ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್(Ashwini Vaishnaw) ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ(nation first cable-stayed rail bridge) ಮೊದಲನೆಯ ಕೇಬಲ್ ಸ್ಟೇಡ್ ರೈಲ್ವೆ ಸೇತುವೆಯ “ಅಂಜಿ ಖಾಡ್ “(Anji Khad) ನಿರ್ಮಾಣ ಹಂತದಲ್ಲಿರುವ ಚಿತ್ರಣಗಳನ್ನು ಟ್ವಿಟ್ಟರ್ನಲ್ಲಿ ಅಧಿಕೃತವಾಗಿ ಹಂಚಿಕೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಸಂಪರ್ಕವನ್ನು ಹೆಚ್ಚಿಸುವ ಭಾರತದ ಮೊದಲ ಕೇಬಲ್ ರೈಲು (nation first cable-stayed rail bridge)ಸೇತುವೆಯಾಗಿದೆ.
ರೈಲ್ವೆ ಸಚಿವ ಶ್ರೀ ವೈಷ್ಣವ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಜಮ್ಮು ಮತ್ತು ಬಾರಾಮುಲ್ಲಾ ರೈಲು ಮಾರ್ಗದ ಕಾತ್ರ ಮತ್ತು ರಿಯಾಸಿ ಪ್ರದೇಶವನ್ನು ಸಂಪರ್ಕಿಸುವ, ನಿರ್ಮಾಣ ಹಂತದಲ್ಲಿರುವ ಅಂಜಿ ಖಾಡ್ ರೈಲು ಸೇತುವೆಯ ಕೆಲವು ಚಿತ್ರಣಗಳನ್ನು ಹಂಚಿಕೊಂಡಿದ್ದಾರೆ.
ಐಕಾನಿಕ್ ಅಂಜಿ ಖಾಡ್ ಸೇತುವೆಯ ಶೇಕಡಾ 50 ರಷ್ಟು ಕೆಲಸ ಪೂರ್ಣಗೊಂಡಿದೆ ಎಂದು ರೈಲ್ವೆ ಸಚಿವಾಲಯ ಪ್ರಕಟಿಸಿದೆ. https://vijayatimes.com/siddaramaiah-blames-education-minister/
A future-ready 🇮🇳
— Ashwini Vaishnaw (@AshwiniVaishnaw) July 7, 2022
Nation's first cable-stayed rail bridge, Anji Khad bridge connecting #Kashmir. pic.twitter.com/pVdA2avIuY
ಸೇತುವೆ ಕೆಲಸ ಪೂರ್ಣಗೊಂಡರೇ ಸೇತುವೆಯು ನದಿಯ ತಳದಿಂದ 331 ಮೀಟರ್ ಎತ್ತರದಲ್ಲಿದೆ. ಪ್ಯಾರಿಸ್ ನ “ಐಫೆಲ್ ಟವರ್” ಅನ್ನು ಮೀರಿಸುತ್ತದೆ ಈ ಸೇತುವೆ.
ಸೇತುವೆಯ ಒಟ್ಟು 473.25 ಮೀಟರ್ ಉದ್ದವನ್ನು ಹೊಂದಿದೆ. ಅದೇ ಯುಎಸ್ ಬಿ ಆರ್ ಎಲ್ ಅಡಿಯಲ್ಲಿ ರೈಲ್ವೆಯ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿರುವ ಚೆನಾಬ್ ಸೇತುವೆಯು ವಿಶ್ವದ ಅತೀ ಎತ್ತರವಾದ ರೈಲ್ವೇ ಸೇತುವೆಯನ್ನು ನಿರ್ಮಿಸುತ್ತಿದೆ. ಚೆನಾಬ್ ಸೇತುವೆಯು 1315 ಮೀಟರ್ ಉದ್ದವಿದೆ.
- ಕುಮಾರ್