್ಗಳಿವೆ.
- ಈ ನೌಕೆ ಫಿಸಿಯೋಥೆರಪಿ ಕ್ಲಿನಿಕ್, ಐಸಿಯು, ಪ್ರಯೋಗಾಲಯಗಳು ಮತ್ತು ಐಸೋಲೇಶನ್ ವಾರ್ಡ್ ಸೇರಿದಂತೆ ಪೂರ್ಣ ಪ್ರಮಾಣದ ವೈದ್ಯಕೀಯ ಸಂಕೀರ್ಣವನ್ನು ಹೊಂದಿದೆ.
- ಇದು ಸ್ಥಳೀಯವಾಗಿ ತಯಾರಿಸಿದ ಸುಧಾರಿತ ಲಘು ಹೆಲಿಕಾಪ್ಟರ್ಗಳು ಮತ್ತು ಲಘು ಯುದ್ಧ ವಿಮಾನ ಜೊತೆಗೆ ಫೈಟರ್ ಜೆಟ್ಗಳು, ಹೆಲಿಕಾಪ್ಟರ್ಗಳನ್ನು ಸೇರಿದಂತೆ 30 ವಿಮಾನಗಳನ್ನು ಒಳಗೊಂಡಿರುವ ಏರ್ ವಿಂಗ್ ಅನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. .