ನಟ ಜಗ್ಗೇಶ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ೪೦ ವರ್ಷಕಳೆದಿದ್ದು ಇದರ ಸಂಭ್ರಮದಲ್ಲಿದ್ದಾರೆ . ಇದರ ನಡುವೆ ಇದೀಗ ನಟ ಜಗ್ಗೇಶ್ ಮತ್ತೊಂದು ವಿವಾದಕ್ಕೆ ಒಳಗಾಗಿದ್ದಾರೆ .. ಡಬ್ಬಿಂಗ್ ಗೆ ವಿರೋಧ ವ್ಯಕ್ತ ಪಡಿಸಿದ ಹಿನ್ನಲೆ ನೆಟ್ಟಿಗರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ .
ಕರ್ನಾಟಕದಲ್ಲಿ ಡಬ್ಬಿಂಗ್ ತಂದು ಕನ್ನಡ ದ್ರೋಹಿ ಕೆಲಸ ಮಾಡ್ತಿದ್ದಾರೆ . ನೀವು ಅಪ್ಪನಿಗೆ ಹುಟ್ಟಿದವರಾ? ಕನ್ನಡ ದ್ರೋಹಿಗಳು ಎಂದು ಖಾಸಗಿ ವಾಹಿನಿಯೊಂದರಲ್ಲಿ ನಡೆದ ಸಂದರ್ಶನದ ಸಂದರ್ಭದಲ್ಲಿ ಆಕ್ರೋಶವನ್ನು ಜಗ್ಗೇಶ್ ವ್ಯಕ್ತಪಡಿಸಿದ್ದರು.
ಹೀಗೆ ಮಾತು ಮುಂದುವರೆಸಿದ ಜಗ್ಗೇಶ್ ನಮ್ ಮಕ್ಕಳು ಡಿಸ್ಕವರಿ ಸೈನ್ಸ್ ಚಾನಲ್ ನೋಡಬಾರದೆ ಡಬ್ಬಿಂಗ್ ತಂದ ಮಹನೀಯರ ಪಾದಕ್ಕೆ ನನ್ನ ನಮಸ್ಕಾರ..ಈಗ ಯಾವ ಚ್ಯಾನಲ್ ನೋಡಿದ್ರು ಬರೀ ತಮಿಳು , ಹಿಂದೆ ತೆಲುಗು ಸಿನಿಮಾಗಳನ್ನೇ ತುಂಬುತ್ತಿದ್ದೀರಾ ನೀವು ಅಪ್ಪನಿಗೆ ಹುಟ್ಟಿದವರಾ.. ನೀವೆಲ್ಲಾ ಕನ್ನಡ ದ್ರೋಹಿಗಳು . ಹುಳ ಬಿದ್ದು ಸಾಯ್ತೀರಾ . ನಿಮ್ಮ ತೆವಲುಗಳಿಗಾಗಿ ಮುಂದಿನ ಪೀಳಿಗೆ ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿದ್ದೀರಿ ಎಂದು ಕಿಡಿಕಾರಿದ್ದಾರೆ..
ಇನ್ನು ಈ ಮಾತನ್ನು ಕೇಳಿ ಡಬ್ಬಿಂಗ್ ಪರ ಹೋರಾಟಗಾರರು ಕೆಂಡಮಂಡಲವಾಗಿದ್ದು .. ಜಗ್ಗೇಶ್ ವಿರುದ್ದ ಕಿಡಿಕಾರಿದ್ದಲ್ಲದೆ . ಇವರ ಬಾಯಿಯಲ್ಲಿ ಬರೀ ಹೊಲಸು ಮಾತು ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ .