ನವಜೋತ್ ಸಿಂಗ್ ಸಿಧು(Navjoth Singh Sidhu) ಅವರು ಶನಿವಾರ ಸಂಜೆಯವರೆಗೆ ಸುಮಾರು 24 ಗಂಟೆಗಳ ಕಾಲ ಜೈಲಿನಲ್ಲಿದ್ದಾರೆ. ಆದರೆ, ಅವರ ಪರ ವಕೀಲರಾದ ಎಚ್‌ಪಿಎಸ್ ವರ್ಮಾ(HPS Varma) ಅವರು ನೀಡಿರುವ ಮಾಹಿತಿ ಅನುಸಾರ, ಈ ಅವಧಿಯಲ್ಲಿ ಅವರು ತಿನ್ನಲು ಒಂದು ತುತ್ತು ಅನ್ನವು ಇರಲಿಲ್ಲ.

ಶುಕ್ರವಾರ ರಾತ್ರಿ ಶಿಕ್ಷೆಗೆ ಶರಣಾದ ನಂತರ, ಪಟಿಯಾಲಾ ಜೈಲು ಅಧಿಕಾರಿಗಳು ನೀಡಿದ ಭೋಜನವನ್ನು ತಿನ್ನಲು ನಿರಾಕರಿಸಿದ್ದಾರೆ, ಏಕೆಂದರೆ ಅವರಿಗೆ ಗೋಧಿ ಅಲರ್ಜಿ ಇದೆ ಎಂದು ಅವರ ಪರ ವಕೀಲರು ತಿಳಿಸಿದ್ದಾರೆ. ಕ್ರಿಕೆಟಿಗ ಮತ್ತು ರಾಜಕಾರಣಿಯಾಗಿರುವ ನವಜೋತ್ ಸಿಂಗ್ ಸಿಧು ಅವರ ಆರೋಗ್ಯದ ಅಡೆತಡೆಗಳಿಗೆ ಅನುಗುಣವಾಗಿ ಆಹಾರ ಒದಗಿಸಬೇಕು ಎಂದು ವಕೀಲ ಎಚ್‌ಪಿಎಸ್ ವರ್ಮಾ ಅವರು ಪಟಿಯಾಲ ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ. ಆದರೆ, ಇದುವರೆಗೂ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
“ನಾನು ಬೆಳಿಗ್ಗೆಯಿಂದ ನ್ಯಾಯಾಲಯದಲ್ಲಿ ಕುಳಿತಿದ್ದೇನೆ, ಜೈಲು ಅಧಿಕಾರಿಗಳು ಬರುತ್ತಾರೆ ಎಂದು ಕಾಯುತ್ತಿದ್ದೇನೆ. ಆದ್ರೆ ಇಲ್ಲಿಯವರೆಗೆ ಯಾರೂ ಬಂದಿಲ್ಲ” ಎಂದು ಹೇಳಿದರು. ಸಿದ್ದು ಜೈಲಿನಲ್ಲಿರಲು ಕಾರಣವೇನು? : 1988ರ ರೋಡ್ ರೇಜ್ ಪ್ರಕರಣದಲ್ಲಿ ಪಂಜಾಬ್ ಕಾಂಗ್ರೆಸ್ ಮಾಜಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧುಗೆ ಸುಪ್ರೀಂ ಕೋರ್ಟ್ ಗುರುವಾರ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಪಟಿಯಾಲ ನಿವಾಸಿ ಗುರ್ನಾಮ್ ಸಿಂಗ್ ಅವರು ಸಾವನ್ನಪ್ಪಿದ 34 ವರ್ಷ ಹಳೆಯ ರೋಡ್ ರೇಜ್ ಪ್ರಕರಣದಲ್ಲಿ ಅವರನ್ನು ದೋಷಮುಕ್ತಗೊಳಿಸಿದ ಮೇ 2018ರ ಆದೇಶವನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಈ ಹಿಂದೆ ಅನುಮತಿ ನೀಡಿತ್ತು.

1988 ರಲ್ಲಿ ಏನಾಯಿತು ಎಂದು ತಿಳಿಯುವುದಾದರೆ,
ಈ ಪ್ರಕರಣವು ಪಟಿಯಾಲ ನಿವಾಸಿ ಗುರ್ನಾಮ್ ಸಿಂಗ್ ಎಂಬ ವ್ಯಕ್ತಿಯನ್ನು ಡಿಸೆಂಬರ್ 1988 ರಲ್ಲಿ ರಸ್ತೆ ಅಪಘಾತದ ಘಟನೆಯಲ್ಲಿ ಆ ವ್ಯಕ್ತಿ ಸಾವನ್ನಪ್ಪಿದರು. ಡಿಸೆಂಬರ್ 27, 1988 ರಂದು, ಸಿಧು ಮತ್ತು ರೂಪಿಂದರ್ ಸಿಂಗ್ ಸಂಧು ತಮ್ಮ ಜಿಪ್ಸಿಯನ್ನು ಪಟಿಯಾಲಾದ ಶೆರನ್‌ವಾಲಾ ಗೇಟ್ ಕ್ರಾಸಿಂಗ್ ಬಳಿ ರಸ್ತೆಯ ಮಧ್ಯದಲ್ಲಿ ನಿಲ್ಲಿಸಿದ್ದರು. 65 ವರ್ಷದ ಗುರ್ನಾಮ್ ಸಿಂಗ್ ಕಾರಿನಲ್ಲಿ ಸ್ಥಳಕ್ಕೆ ಬಂದಾಗ, ಅವರು ಅವರನ್ನು ಪಕ್ಕಕ್ಕೆ ಹೋಗುವಂತೆ ಹೇಳಿದರು.
ಇದಕ್ಕೆ ಕೋಪಗೊಂಡ ಸಿಧು, ಗುರ್ನಾಮ್ ಸಿಂಗ್ ಅವರಿಗೆ ಮನಬಂದಂತೆ ಥಳಿಸಿ ಅವರ ಜಿಪ್ಸಿ ಕೀಯನ್ನು ಕಸಿದು, ಯಾವುದೇ ರೀತಿಯ ತುರ್ತು ಸಹಾಯ ಸಿಗದಂತೆ ಮಾಡಿದ್ದು ಪ್ರಕರಣದ ಪ್ರಮುಖ ಅಂಶವಾಗಿದೆ. ಇದೇ ಹಿನ್ನಲೆ ಈಗ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದ್ದು, ಸುಪ್ರಿಂ ಅವರನ್ನು ಬಂಧಿಸಿ ಒಂದು ವರ್ಷ ಕಾರಗೃಹಕ್ಕೆ ತೆರಳಲು ಆದೇಶ ಹೊರಡಿಸಿತು.