- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿ ಕರೆ ಮಾಡಿದ ಪ್ರಧಾನಿ ಮೋದಿ (Narendra Modis blunt statement)
- ಭಾರತ-ಪಾಕಿಸ್ತಾನದ ಸಂಘರ್ಷದಲ್ಲಿ ಅಮೆರಿಕದ ಮಧ್ಯಸ್ಥಿಕೆ ವಾದ ತಳ್ಳಿಹಾಕಿದ ಪ್ರಧಾನಿ ಮೋದಿ.
- ಭಾರತಕ್ಕೆ ಮೂರನೇ ಶಕ್ತಿಯ ಅವಶ್ಯಕತೆ ಎಂದಿಗೂ ಬಿದ್ದಿಲ್ಲ ಎಂದು ಸ್ಪಷ್ಟಪಡಿಸಿದ ಪ್ರಧಾನಿ ಮೋದಿ.
Washington DC: ಭಾರತ ಮತ್ತು ಪಾಕಿಸ್ತಾನದ ನಡುವೆ ನಾನೇ ಕದನ ವಿರಾಮ ಒಪ್ಪಂದ ಮಾಡಿಸಿದ್ದು ಎಂದು ಜಗತ್ತಿನ(world)ಮುಂದೆ ಶಂಖ ಊದುತ್ತಿರುವ ಅಮೆರಿಕ ಅಧ್ಯಕ್ಷ (President of America)
ಡೊನಾಲ್ಡ್ ಟ್ರಂಪ್ ಅವರಿಗೆ, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ರಿಯಾಲಿಟಿ (reality) ಪರಿಚಯ ಮಾಡಿಸಿಕೊಟ್ಟಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಸುಮಾರು 100 ಗಂಟೆಗಳ ಕಾಲ(100 hours) ನಡೆದ ಆಪರೇಷನ್ ಸಿಂಧೂರ(Operation Sindoora) ಸೇನಾ ಕಾರ್ಯಾಚರಣೆ ವೇಳೆ (operation),
ಪಾಕಿಸ್ತಾನವೇ ಕದನ ವಿರಾಮ ಒಪ್ಪಂದಕ್ಕೆ(agreement) ಮೊದಲು ಮನವಿ (request)ಮಾಡಿತ್ತು ಎಂದು ಭಾರತದ ಪ್ರಧಾನಮಂತ್ರಿ ನೆರೇಂದ್ರ ಮೋದಿ (PM Modi) ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ತಿಳಿಸಿದ್ದಾರೆ.
ಕೆನಡಾದಲ್ಲಿ (Canada)ನಡೆದ G-7 ಶೃಂಗಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ದೂರವಾಣಿ ಕರೆ (telephone call)ಮಾಡಿದ್ದ ಪ್ರಧಾನಿ ಮೋದಿ,
ಜಮ್ಮು ಮತ್ತು ಕಾಶ್ಮೀರ ವಿವಾದಕ್ಕೆ (dispute) ಸಂಬಂಧಿಸಿದಂತೆ ಭಾರತ ಎಂದಿಗೂ ಮೂರನೇ ಶಕ್ತಿಯ ಮಧ್ಯಸ್ಥಿಕೆ ಕೇಳಿಲ್ಲ, ಮುಂದೆಯೂ ಕೇಳುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ಕಾರ್ಯದರ್ಶಿ (Foreign Secretary) ವಿಕ್ರಮ್ ಮಿಶ್ರಿ ,

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಮತ್ತು ಭಾರತ ಮತ್ತು ಪಾಕಿಸ್ತಾನ ನಡುವಿನ ಮಧ್ಯಸ್ಥಿಕೆ ಕುರಿತು (arbitration), ಅಮೆರಿಕದೊಂದಿಗೆ ಯಾವುದೇ ಮಟ್ಟದಲ್ಲಿ ಮಾತುಕತೆ(talk) ನಡೆದಿಲ್ಲ.
ಮಿಲಿಟರಿ ಕ್ರಮವನ್ನು ನಿಲ್ಲಿಸುವ ಕುರಿತು, ಭಾರತ ಮತ್ತು ಪಾಕಿಸ್ತಾನದ ನಡುವೆ ನೇರವಾಗಿ ಮಾತುಕತೆಗಳು ನಡೆದಿವೆ.
ಪಾಕಿಸ್ತಾನದ ಕೋರಿಕೆಯ ಮೇರೆಗೆ (request of Pakistan) ಕದನ ವಿರಾಮ ಒಪ್ಪಂದ (severance agreement) ಜಾರಿಯಾಗಿದೆ ಎಂದು ಪ್ರಧಾನಿ ಮೋದಿ ಅವರು ಡೊನಾಲ್ಡ್ ಟ್ರಂಪ್ ಅವರಿಗೆ ಸ್ಪಷ್ಟಪಡಿಸಿದ್ದಾರೆ (clarified) ಎಂದು ತಿಳಿಸಿದ್ದಾರೆ.
ಮುಂದುವರೆದು, ಜಮ್ಮು ಮತ್ತು ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ, ಭಾರತ ಮೊದಲಿನಿಂದಲೂ ದ್ವಿಪಕ್ಷೀಯ (Bilateral) ಮಾತುಕತೆಗೆ ಒತ್ತು ನೀಡಿದೆ.
ಇದರಲ್ಲಿ ಮೂರನೇ ಶಕ್ತಿಯ ಮಧ್ಯಸ್ಥಿಕೆಯನ್ನು ಭಾರತ ಎಂದಿಗೂ ಒಪ್ಪಿಕೊಂಡಿಲ್ಲ.
ಈ ಪ್ರಾದೇಶಿಕ (Regional) ವಿವಾದ ಬಗೆಹರಿಯಲು ಮೂರನೇ ಶಕ್ತಿಯ ಅವಶ್ಯಕತೆಯಯೇ ಇಲ್ಲ ಎಂಬುದು ಭಾರತದ ದೃಢವಾದ ನಿಲುವು ಎಂದು ಪ್ರಧಾನಿ ಮೋದಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸ್ಪಷ್ಟ ನುಡಿಗಳಲ್ಲಿ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರ ಮಾತನ್ನು ಮೌನವಾಗಿ ಆಲಿಸಿದ ಡೊನಾಲ್ಡ್ ಟ್ರಂಪ್, ಈ ವಿಚಾರವಾಗಿ ಭಾರತದ ಅಭಿಪ್ರಾಯಕ್ಕೆ ಸಹಮತಿ (consent) ಇದೆ ಎಂದು ಹೇಳಿದ್ದಾಗಿ ಮೂಲಗಳು ಖಚಿತಪಡಿಸಿವೆ.
ಪಾಕಿಸ್ತಾನದ ಗುಂಡಿಗೆ ಭಾರತ ಗುಂಡಿನಿಂದಲೇ ಉತ್ತರ ನೀಡುತ್ತದೆ.
ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ (military operation) ಇನ್ನೂ ಮುಕ್ತಾಯವಾಗಿಲ್ಲ ಎಂಬುದನ್ನು ಅಮೆರಿಕ (Narendra Modis blunt statement) ಮನಗಾಣಬೇಕು ಎಂದು ಪ್ರಧಾನಿ ಮೋದಿ ಡೊನಾಲ್ಡ್ ಟ್ರಂಪ್ ಅವರಲ್ಲಿ ಮನವಿ ಮಾಡಿದ್ದಾರೆ.