Natural Treatment : ಆರೋಗ್ಯ(Health) ಮತ್ತು ಮಾನಸಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಅನೇಕ ವೈದ್ಯ ಪದ್ದತಿಗಳಿವೆ. ಭಾರತದಲ್ಲಿ ಅಲೋಪತಿ, ಹೋಮಿಯೋಪಥಿ, ಆಯುರ್ವೇದ, ಸಿದ್ಧ, ಯುನಾನಿ ಚಿಕಿತ್ಸಾ ಪದ್ಧತಿಗಳಿವೆ.
ಇದರಲ್ಲಿ ಪ್ರಕೃತಿ ಚಿಕಿತ್ಸೆ ಕೂಡ ಒಂದು. ಪ್ರಕೃತಿ ಚಿಕಿತ್ಸೆಯು (Natural Treatment Tips) ನಿಸರ್ಗವೇ ಶ್ರೇಷ್ಠ ಚಿಕಿತ್ಸಕ ಎಂಬ ಅಂಶವನ್ನು ಅವಲಂಬಿಸಿದೆ. ಈ ಚಿಕಿತ್ಸಾ ಪದ್ದತಿಯ ಉಪಯೋಗ ಮತ್ತು ಮಹತ್ವದ ವಿವರ ಇಲ್ಲಿದೆ ನೋಡಿ.

ಪ್ರಕೃತಿ ಚಿಕಿತ್ಸೆ ಎಂದರೇನು? : ಪ್ರಕೃತಿ ಚಿಕಿತ್ಸೆಯಲ್ಲಿ ಯಾವುದೇ ರಸಾಯನಿಕ ಔಷಧಿಗಳನ್ನು ಬಳಸಲಾಗುವುದಿಲ್ಲ. ದೇಹಕ್ಕೆ ಬೇಕಾಗುವ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು, ಜೀವನಶೈಲಿಯನ್ನು ಉತ್ತಮಗೊಳಿಸುವ ಮೂಲಕ ಚಿಕಿತ್ಸೆ ನೀಡಲಾಗುತ್ತದೆ.
“ಪ್ರಕೃತಿಯು ನಮ್ಮನ್ನು ಗುಣಪಡಿಸುತ್ತದೆ, ಔಷಧಿಗಳಲ್ಲ” ಎಂಬುದು ಪ್ರಕೃತಿ ಚಿಕಿತ್ಸೆಯ (Natural Treatment Tips) ಮೂಲ ತತ್ವವಾಗಿದೆ. ಪ್ರಕೃತಿ ಚಿಕಿತ್ಸೆಯಲ್ಲಿ ಮಣ್ಣಿನ ಚಿಕಿತ್ಸೆ, ವಾಯು ಚಿಕಿತ್ಸೆ, ಜಲ ಚಿಕಿತ್ಸೆ, ಮ್ಯಾಗ್ನೆಟ್ಥೆ.ರಪಿ, ಬಣ್ಣ ಚಿಕಿತ್ಸೆ, ಅಕ್ಯುಪಂಕ್ಚರ್, ಆಕ್ಯುಪ್ರೆಶರ್, ಎಲೆಕ್ಟ್ರೋಥೆರಪಿ ಹೀಗೆ ಹಲವಾರು ಚಿಕಿತ್ಸೆಗಳಿವೆ.
ಇದನ್ನೂ ಓದಿ : https://vijayatimes.com/rahul-gandhi-visits-chammundi-hill/
ಪ್ರಕೃತಿ ಚಿಕಿತ್ಸೆಯ ಮೂಲ ತತ್ವಗಳು : ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸ್ವಚ್ಛತೆ ಬಹಳ ಮುಖ್ಯ. ದಿನಕ್ಕೆ ಎರಡು ಬಾರಿ, ಮಲ ವಿಸರ್ಜನೆ ಮತ್ತು ಸ್ನಾನದ ಅಭ್ಯಾಸವನ್ನು ರೂಢಿ ಮಾಡಿಕೊಳ್ಳಬೇಕು.
ಮನೆಯಲ್ಲಿ ತಯಾರಿಸಿದ ಆಹಾರವನ್ನು ಹಿತಮಿತವಾಗಿ ಸೇವಿಸಬೇಕು. ಸಸ್ಯಾಹಾರ ಸೇವನೆ ಮಾಡುವುದು ಉತ್ತಮ.

ಪ್ರತಿದಿನ 2 ರಿಂದ 3 ಲೀಟರ್ ನಷ್ಟು ನೀರನ್ನು ಕುಡಿಯುವುದು. ಊಟದಲ್ಲಿ ತರಕಾರಿ ಮತ್ತು ಸೊಪ್ಪು ಸೇವನೆ ಮಾಡುವುದು ಉತ್ತಮ. ಉಪವಾಸ ಪ್ರಕೃತಿ ಚಿಕಿತ್ಸೆಯಲ್ಲಿ ಪ್ರಮುಖವಾದ ಅಂಶ.
ಉಪವಾಸವೆಂದರೆ ದಿನದಲ್ಲಿ ಸ್ವಲ್ಪ ಸಮಯ ಅಥವಾ ಸಂಪೂರ್ಣವಾಗಿ ಎಲ್ಲಾ ರೀತಿಯ ಆಹಾರ ಸೇವಿಸುವುದರಿಂದ ದೂರವಿರುವುದು.
ಇದನ್ನೂ ಓದಿ : https://vijayatimes.com/use-20-20-20-law-for-eye-health/
ಪ್ರಕೃತಿ ಚಿಕಿತ್ಸೆಯಲ್ಲಿ ಯೋಗ ಮತ್ತು ಪರ್ಯಾಯ ಜೀವನ ಪದ್ಧತಿ ಅತಿಮುಖ್ಯ. ಪ್ರತಿದಿನ ನಾಲ್ಕು ಬಾರಿ ಸೂರ್ಯ ನಮಸ್ಕಾರ , ಧ್ಯಾನವನ್ನು ಕನಿಷ್ಠ ಒಂದು ಗಂಟೆ ಕಾಲ ಮಾಡಬೇಕು.
ಆರೋಗ್ಯಕರ ಆಹಾರ, ಶುದ್ಧ ನೀರು, ವ್ಯಾಯಾಮ, ಉಪವಾಸ, ಸೂರ್ಯನ ಬೆಳಕು ಮತ್ತು ಒತ್ತಡ ನಿರ್ವಹಣೆಗೆ ಪ್ರಕೃತಿ ಚಿಕಿತ್ಸೆಗೆ ಆಧಾರವಾಗಿವೆ.
- ಮಹೇಶ್.ಪಿ.ಎಚ್