Naseem Shah : ಅಫ್ಘಾನಿಸ್ತಾನ(Afghanisthan) ವಿರುದ್ಧ ಬ್ಯಾಕ್-ಟು-ಬ್ಯಾಕ್ ಸಿಕ್ಸರ್ ಹೊಡೆದ ಬ್ಯಾಟನ್ನು ಹರಾಜಿಗಿಟ್ಟು, ಪಾಕ್ ನೆರೆ ಸಂತ್ರಸ್ತರಿಗೆ ಸಹಾಯ ಮಾಡಲು ಮುಂದಾದ ನಸೀಮ್ ಶಾ(Naseem Shah)!

ಪಾಕಿಸ್ತಾನದ(Pakistan) ವೇಗದ ಬೌಲಿಂಗ್ ಸೆನ್ಸೇಶನ್ ನಸೀಮ್ ಶಾ ಅವರು ಏಷ್ಯಾ ಕಪ್ 2022ರ(Asia Cup 2022) ಸೂಪರ್ 4 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಬ್ಯಾಕ್-ಟು-ಬ್ಯಾಕ್ ಸಿಕ್ಸರ್‌ಗಳೊಂದಿಗೆ ಗೆಲುವಿನ ರನ್ ಗಳಿಸುವ ಮೂಲಕ ಪಂದ್ಯವನ್ನು ಪಾಕ್ ನತ್ತ ತಿರುಗಿಸಿದರು.
ಇದೀಗ ಅವರು ಆಟದಲ್ಲಿ ಬಳಸಿದ ಬ್ಯಾಟ್ ಅನ್ನು ಹರಾಜಿನಲ್ಲಿ ಇಡಲು ನಿರ್ಧರಿಸಿದ್ದಾರೆ ಮತ್ತು ಬಂದ ಹಣವನ್ನು ಪಾಕಿಸ್ತಾನದ ಪ್ರವಾಹ ಸಂತ್ರಸ್ತರ ನೆರವಿಗೆ ಬಳಸಲು ನಿರ್ಧರಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟ್(Cricket) ಮಂಡಳಿ ಸಾಮಾಜಿಕ ಜಾಲತಾಣಗಳಲ್ಲಿ,
ಇದನ್ನೂ ಓದಿ : https://vijayatimes.com/cashew-fruit-feni/
ಸಹ ಆಟಗಾರ ಮೊಹಮ್ಮದ್ ಹಸ್ನೇನ್ ಬ್ಯಾಟ್ ಅನ್ನು ಹರಾಜಿನಲ್ಲಿ ಇಡುವುದಾಗಿ ಘೋಷಿಸಿದ ನಸೀಮ್‌ಗೆ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡುವ ವೀಡಿಯೊವನ್ನು(Video) ಪೋಸ್ಟ್ ಮಾಡಿದೆ. ಹಸ್ನೈನ್ ಅವರಿಂದ ಬ್ಯಾಟ್ ತೆಗೆದುಕೊಂಡ ನಂತರ, ಶಾ ಅವರಿಗೆ ಧನ್ಯವಾದ ಅರ್ಪಿಸಿದರು.
“ಬ್ಯಾಟ್ ಅನ್ನು ಹರಾಜು ಹಾಕಲು ನಿರ್ಧರಿಸಿದ್ದೇನೆ, ಬಂದ ಆದಾಯದ ಅರ್ಧದಷ್ಟು ಹಣವನ್ನು ಪಾಕಿಸ್ತಾನದ ಪ್ರವಾಹದಿಂದ ಸಂತ್ರಸ್ತರಾದ ಜನರಿಗೆ ನೀಡಲಾಗುವುದು” ಎಂದು ಹೇಳಿದರು. ಅಫ್ಘಾನಿಸ್ತಾನ ವಿರುದ್ಧದ ಗೆಲುವಿನ ನಂತರ ಕ್ರಿಕೆಟ್ ಮಂಡಳಿ, ಇಬ್ಬರು ಯುವ ಕ್ರಿಕೆಟಿಗರು ಆಟದ ಸಮಯದಲ್ಲಿ ಹೇಗೆ ಬ್ಯಾಟ್ ವಿನಿಮಯ ಮಾಡಿಕೊಂಡರು ಎಂಬುದನ್ನು ವಿವರಿಸುವ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ.

ಷಾ ಬ್ಯಾಟಿಂಗ್ ಮಾಡಲು ಕ್ರೀಸ್‌ಗೆ ಹೋಗುವಾಗ, ತಮ್ಮ ಬ್ಯಾಟನ್ನು ಕೇಳಿದರು ಎಂದು ಹಸ್ನೈನ್ ಹೇಳಿದರು. ಆಗ ಹಸ್ನೈನ್ ಅವರು, ಸಿಂಗಲ್ ಸಿಕ್ಸ್ ಹೊಡೆದರೆ ಬ್ಯಾಟ್ ಅನ್ನು ಹಿಂತಿರುಗಿಸಬೇಕು ಎಂದು ಹೇಳಿದರು. ಆದರೆ ಶಾ ಅವರು ಒಂದಲ್ಲಾ ಎರಡು ಸಿಕ್ಸರ್‌ಗಳನ್ನು ಹೊಡೆಯುವ ಮೂಲಕ ಪಾಕಿಸ್ತಾನ ತಂಡಕ್ಕೆ ಪಂದ್ಯವನ್ನು ಗೆದ್ದು ಕೊಟ್ಟರು.