• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮನರಂಜನೆ

ನರೇಶ್-ಪವಿತ್ರ ಮದುವೆ ; ಇದೇನು ರೀಲಾ? ಅಥವಾ ರಿಯಲ್ಲಾ? ಪ್ರಶ್ನೆಗೆ ಇಲ್ಲಿದೆ ಉತ್ತರ

Pankaja by Pankaja
in ಮನರಂಜನೆ, ವೈರಲ್ ಸುದ್ದಿ
ನರೇಶ್-ಪವಿತ್ರ ಮದುವೆ ; ಇದೇನು ರೀಲಾ? ಅಥವಾ ರಿಯಲ್ಲಾ? ಪ್ರಶ್ನೆಗೆ ಇಲ್ಲಿದೆ ಉತ್ತರ
0
SHARES
85
VIEWS
Share on FacebookShare on Twitter

Andrapradesh : ಮಾರ್ಚ್ 10 ರಂದು ತಾವು ವಿವಾಹವಾಗಿರುವ ಬಗ್ಗೆ ಟ್ವಿಟರ್‌ನಲ್ಲಿ ಟ್ವೀಟ್ (Tweet) ಮಾಡಿರುವ ತೆಲುಗು ಚಿತ್ರರಂಗದ ನಟ ನರೇಶ್, ತಮ್ಮ ಮದುವೆಗೆ ಎಲ್ಲರೂ ಆರ್ಶಿವದಿಸಿ(Naresh and PavitraLokesh Marriage) ಎಂದು ಕೇಳಿಕೊಂಡಿದ್ದರು.

ಆದ್ರೆ, ನೆಟ್ಟಿಗರಲ್ಲಿ ಈ ಸಂಗತಿ ಭಾರಿಗೊಂದಲ ಮೂಡಿಸಿದ್ದು, ಇದು ರೀಲಾ? ಅಥವಾ ರಿಯಲ್ಲಾ? ಎಂಬ ಪ್ರಶ್ನೆಯನ್ನು ಮುಂದಿಡುವಂತೆ ಮಾಡಿದೆ.

Naresh and PavitraLokesh Marriage


ಕಳೆದ ವರ್ಷದಿಂದ ಸಾಮಾಜಿಕ ಜಾಲತಾಣ ಸೇರಿದಂತೆ ಚಿತ್ರರಂಗದಲ್ಲಿ ಭಾರಿ ವಿವಾದಕ್ಕೆ ಸಿಲುಕಿಕೊಂಡಿರುವ ನರೇಶ್ (Telugu actor Naresh)

ಮತ್ತು ಪವಿತ್ರಾ ಲೋಕೆಶ್ (Pavitra Lokesh) ಜೋಡಿ ಇದೀಗ ಆ ವಿವಾದಗಳಿಗೆ ತೆರೆ ಎಳೆದಿದ್ದಾರೆ!

ಹೌದು, ನಟಿ ಪವಿತ್ರಾ ಲೋಕೆಶ್ ಮತ್ತು ನಟ ನರೇಶ್ ತಾವು ಮದುವೆಯಾಗಿರುವ ವೀಡಿಯೊ ತುಣುಕನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ನರೇಶ್ ಮತ್ತು ಪವಿತ್ರಾ ಲೋಕೇಶ್ ಅದ್ಧೂರಿಯಾಗಿ ವಿವಾಹವಾಗಿರುವುದು ಕಂಡುಬಂದಿದೆ.

ಆದ್ರೆ, ಇದು ನೋಡಲು ನಿಜವಾದ ಮದುವೆಯೇ ಎಂದು ಅನಿಸಿದರೂ, ನಿಜವಾ? ಅಥವಾ ಯಾವುದಾದರೂ ಪ್ರಮೋಷನಲ್ ವೀಡಿಯೋ ಇರಬಹುದಾ? ಎಂಬ ಅನುಮಾನಗಳು ಹುಟ್ಟಿಕೊಂಡಿದೆ.

ಈ ಮದುವೆ ನಿಜ ಎಂದಾದರೆ ಇದು ನರೇಶ್ ಅವರಿಗೆ ನಾಲ್ಕನೇ ಮದುವೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ : https://vijayatimes.com/kumaraswamy-vs-sumalatha/

ನಟಿ ಪವಿತ್ರ ಲೋಕೇಶ್ ಅವರೊಂದಿಗೆ ಕೆಲ ಕಾಲ ಸಂಬಂಧದಲ್ಲಿದ್ದ ತೆಲುಗು ನಟ ನರೇಶ್ ಅವರು ಈ ವರ್ಷದ ಜನವರಿಯಲ್ಲಿ ತಾವು ಮದುವೆಯಾಗಲು ಯೋಜಿಸುತ್ತಿರುವುದಾಗಿ ಘೋಷಿಸಿದ್ದರು.

ಅದರಂತೆ ಇದೇ ಶುಕ್ರವಾರ, ಈ ಜೋಡಿ ಅದ್ದೂರಿ ಸಮಾರಂಭದಲ್ಲಿ ವಿವಾಹವಾಗಿದ್ದಾರೆ.

ಮದುವೆಯ ಕಿರಿದಾದ ವೀಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ನರೇಶ್, ʻನಮಗಾಗಿ ಈ ಹೊಸ ಪ್ರಯಾಣದಲ್ಲಿ ಜೀವನಪೂರ್ತಿ ಶಾಂತಿ ಮತ್ತು ಸಂತೋಷಕ್ಕಾಗಿ ನಿಮ್ಮ ಆಶೀರ್ವಾದವನ್ನು ಕೋರುತ್ತೇನೆʼ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ವೀಡಿಯೊದಲ್ಲಿ, ನರೇಶ್ ಮತ್ತು ಪವಿತ್ರಾ ಲೋಕೇಶ್ ಹಿಂದೂ ಸಂಪ್ರದಾಯದಂತೆ ಮದುವೆಯ ಕ್ರಮಗಳನ್ನು ಅನುಸರಿಸುತ್ತಿರುವುದನ್ನು ಕಾಣಬಹುದು.

Naresh and PavitraLokesh Marriage

ನಟಿ ಪವಿತ್ರಾ ಲೋಕೆಶ್ ಸಾಂಪ್ರದಾಯಿಕ ಆಭರಣಗಳೊಂದಿಗೆ ಕೆಂಪು ಸೀರೆಯನ್ನು ಧರಿಸಿದ್ದಾರೆ. ನರೇಶ್ ಅವರ ಮದುವೆಯ ವೀಡಿಯೊವನ್ನು ಟ್ವೀಟ್ ಮಾಡಿದ ನಂತರ,

ಅಭಿಮಾನಿಗಳು ವಿಶೇಷ ಸಂದರ್ಭದಲ್ಲಿ ದಂಪತಿಗಳಿಗೆ ಶುಭ ಹಾರೈಸಿದ್ದಾರೆ.
ಈ ಜೋಡಿಗಳ ಅಭಿಮಾನಿಗಳು ವಿಶೇಷವಾಗಿ ಶುಭಕೋರಿದ್ದಾರೆ.

ಆದ್ರೆ, ಈ ಮಧ್ಯೆ ನೆಟ್ಟಿಗರ ವಿಚಿತ್ರ, ವಿಭಿನ್ನ ಕಮೆಂಟ್ಗಳು ಒಂದರ ಹಿಂದೆ ಒಂದು ಎಂಬಂತೆ ವ್ಯಕ್ತವಾಗುತ್ತಿದೆ.

ಕೆಲವರು ಹ್ಯಾಪಿ ಮ್ಯಾರೀಡ್ ಲೈಫ್ ಎಂದು ಸಾಮಾನ್ಯವಾಗಿ ಶುಭಕೋರಿದರೇ,

ಇನ್ನು ಹಲವರು ನರೇಶ್ ಅವರೇ ನಿಮ್ಮ ಹಿಂದಿನ ಹೆಂಡತಿಯಿಂದ ಕಾನೂನುಬದ್ಧವಾಗಿ ವಿಚ್ಛೇದನ ಪಡೆಯದೆ ಮತ್ತೆ ಮದುವೆಯಾಗುವ ಮೂಲಕ ಸರಿಯಾದ (Naresh and PavitraLokesh Marriage) ಉದಾಹರಣೆಯನ್ನು ನೀಡುತ್ತಿದ್ದೀರಿ ಬಿಡಿ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : https://vijayatimes.com/minister-somanna-statement/

ಮತ್ತೊಬ್ಬರು,ಇದು ನಿಜವಾಗಿದ್ದರೆ, ಜವಾಬ್ದಾರಿಯುತ ನಾಗರಿಕರಾಗಿ ಸಮಾಜಕ್ಕೆ ನೀವು ಯಾವ ಸಂದೇಶವನ್ನು ನೀಡಲು ಬಯಸುತ್ತೀರಿ? ರಮ್ಯಾ ರಘುಪತಿಯಿಂದ ಕಾನೂನಾತ್ಮಕವಾಗಿ ಬೇರ್ಪಟ್ಟಿಲ್ಲ!

ವಿಚ್ಛೇದನದ ಪ್ರಕರಣವು ತೆರೆದಿದೆ. ರಮ್ಯಾ ಅವರು ತಮ್ಮ ಮಗನನ್ನು ನೋಡಿಕೊಳ್ಳುತ್ತಾರೆ ಮತ್ತು ಹೆಮ್ಮೆಯ ಸಿಂಗಲ್ ಪೇರೆಂಟ್ ಆಗಿ ಅವರು ಇರಬಹುದು ಎಂದು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ : https://vijayatimes.com/kumaraswamy-vs-sumalatha/


ನಿಮ್ಮ ಅಧಿಕೃತ ವಿಚ್ಛೇದನದವರೆಗೆ ನೀವು ಕಾಯಬೇಕಾಗಿತ್ತು. ದಂಪತಿಗಳು ನಿಜವಾಗಿಯೂ ಮದುವೆಯಾಗಿದ್ದಾರೆಯೇ ಅಥವಾ ಇದೆಲ್ಲವೂ ಯಾವುದಾದರೂ ಚಿತ್ರದ ಪ್ರಚಾರದ ಭಾಗವಾಗಿದೆಯೇ ಎಂದು ಕೆಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸದ್ಯ ನರೇಶ್-ಪವಿತ್ರ ಮದುವೆಯ ವೀಡಿಯೋ ಇದೀಗ ಸಾಕಷ್ಟು ಚರ್ಚೆ, ವಿವಾದಕ್ಕೆ ಗ್ರಾಸವಾಗಿದೆ.

Tags: entertainmentmaharashtrateugu actors

Related News

ಇನ್ನೂ ನೂರು ಕೋಟಿ ಕ್ಲಬ್ ಸೇರಿಲ್ಲವೆ ಕಬ್ಜ ಸಿನಿಮಾ ? ಕಲೆಕ್ಷನ್ ಬಗ್ಗೆ ನಿರ್ಮಾಪಕರು ಏನಂತಾರೆ
Vijaya Time

ಇನ್ನೂ ನೂರು ಕೋಟಿ ಕ್ಲಬ್ ಸೇರಿಲ್ಲವೆ ಕಬ್ಜ ಸಿನಿಮಾ ? ಕಲೆಕ್ಷನ್ ಬಗ್ಗೆ ನಿರ್ಮಾಪಕರು ಏನಂತಾರೆ

March 28, 2023
ಕಬ್ಜ ಚಿತ್ರಕ್ಕೆ ಸಿನಿಪ್ರಿಯರ ಮೆಚ್ಚುಗೆ ; ಕಬ್ಜ 2 ಮತ್ತಷ್ಟು ಅದ್ಧೂರಿಯಾಗಿರಲಿದೆ ಎಂದ ನಿರ್ದೇಶಕ ಆರ್.ಚಂದ್ರು
ಮನರಂಜನೆ

ಕಬ್ಜ ಚಿತ್ರಕ್ಕೆ ಸಿನಿಪ್ರಿಯರ ಮೆಚ್ಚುಗೆ ; ಕಬ್ಜ 2 ಮತ್ತಷ್ಟು ಅದ್ಧೂರಿಯಾಗಿರಲಿದೆ ಎಂದ ನಿರ್ದೇಶಕ ಆರ್.ಚಂದ್ರು

March 24, 2023
ತಾನು ನೋವುಂಟು ಮಾಡಿದವರ ಬಳಿ ಕ್ಷಮೆಯಾಚಿಸಿದ ನಟಿ ಕಂಗನಾ ರಣಾವತ್
ಮನರಂಜನೆ

ತಾನು ನೋವುಂಟು ಮಾಡಿದವರ ಬಳಿ ಕ್ಷಮೆಯಾಚಿಸಿದ ನಟಿ ಕಂಗನಾ ರಣಾವತ್

March 24, 2023
ಕರ್ನಾಟಕ ಅರಣ್ಯ ಇಲಾಖೆಯಲ್ಲಿ ನೇರ ನೇಮಕಾತಿಗೆ ಅರ್ಜಿ ಆಹ್ವಾನ
ಮಾಹಿತಿ

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ನೇರ ನೇಮಕಾತಿಗೆ ಅರ್ಜಿ ಆಹ್ವಾನ

March 21, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.