
ಮೇಜರ್‌ಧ್ಯಾನ್ ಚಂದ್ ಜಗತ್ತಿನ ಕ್ರೀಡಾ(SPORTS) ಇತಿಹಾಸದಲ್ಲಿ ಅವಿಸ್ಮರಣೀಯ ಹೆಸರು. ಮೇಜರ್ ಧ್ಯಾನ್ ಚಂದ್ ಸಿಂಗ್ (DHYAN CHAND) ಭಾರತವಷ್ಟೇ ಅಲ್ಲ, ಜಗತ್ತಿನಲ್ಲಿಯೇ ಶ್ರೇಷ್ಠ ಸಾರ್ವಕಾಲಿಕ ಹಾಕಿ(HOCKEY) ಆಟಗಾರ.
ಸರ್ವಾಧಿಕಾರಿ ಹಿಟ್ಲರ್ ನನ್ನು ಬೆರಗುಗೊಳಿಸಿದ ಕ್ರೀಡಾ ಮಾಂತ್ರಿಕ. ಭಾರತ ಸರ್ಕಾರವು ಇವರ ಜನ್ಮ ದಿನವಾದ ಆಗಸ್ಟ್29 ಅನ್ನು ʼರಾಷ್ಟ್ರೀಯ ಕ್ರೀಡಾ ದಿನʼ(NATINAL SPORTS DAY) ವನ್ನಾಗಿ ಘೋಷಿಸಿದೆ. ಹೀಗಾಗಿ ಮೇಜರ್‌ಧ್ಯಾನ್‌ಚಂದ್ ಅವರ ಬಗ್ಗೆ ನಿಮಗೆ ಗೊತ್ತಿರದ 10 ಸಂಗತಿಗಳ ವಿವರ ಇಲ್ಲಿದೆ ನೋಡಿ.
https://vijayatimes.com/case-on-shivarathri-muruga-sharana/
- ಧ್ಯಾನ್‌ಚಂದ್ ನಿಜ ಹೆಸರು ಧ್ಯಾನ್ ಸಿಂಗ್. ಆದರೆ ತಡ ರಾತ್ರಿವರೆಗೂ ಚಂದಿರನ
ಬೆಳಕಲ್ಲಿ ಅಭ್ಯಾಸಿಸುತ್ತಿರುವುದರಿಂದ ಪ್ರೀತಿಯಿಂದ ಧ್ಯಾನ್‌ಚಂದ್ ಎಂದು ಹೆಸರಿಸಲಾಗಿತ್ತು.
- ಚಿಕ್ಕವನಾಗಿದ್ದಾಗ ರೆಸ್ಲಿಂಗ್‌ನತ್ತ ಧ್ಯಾನ್‌ಚಂದ್ ಅತಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದರು.
- 16ರ ಹರೆಯದಲ್ಲಿ ಬ್ರಿಟಿಷ್ ಸೇನೆಯನ್ನು ಸೇರಿದ್ದರು.
- ಒಲಿಂಪಿಕ್ ಚಿನ್ನದ ಸಾಧನೆ – 1928: ಆರ್ಮ್‌ಸ್ಟೆರ್‌ಡ್ಯಾಮ್ 1932: ಲಾಸ್ ಏಜಂಲೀಸ್ 1936: ಬರ್ಲಿನ್
- 1936ರಲ್ಲಿ ಜರ್ಮನ್ ಗೋಲ್ ಕೀಪರ್ ಟಿಟೊ ವಾರ್ನ್‌ಹೋಲ್ಟ್ಜ್ ಜೊತೆ ಢಿಕ್ಕಿ ಹೊಡೆದ ಧ್ಯಾನ್‌ಚಂದ್ ತಮ್ಮ ಹಲ್ಲನ್ನು ಕಳೆದುಕೊಂಡಿದ್ದರು.
- 1956ರಲ್ಲಿ ಪದ್ಮ ಭೂಷಣ ಪ್ರಶಸ್ತಿ ನೀಡಿ ಭಾರತ ಸರಕಾರದಿಂದ ಗೌರವ
- ಭಾರತೀಯ ಸೇನೆಯಲ್ಲಿ ಮೇಜರ್ ಪದವಿಯಲ್ಲಿ ನಿವೃತ್ತಿ
- 400ಕ್ಕೂ ಹೆಚ್ಚು ಅಂತರಾಷ್ಟ್ರೀಯ ಗೋಲುಗಳು
- 1936ರ ಬರ್ಲಿನ್ ಒಲಿಂಪಿಕ್ಸ್‌ನಲ್ಲಿ ಚಂದ್ ಅವರಿಗೆ ಜರ್ಮನ್ ಪೌರತ್ವವನ್ನು ನೀಡುವುದಾಗಿ ಹಿಟ್ಲರ್ ಘೋಷಿಸಿದ್ದರು. ಆದರೆ ಇದನ್ನು ಧ್ಯಾನ್‌ಚಂದ್ ನಿರಾಕರಿಸಿದರು.
- ಎದುರಾಳಿಗಳು ಧ್ಯಾನ್‌ಚಂದ್ ಬಗ್ಗೆ ಎಷ್ಟು ಭಯಭೀತಗೊಂಡಿದೆಯೆಂದರೆ ಹಾಲೆಂಡ್ ಅಧಿಕಾರಿಗಳು ಮ್ಯಾಗ್ನೆಟ್ ಹೊಂದಿದೆಯೇ ಎಂಬುದನ್ನು ಪರಿಶೀಲಿಸಲು ಅವರ ಹಾಕಿ ಸ್ಟಿಕ್ ಮುರಿದಿದ್ದರು.

- ಮೇಜರ್‌ಧ್ಯಾನ್ ಚಂದ್ ಅವರು ತಮ್ಮ ೪೨ನೆ ವಯಸ್ಸಿನಲ್ಲಿ ನಿವೃತ್ತರಾದರು. ಧ್ಯಾನ್ ಚಂದರ ಸಹೊದರ ರೂಪ್ ಸಿಂಗ್ ಕೂಡ ಹಾಕಿ ಆಟಗಾರರಾಗಿದ್ದರು. ಧ್ಯಾನ್ ಚಂದರ ಪುತ್ರ ಅಶೋಕ್ ಕುಮಾರ್ ಕೂಡ ಹಾಕಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.