Breaking News
ಬಿಜೆಪಿಯ ನೈತಿಕ ಭ್ರಷ್ಟ ನಾಯಕರು ಒಬ್ಬೊಬ್ಬರಾಗಿ ದೇಶದ ಮುಂದೆ ಬೆತ್ತಲಾಗುತ್ತಿದ್ದಾರೆ: ಸಿದ್ದರಾಮಯ್ಯ ಟೀಕೆಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ: ಸಾಹುಕಾರನ ಬೆನ್ನಿಗೆ ನಿಂತ ಬಿಜೆಪಿ ನಾಯಕರುಸಾಹುಕಾರನ ತಲೆದಂಡ: ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆತಿಂಗಳಲ್ಲೇ ಕೋಟಿ ಒಡೆಯನಾದ ನಂಜುಂಡೇಶ್ವರ: ದೇವಸ್ಥಾನದ ಹುಂಡಿಯಲ್ಲಿ 1.11ಕೋಟಿ ಸಂಗ್ರಹಬೃಹದಾಕಾರದ ಅರಳಿ ಮರಕ್ಕೆ ಕೊಡಲಿ ಪೆಟ್ಟು: ಕಡಿದ ಮರದ ಬುಡಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ ಪರಿಸರ ಪ್ರೇಮಿಗಳುಸಚಿವ ಸಿಪಿ ಯೋಗೀಶ್ವರ್ ಗೆ ಮಾಜಿ ಸಿಎಂ ಕುಮಾರಸ್ವಾಮಿ ಟಾಂಗ್ಯಾರಿಗೆ ಎಲ್ಲಿ ಅನುಕೂಲ ಆಗುತ್ತೋ ಅಲ್ಲಿ ಲಸಿಕೆ ಹಾಕಿಸಿಕೊಳ್ಳಲಿ: ಸಿಎಂ ಯಡಿಯೂರಪ್ಪಜೀವನದ ಪಾಠ ಕಲಿಸಿದ ಕೊರೋನಾ: ವ್ಯಕ್ತಿಯ ಶ್ರಮಕ್ಕೆ ಮೋದಿ ಮೆಚ್ಚುಗೆಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆ: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಸಿಡಿಮಾ 3 ರಿಂದ ಕಾಂಗ್ರೆಸ್‌ನ ಜನಧ್ವನಿ ಯಾತ್ರೆ

Petrol Price Today: ಇಂದು ತೈಲ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ

ಕಳೆದ 53 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 24 ಬಾರಿ ಹೆಚ್ಚಾಗಿದೆ. ಜನವರಿ 1ರಿಂದೀಚೆಗೆ 7.30 ರೂಪಾಯಿ ಹೆಚ್ಚಾಗಿದೆ. ಫೆಬ್ರವರಿ ತಿಂಗಳಲ್ಲಿ 14ನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಲಾಗಿತ್ತು.
Share on facebook
Share on google
Share on twitter
Share on linkedin
Share on print

ನವದೆಹಲಿ, ಫೆ. 22: ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ಬೆಲೆ ಕಡಿಮೆ ಇದ್ದರೂ 12 ದಿನ ನಿರಂತರವಾಗಿ ಬೆಲೆ ಏರಿಕೆ ಮಾಡಿದ್ದ, ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೊನೆಗೂ ಸಾರ್ವಜನಿಕರ ವ್ಯಾಪಕ ವಿರೋಧಕ್ಕೆ ಮಣಿದು ಇಂದು ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಳ ಮಾಡಿಲ್ಲ.

ಕಳೆದ 53 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 24 ಬಾರಿ ಹೆಚ್ಚಾಗಿದೆ. ಜನವರಿ 1ರಿಂದೀಚೆಗೆ 7.30 ರೂಪಾಯಿ ಹೆಚ್ಚಾಗಿದೆ. ಫೆಬ್ರವರಿ ತಿಂಗಳಲ್ಲಿ 14ನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಲಾಗಿತ್ತು. ಕಳೆದ 12 ದಿನಗಳಿಂದ ನಿರಂತರವಾಗಿ ಬೆಲೆ ಏರಿಕೆ ಏರಿಸಿದ್ದು 12 ದಿನಗಳಿಂದ ಒಟ್ಟು 4.34 ಪೈಸೆ ಬೆಲೆ ಹೆಚ್ಚಳ ಮಾಡಲಾಗಿತ್ತು. 13ನೇ ದಿನವಾದ ನಿನ್ನೆ ಮತ್ತು 14 ದಿನವಾದ ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ.

ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಫೆಬ್ರವರಿ 4ರಂದು ತಾರೀಖು ತಲಾ 37 ಪೈಸೆ, ಫೆಬ್ರವರಿ 5ರಂದು 37 ಪೈಸೆ, ಫೆಬ್ರವರಿ 9ರಂದು 42 ಪೈಸೆ, ಫೆಬ್ರವರಿ 10ರಂದು 31 ಪೈಸೆ, ಫೆಬ್ರವರಿ 11ರಂದು 38 ಪೈಸೆ, ಫೆಬ್ರವರಿ 12ರಂದು 38 ಪೈಸೆ, ಫೆಬ್ರವರಿ 13ರಂದು 39 ಪೈಸೆ, ಫೆಬ್ರವರಿ 14ರಂದು 34 ಪೈಸೆ, ಫೆಬ್ರವರಿ 15ರಂದು 30 ಪೈಸೆ, ಫೆಬ್ರವರಿ 16ರಂದು 38 ಪೈಸೆ, ಫೆಬ್ರವರಿ 17ರಂದು 27 ಪೈಸೆ, ಫೆಬ್ರವರಿ 18ರಂದು 36 ಪೈಸೆ,  ಫೆಬ್ರವರಿ 19ರಂದು 36 ಪೈಸೆ ಹಾಗೂ ಫೆಬ್ರವರಿ 20ರಂದು 41 ಪೈಸೆ ಹೆಚ್ಚಳ ಮಾಡಲಾಗಿತ್ತು.

ಡಾಲರ್ ಎದುರು ರೂಪಾಯಿ ಮೌಲ್ಯ 72.85 ರೂಪಾಯಿ ಇದೆ. ಬ್ರೆಂಟ್ ಕಚ್ಚಾ ತೈಲವು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್‌ಗೆ 60.60ನಂತೆ ಲಭ್ಯವಾಗುತ್ತಿದೆ. ಆದರೂ ಭಾರತದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಳ ಮಾಡುತ್ತಿದೆ. ದೇಶದ ವಿವಿಧ ನಗರಗಳಲ್ಲಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ವಿವರ ಹೀಗಿದೆ.


ದೇಶದ ವಿವಿಧ ನಗರಗಳಲ್ಲಿನ ಪೆಟ್ರೋಲ್ -ಡೀಸೆಲ್ ಬೆಲೆ ಇಂತಿದೆ:

ಬೆಂಗಳೂರು- ಪೆಟ್ರೋಲ್ 93.61 ರೂ., ಡೀಸೆಲ್ 85.84 ರೂ.

ಭೂಪಾಲ್- ಪೆಟ್ರೋಲ್ 98.60 ರೂ., ಡೀಸೆಲ್ 89.23 ರೂ.

ಮುಂಬೈ- ಪೆಟ್ರೋಲ್ 97 ರೂ., ಡೀಸೆಲ್ 88.06 ರೂ.

ಜೈಪುರ – ಪೆಟ್ರೋಲ್ 97.10 ರೂ., ಡೀಸೆಲ್ 89.44 ರೂ.

ಪಾಟ್ನಾ- ಪೆಟ್ರೋಲ್ 92.91 ರೂ., ಡೀಸೆಲ್ 86.22 ರೂ.

ಚೆನ್ನೈ- ಪೆಟ್ರೋಲ್ 92.59 ರೂ., ಡೀಸೆಲ್ 85.98 ರೂ.

ಕೋಲ್ಕತ್ತಾ- ಪೆಟ್ರೋಲ್ 91.78 ರೂ., ಡೀಸೆಲ್ 84.56 ರೂ

ದೆಹಲಿ- ಪೆಟ್ರೋಲ್ 90.58 ರೂ., ಡೀಸೆಲ್ 80.97 ರೂ.

ಲಕ್ನೋ- ಪೆಟ್ರೋಲ್ 88.86 ರೂ., ಡೀಸೆಲ್ 81.35 ರೂ.

ನೋಯ್ಡಾ- ಪೆಟ್ರೋಲ್ 88.54 ರೂ., ಡೀಸೆಲ್ 80 ರೂ.

ಗುರುಗಾವ್ – ಪೆಟ್ರೋಲ್ 87.60 ರೂ., ಡೀಸೆಲ್ 78.60 ರೂ.

ರಾಂಚಿ- ಪೆಟ್ರೋಲ್ 88.08 ರೂ., ಡೀಸೆಲ್ 85.60 ರೂ.

Submit Your Article