Breaking News
ಒಂದು ದೇಶ, ಒಂದು ಪಕ್ಷ ಎಂದು ಹೇಳುವ ಬಿಜೆಪಿ ಲಸಿಕೆಗೆ ಒಂದೇ ಬೆಲೆ ಇಟ್ಟಿಲ್ಲ ಯಾಕೆ: ಮಮತಾ ಬ್ಯಾನರ್ಜಿ‘ಇನ್ನೆರಡು ತಾಸುಗಳಷ್ಟೇ..ಆಮೇಲೆ ಆಕ್ಸಿಜನ್​ ಇರೋದಿಲ್ಲ, ರೋಗಿಗಳು ಸಾಯ್ತಾರೆ..’ ಕಣ್ಣೀರಿಟ್ಟ ಆಸ್ಪತ್ರೆ ಸಿಇಒಶಾಸಕ ಜಮೀರ್ ಅಹ್ಮದ್, ಮಧು ಬಂಗಾರಪ್ಪಗೆ ಕೊರೊನಾ ಪಾಸಿಟಿವ್: ನಿನ್ನೆಯಷ್ಟೇ ಸಿದ್ದರಾಮಯ್ಯ ಭೇಟಿಯಾಗಿದ್ದ ಜಮೀರ್ಕೊರೊನಾ ನಿರ್ವಹಣೆ ವಿಚಾರವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ಮೇ 1ರಿಂದ 18 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಲು ನೋಂದಾವಣೆ ಮಾಡಿಕೊಳ್ಳುವ ವಿಧಾನ ಇಲ್ಲಿದೆರೆಮ್‌ಡಿಸಿವಿರ್‌ ವೈಜ್ಞಾನಿಕವಾಗಿ ಲೈಫ್ ಸೇವಿಂಗ್ ಡ್ರಗ್ ಅಲ್ಲ: ಸಚಿವ ಸುಧಾಕರ್ಭಾರತಕ್ಕೆ ಬಂದಿಳಿದ 5ನೇ ಬ್ಯಾಚ್​​ನ ರಫೇಲ್​​ ಯುದ್ಧ ವಿಮಾನಗಳುಮುಖ್ಯಮಂತ್ರಿ ಯಡಿಯೂರಪ್ಪ ಆಸ್ಪತ್ರೆಯಿಂದ ಡಿಸ್ಚಾರ್ಜ್ಪ್ರಚಾರಗಳನ್ನ ಬಿಟ್ಟು ಜನರ ರಕ್ಷಣೆ ಜತೆಗೆ ಜನರ ವಿಶ್ವಾಸ ಗೆಲ್ಲುವ ಕೆಲಸ ಮಾಡಿ: ಬಿಜೆಪಿಗೆ ಕುಮಾರಸ್ವಾಮಿ ಚಾಟಿನೀವು ಖುಷಿಯಾಗಿ ಸಮಯ ಹಾಳು ಮಾಡಿ, ಜನ ಮಾತ್ರ ಸಾಯ್ತಾ ಇರ್ಲಿ: ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್​ ತರಾಟೆ

ಸಾಲ ಮರುಪಾವತಿ ಮಾಡದಿರುವುದಕ್ಕೆ ನಟ, ರಾಜಕಾರಣಿ ಶರತ್ ಕುಮಾರ್-ರಾಧಿಕಾ ದಂಪತಿಗೆ 1ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

2015ರಲ್ಲಿ ರಾಧಿಕಾ ಮತ್ತು ಶರತ್ ಕುಮಾರ್ ಅವರ ನಿರ್ಮಾಣ ಸಂಸ್ಥೆಯು ರೇಡಿಯನ್ಸ್ ಗ್ರೂಪ್​ನಿಂದ ಸಾಲ ಪಡೆದು ‘ಇದು ಎನ್ನ ಮಾಯಂ’ ಎಂಬ ಸಿನಿಮಾ ನಿರ್ಮಿಸಿತ್ತು. ಈ ಸಿನಿಮಾವನ್ನು ಎ.ಎಲ್. ವಿಜಯ್ ಅವರು ನಿರ್ದೇಶಿಸಿದ್ದು ವಿಕ್ರಂ ಪ್ರಭು ಮತ್ತು ಕೀರ್ತಿ ಸುರೇಶ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದರು.
Share on facebook
Share on google
Share on twitter
Share on linkedin
Share on print

ಚೆನ್ನೈ, ಏ. 07: ತಮಿಳಿನ ತಾರಾ ದಂಪತಿ ನಟ, ರಾಜಕಾರಣಿ ಶರತ್ ಕುಮಾರ್ ಮತ್ತು ರಾಧಿಕಾ ಶರತ್ ಕುಮಾರ್ ಅವರಿಗೆ ಶಾಸಕ ಮತ್ತು ಸಂಸದರಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯವು ಒಂದು ವರ್ಷದ ಜೈಲು ಶಿಕ್ಷೆ ಪ್ರಕಟಿಸಿದೆ. ಸಾಲ ಮರುಪಾವತಿ ಮಾಡಿಲ್ಲ ಎಂದು ಶರತ್ ಕುಮಾರ್ ವಿರುದ್ಧ 7 ಪ್ರಕರಣಗಳು ಮತ್ತು ರಾಧಿಕಾ ವಿರುದ್ಧ 2 ಪ್ರಕರಣಗಳು ದಾಖಲಾಗಿತ್ತು. ಈ ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಲಯ ದಂಪತಿಗೆ ಜೈಲು ಶಿಕ್ಷೆ ವಿಧಿಸಿದೆ.

2015ರಲ್ಲಿ ರಾಧಿಕಾ ಮತ್ತು ಶರತ್ ಕುಮಾರ್ ಅವರ ನಿರ್ಮಾಣ ಸಂಸ್ಥೆಯು ರೇಡಿಯನ್ಸ್ ಗ್ರೂಪ್​ನಿಂದ ಸಾಲ ಪಡೆದು ‘ಇದು ಎನ್ನ ಮಾಯಂ’ ಎಂಬ ಸಿನಿಮಾ ನಿರ್ಮಿಸಿತ್ತು. ಈ ಸಿನಿಮಾವನ್ನು ಎ.ಎಲ್. ವಿಜಯ್ ಅವರು ನಿರ್ದೇಶಿಸಿದ್ದು ವಿಕ್ರಂ ಪ್ರಭು ಮತ್ತು ಕೀರ್ತಿ ಸುರೇಶ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದರು.

ಶರತ್ ಕುಮಾರ್ ಮತ್ತು ರಾಧಿಕಾ ಅವರು ರೇಡಿಯನ್ಸ್ ಗ್ರೂಪ್ ಗೆ ಸಾಲ ಮರುಪಾವತಿಗಾಗಿ ಚೆಕ್ ನೀಡಿದ್ದರೂ ಅದು ಬೌನ್ಸ್ ಆಗಿತ್ತು. ಈ ಬಗ್ಗೆ 2018ರಲ್ಲಿ ರೇಡಿಯನ್ಸ್ ಗ್ರೂಪ್ ಕೋರ್ಟ್ ಮೆಟ್ಟಿಲೇರಿದ್ದು, ಸುಮಾರು ನಾಲ್ಕು ವರ್ಷಗಳ ಕಾಲ ವಿಚಾರಣೆ ನಡೆಸಿದ ನಂತರ ನ್ಯಾಯಾಲಯ ಈ ತಾರಾದಂಪತಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಏನಿದು ಪ್ರಕರಣ?
ಶರತ್ ಕುಮಾರ್, ರಾಧಿಕಾ ಮತ್ತು ಲಿಸ್ಟಿನ್ ಸ್ಟೀಫನ್ ಪಾಲುದಾರರಾಗಿರುವ ಸಿನಿಮಾ ನಿರ್ಮಾಣ ಸಂಸ್ಥೆ ಮ್ಯಾಜಿಕ್ ಫ್ರೇಮ್ಸ್ ರೇಡಿಯನ್ಸ್ ಮೀಡಿಯಾ ಪ್ರೈವೆಟ್ ಲಿಮಿಟೆಡ್​ನಿಂದ ₹1.50 ಕೋಟಿ ಸಾಲ ಪಡೆದಿತ್ತು. ಆಮೇಲೆ ಸಾಲ ಮರುಪಾವತಿಗಾಗಿ 2 ಚೆಕ್ ಗಳನ್ನು ನೀಡಿತ್ತು. ಇದರ ಜತೆಗೆ ಶರತ್ ಕುಮಾರ್ ರೇಡಿಯನ್ಸ್ ಮೀಡಿಯಾದಿಂದ ₹50 ಲಕ್ಷ ಕೈ ಸಾಲ ಪಡೆದಿದ್ದರು. ಇದನ್ನು ಮರು ಪಾವತಿಸಲು ₹10 ಲಕ್ಷ ಮೌಲ್ಯದ 5 ಚೆಕ್ ಗಳನ್ನು ನೀಡಿದ್ದರು. ಆದರೆೆ ಈ ಎಲ್ಲ ಚೆಕ್ ಗಳು ಬೌನ್ಸ್ ಆಗಿವೆ ಎಂದು ರೇಡಿಯನ್ಸ್ ಮೀಡಿಯಾ ನ್ಯಾಯಾಲಯದ ಮೆಟ್ಟಿಲೇರಿತ್ತು.

Submit Your Article