England : ಯಾವುದೇ ಸೌಂದರ್ಯ ಸ್ಪರ್ಧೆಯನ್ನು(Beauty Contest) ಗಮನಿಸಿ, ಸ್ಪರ್ಧಿಗಳು ಮುಖಕ್ಕೆ ದಟ್ಟವಾಗಿ ಮೇಕಪ್(MakeUp) ಹಚ್ಚಿಕೊಳ್ಳುವ ಮೂಲಕ ಸುಂದರವಾಗಿ ಕಾಣಿಸಿಕೊಳ್ಳುತ್ತಾರೆ.
ಆದರೆ ಇಂಗ್ಲೆಂಡಿನ(England) ಯುವತಿಯೊಬ್ಬಳು ಮೇಕಪ್ ಇಲ್ಲದೆಯೇ ಸೌಂದರ್ಯ ಸ್ಪರ್ಧೆಯಲ್ಲಿ (Compitation)ಭಾಗವಹಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾಳೆ.

ಹೌದು, ಮಿಸ್ ಇಂಗ್ಲೆಂಡ್(Miss England) ಸ್ಪರ್ಧೆಯ ಶತಮಾನದ ಸುದೀರ್ಘ ಇತಿಹಾಸದಲ್ಲಿಯೇ, ಯಾವುದೇ ಮೇಕಪ್ ಧರಿಸದೆ ಮೊದಲ ಬಾರಿಗೆ ಯುವತಿಯೊಬ್ಬರು ಸ್ಪರ್ಧಿಸಿದ್ದಾರೆ.
ಈ ಮೂಲಕ 20 ವರ್ಷ ವಯಸ್ಸಿನ ಯುವತಿಯೊಬ್ಬರು ಫೈನಲಿಸ್ಟ್ ಸ್ಪರ್ಧೆಯಲ್ಲಿ ಮೇಕಪ್ (Makeup)ಇಲ್ಲದೆ ಸ್ಪರ್ಧಿಸಿದ ಮೊದಲ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ.
ಹೌದು, ಲಂಡನ್‌ನಲ್ಲಿ (Londan) ರಾಜಕೀಯ ವಿಜ್ಞಾನದ ವಿದ್ಯಾರ್ಥಿನಿಯಾಗಿರುವ ಮೆಲಿಸಾ ರವೂಫ್ (Melisa Raouf), ಮಿಸ್ ಇಂಗ್ಲೆಂಡ್ ಸ್ಪರ್ಧೆಯ ಸೆಮಿಫೈನಲ್‌ನಲ್ಲಿ ಮೇಕಪ್ ಧರಿಸದೆ ಭಾಗವಹಿಸಿ, ಮುನ್ನಡೆದಿದ್ದಾರೆ.
ಸೆಮಿಫೈನಲ್‌ನಲ್ಲಿ ಗೆಲುವು ಪಡೆದಿರುವ ಅವರು ಈಗ ಅಕ್ಟೋಬರ್‌ನಲ್ಲಿ ನಡೆಯಲಿರುವ ಮಿಸ್ ಇಂಗ್ಲೆಂಡ್ (Miss Englend) ಕಿರೀಟವನ್ನು ಮುಡಿಗೇರಿಸಿಕೊಳ್ಳಲು ಇತರ 40 ಪ್ರತಿಸ್ಪರ್ಧಿಗಳ ಜೊತೆಗೆ ಸ್ಪರ್ಧಿಸಲಿದ್ದಾರೆ.
ಇದನ್ನೂ ಓದಿ : https://vijayatimes.com/kerala-man-covers-his-face-from-honey-bee/
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮೆಲಿಸಾ ರವೂಫ್, “ಒಬ್ಬ ವ್ಯಕ್ತಿ ತಮ್ಮದೇ ಸ್ವಂತ ಚರ್ಮದಲ್ಲಿ ಸಂತೋಷವಾಗಿದ್ದರೆ, ಮುಖವನ್ನು ಮೇಕಪ್‌ನಿಂದ ಮುಚ್ಚಿಕೊಳ್ಳಲು ಬಯಸುವುದಿಲ್ಲ.
ನಮ್ಮ ನ್ಯೂನತೆಗಳು ನಮ್ಮನ್ನು ನಾವು ಯಾರು ಎಂಬುದನ್ನು ತೋರಿಸುತ್ತವೆ. ಅದೇ ಪ್ರತಿಯೊಬ್ಬ ವ್ಯಕ್ತಿಯನ್ನು ಇನ್ನೊಬ್ಬರಿಗಿಂತ ವಿಭಿನ್ನವಾಗಿಸುತ್ತದೆ” ಎಂದು ಹೇಳಿದ್ದಾರೆ.
“ನಾನು ಸೌಂದರ್ಯದ ಮಾನದಂಡಗಳನ್ನು ಹೊಂದಿದ್ದೇನೆ ಎಂದು ನಾನು ಎಂದಿಗೂ ಭಾವಿಸಲಿಲ್ಲ. ನನ್ನ ಸ್ವಂತ ಸೌಂದರ್ಯದಲ್ಲಿಯೇ ನಾನು ಸುಂದರವಾಗಿದ್ದೇನೆ ಎಂದು ನಾನು ಇತ್ತೀಚೆಗೆ ಒಪ್ಪಿಕೊಂಡಿದ್ದೇನೆ.
ಅದಕ್ಕಾಗಿಯೇ ನಾನು ಯಾವುದೇ ಮೇಕಪ್ ಇಲ್ಲದೆ ಸ್ಪರ್ಧಿಸಲು ನಿರ್ಧರಿಸಿದೆ.

ಈ ಮೂಲಕ ನಾನು ನಾನೆಂದು ಒಪ್ಪಿಕೊಳ್ಳಲು ಮತ್ತು ನಾನು ಯಾರೆಂಬುದನ್ನು ಹಂಚಿಕೊಳ್ಳಲು ಹೆದರುವುದಿಲ್ಲ. ಮೆಲಿಸಾ ನಿಜವಾಗಿಯೂ ಯಾರೆಂದು ಜಗತ್ತಿಗೆ ತೋರಿಸಲು ನಾನು ಬಯಸುತ್ತೇನೆ” ಎಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಮಿಸ್ ಇಂಗ್ಲೆಂಡ್‌ನ ನಿರ್ದೇಶಕಿ ಆಂಜಿ ಬೀಸ್ಲಿ, “ಮಿಸ್ ಇಂಗ್ಲೆಂಡ್ 2022 ರ ಸ್ಪರ್ಧಿ ಮೆಲಿಸಾಗೆ ಶುಭ ಹಾರೈಸುತ್ತೇನೆ.
ನೈಸರ್ಗಿಕ ಸೌಂದರ್ಯವನ್ನು ಹೆಚ್ಚಿಸಲು ನಾನು ಮೇಕಪ್ ಮಾಡುತ್ತೇನೆ. ಆದರೆ, ಯುವಜನತೆ ಅದನ್ನು ಮುಖವಾಡದಂತೆ ಕಾಣುವಷ್ಟು ದಪ್ಪವಾಗಿ ಧರಿಸುವ ಅಗತ್ಯವಿಲ್ಲ” ಎಂದು ಹೇಳಿದ್ದಾರೆ.
ಏನೇ ಇರಲಿ, ಮೇಕಪ್ ಇಲ್ಲದೆ ಹೊರಗಡೆ ಕಾಲಿಡಲೂ ಹಿಂಜರಿಯುವ ಯುವತಿಯರ ನಡುವೆ ಮೆಲಿಸಾ ವಿಭಿನ್ನವಾಗಿ ನಿಲ್ಲುತ್ತಾರೆ.
- ಪವಿತ್ರ