Mangaluru : ಪ್ರಧಾನಿ(Prime Minister) ನರೇಂದ್ರ ಮೋದಿ(Narendra Modi) ಅವರು ಇಂದು 1.30ಕ್ಕೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ, 1.50 ಕ್ಕೆ NMPA ಯಲ್ಲಿ ಹೆಲಿಕಾಪ್ಟರ್ ಮೂಲಕ ಲ್ಯಾಂಡ್ ಆದರು.

2 ಗಂಟೆ ನಂತರ ರಸ್ತೆ ಮೂಲಕ ಗೋಲ್ಡ್ ಫಿಂಚ್ ಸಿಟಿ ಮೈದಾನದ ವೇದಿಕೆಗೆ ಬಂದು ವಿವಿಧ ಯೋಜನೆಗಳ ಲೋಕಾರ್ಪಣೆಗೊಳಿಸಿ ನಾಗರಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇನ್ನು ಕರಾವಳಿ ಕರ್ನಾಟಕದಲ್ಲಿ ಮೋದಿ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿರುವ ಪ್ರಮುಖ ಯೋಜನೆಗಳ ವಿವರ ಹೀಗಿದೆ ನೋಡಿ.
- ಮಂಗಳೂರಿನ ಕುಳಾಯಿಯಲ್ಲಿ ಇಪಿಸಿ ಮಾದರಿಯಲ್ಲಿ ಮೀನುಗಾರಿಕಾ ಬಂದರು ಅಭಿವೃದ್ಧಿ ಕಾಮಗಾರಿಗಭೂಮಿಪೂಜೆ ಮಾಡಲಿದ್ದಾರೆ. ಮೀನುಗಾರಿಕಾ ಕ್ಷೇತ್ರದಲ್ಲಿ ಇದು ದೂರದೃಷ್ಟಿಯ ಯೋಜನೆಯಾಗಿದ್ದು, ಮೀನುಗಾರ ಬಂಧುಗಳಿಗೆ ಮೋದಿಜಿಯವರ ನೇತೃತ್ವದ ಕೇಂದ್ರ ಸರಕಾರದ ಮಾದರಿ ಕೊಡುಗೆಯಾಗಿದೆ.

- NMPT ಯಲ್ಲಿ 500 ಕೋಟಿ ರೂ ವೆಚ್ಚದಲ್ಲಿ ಸಮಗ್ರ ಎಲ್ಪಿಜಿ ಹಾಗೂ ಪಿಓಎಲ್ ಸೌಲಭ್ಯ, 100 ಕೋಟಿ ರೂ ವೆಚ್ಚದಲ್ಲಿ ಶೇಖರಣಾ ಟ್ಯಾಂಕರ್ ಮತ್ತು ಖಾದ್ಯ ತೈಲ ಸಂಸ್ಕರಣಾಗಾರ ನಿರ್ಮಾಣ ಸಹಿತ ಒಟ್ಟು 3800 ಕೋಟಿ ರೂ ಯೋಜನೆಗೆ ಚಾಲನೆ ನೀಡುವುದು. ದೇಶದ ಆರ್ಥಿಕ ಚಟುವಟಿಕೆಗಳಿಗೆ ಮಹತ್ತರ ಆಯಾಮ ನೀಡಲಿದೆ.
- 281 ಕೋಟಿ ರೂ ವೆಚ್ಚದಲ್ಲಿ ಕಂಟೇನರ್ ಹಾಗೂ ಇತರ ಸರಕು ನಿರ್ವಹಣೆಗಾಗಿ ನಿರ್ಮಾಣವಾದ ಬರ್ತ್ ಸಂಖ್ಯೆ 14 ರ ಯಾಂತ್ರೀಕರಣ. 1829 ಕೋಟಿ ರೂ ವೆಚ್ಚದಲ್ಲಿ ಬಿಎಸ್ VI ಉನ್ನತೀಕರಣ.
- 677 ಕೋಟಿ ರೂ ವೆಚ್ಚದಲ್ಲಿ ಸಮುದ್ರದ ನೀರಿನ ನಿರ್ಲವಣೀಕರಣ ಘಟಕ ನಿರ್ಮಾಣ. ಸಮುದ್ರದ ನೀರಿನಿಂದ ಉಪ್ಪು ಬೇರ್ಪಡಿಸಿ ಶುದ್ಧೀಕರಿಸುವ ಘಟಕದ ಉದ್ಘಾಟನೆ ಸಹಿತ 3800 ಕೋಟಿ ರೂ.ಗಳ ಯಾಂತ್ರೀಕರಣ, ಕೈಗಾರಿಕೀರಣ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ.