ಮೈಸೂರು, ಜ. 19: ಪಕ್ಷ ಸಂಘಟನೆ ಸಲುವಾಗಿ ರಚಿಸಿರುವ ವೀಕ್ಷಕರ ಪಟ್ಟಿಯಿಂದ ತಮ್ಮನ್ನು ಕೈಬಿಟ್ಟಿರುವ ಜೆಡಿಎಸ್ ವರಿಷ್ಠರ ನಡೆಯನ್ನು ತೀವ್ರವಾಗಿ ಖಂಡಿಸಿರುವ ಶಾಸಕ ಜಿ.ಟಿ. ದೇವೇಗೌಡ, ನಟನೆ ಮಾಡೋದನ್ನ ಹೆಚ್.ಡಿ.ಕೆ ಅವರಿಂದ ಕಲಿಯಬೇಕು ಎಂದು ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೋಗ ಇರುವವರನ್ನ ಪತ್ತೆ ಹಚ್ಚಬಹುದು ಆದರೆ ರೋಗ ಇರುವಂತೆ ನಟನೆ ಮಾಡುವವರನ್ನ ಪತ್ತೆ ಹಚ್ಚೋದು ಕಷ್ಟ. ಪಕ್ಷ ಸಂಘಟನೆ ವಿಚಾರವಾಗಿ ಕೋರ್ ಕಮಿಟಿಯಲ್ಲಿ ಹೆಸರು ಕೈ ಬಿಟ್ಟಿದ್ದಾರೆ.
ಸಂಘಟನೆಯಲ್ಲಿ ನನಗೆ ವಯಸಾಯ್ತು ಎಂದು ಕೈ ಬಿಟ್ಟಿರಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೇ ನನ್ನ ಮಾತು ನಡೆಯುತ್ತಿರಲಿಲ್ಲ. ಇನ್ನು ಇವಾಗ ನಡೆಯುತ್ತಾ?
ಪಾಲಿಕೆ ಮೇಯರ್ ವಿಚಾರದಲ್ಲಿ ನನ್ನನ್ನ ಬಿಟ್ಟೆ ಸಭೆ ನಡೆಸಿದ್ದಾರೆ.
ಮಾಧ್ಯಮಗಳಲ್ಲಿ ಮುಂದೆ ಹೇಳೋದೇ ಒಂದು ನಡೆದುಕೊಳ್ಳುವ ರೀತಿಯೇ ಒಂದು ಎಂದು ಟೀಕಿಸಿದರು.
ನಾನು ಜನತಾದಳದ ಶಾಸಕ, ಸಚಿವನಗಬೇಕು ಎಂಬ ಆಸೆ ಇದ್ದರೆ ವಿಶ್ವನಾಥ್ ನಾರಾಯಣ ಗೌಡ ಪಕ್ಷ ಬಿಟ್ಟು ಹೋದಗಲೇ ನಾನು ಬೀಡಬಹುದಿತ್ತು. ಆದರೆ ಕುಮಾರಸ್ವಾಮಿಯನ್ನ ನಾನೇ ಮುಖ್ಯಮಂತ್ರಿ ಮಾಡಿ ನಾನೇ ಪದಚ್ಯುತಿ ಮಾಡ್ತೀನಾ.? ಆ ಕೆಲಸ ನಾನು ಮಾಡಿಲ್ಲ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಂದಿನ ತಾ.ಪಂ ಹಾಗೂ ಜಿ.ಪಂ ಚುನಾವಣೆಗೂ ಸ್ವತಃ ನಾನೇ ಬಿ. ಫಾರಂ ಕೊಡ್ತೀನಿ ಅಂತ ಹೆಚ್ಡಿಕೆ ಹೇಳಿದ್ದಾರೆ ಅಗಾಗಿ ಅದರಲ್ಲೂ ನಾನು ತಲೆ ಕೆಡಿಸಿಕೊಳ್ಳೋದಿಲ್ಲ ಎಂದರು.