Breaking News
ರೈತ ವಿರೋಧಿ ಕಾನೂನುಗಳನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು: ಸಿದ್ದರಾಮಯ್ಯ72ನೇ ಗಣರಾಜ್ಯೋತ್ಸವ – ರಾಜ್​ಪಥ್‌ನಲ್ಲಿ ಧ್ವಜಾರೋಹಣ ನೆರವೇರಿಸಿದ ರಾಷ್ಟ್ರಪತಿ ಕೋವಿಂದ್ರಾಷ್ಟ್ರ ರಾಜಧಾನಿಯಲ್ಲಿ ರೈತರ ಪ್ರೊಟೆಸ್ಟ್: ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಟ್ರ್ಯಾಕ್ಟರ್ ಪೆರೇಡ್2021ನೇ ಸಾಲಿನ “ಪದ್ಮ‌ ಪ್ರಶಸ್ತಿ” ಪ್ರಕಟ: ಕರ್ನಾಟಕದ ಐವರು ಸೇರಿದಂತೆ 119 ಮಂದಿಗೆ ಗೌರವ`ಡೆನ್ವರ್‌’ಗೆ ಈಗ ಸುದೀಪ್ ರಾಯಭಾರಿಬೆಂಗಳೂರಿನಲ್ಲಿ ಟ್ರ್ಯಾಕ್ಟರ್ ಪರೇಡ್ ಗೆ ಅನುಮತಿ ಇಲ್ಲ: ಕಮಲ್ ಪಂತ್ಮತ್ತೆ ಕೆ ಸುಧಾಕರ್ ಗೆ ಆರೋಗ್ಯ ಇಲಾಖೆ ಹೊಣೆಭಾರತದ ಗಡಿಗೆ ನುಸುಳಿದ ಚೀನಾ ಸೈನಿಕರು – ದಾಳಿಗೆ 20 ಸೈನಿಕರು ಗಾಯನನಗೆ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಕೊಟ್ಟರೆ ನಿಭಾಯಿಸುತ್ತೇನೆ: ಎಂಟಿಬಿ ನಾಗರಾಜ್ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ಆತ್ಮಹತ್ಯೆ

`ನವ್ಯಾ ನಾಯರ್’ ಪುಸ್ತಕ ಬಿಡುಗಡೆ

Share on facebook
Share on google
Share on twitter
Share on linkedin
Share on print

ಕನ್ನಡದಲ್ಲಿ ದರ್ಶನ್ ಜೊತೆಗೆ ಗಜ', ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆಗೆದೃಶ್ಯ’, ಮೊದಲಾದ ಸಿನಿಮಾಗಳಲ್ಲಿ ನಟಿಸಿದಂಥ ನವ್ಯಾ ನಾಯರ್ ಮರಳಿ ಬಂದಿದ್ದಾರೆ. ಅಂದಹಾಗೆ ಅವರು ವಾಪಾಸು ಬಂದಿರುವುದು ಸಿನಿಮಾದ ಮೂಲಕ ಅಲ್ಲ. ತಮ್ಮ ಜೀವನಕ್ಕೆ ಸಂಬಂಧಿಸಿದ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಮೂಲಕ. ಮಲಯಾಳಂನಲ್ಲಿ `ನವರಸಂಙಳ್’ ಹೆಸರಿನಲ್ಲಿ ಬಿಡುಗಡೆಯಾಗಿದ್ದಂಥ ಅವರ ಬದುಕಿನ ಕತೆಯನ್ನು ಕನ್ನಡಕ್ಕೆ ತರ್ಜುಮೆ ಮಾಡಲಾಗಿದ್ದು ಅದರ ಲೋಕಾರ್ಪಣೆಯ ಸಂದರ್ಭದಲ್ಲಿ ನವ್ಯಾ ಆಗಮಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೃಶ್ಯ ಸಿನಿಮಾದ ಪ್ರೀಮಿಯರ್ ಶೋ ನೋಡಲು ಬೆಂಗಳೂರಿಗೆ ಬಂದ ಬಳಿಕ ಇದೇ ಮೊದಲ ಬಾರಿಗೆ ನಾನು ಬಂದಿದ್ದೇನೆ. ಕನ್ನಡದಲ್ಲಿ ವಿಷ್ಣುವರ್ಧನ್, ರವಿಚಂದ್ರನ್, ಶಿವರಾಜ್ ಕುಮಾರ್, ದರ್ಶನ್ ಅವರಂಥ ತಾರೆಯರ ಜೊತೆಗೆ ನಟಿಸಲು ಅವಕಾಶ ಸಿಕ್ಕಿದೆ. ಮದುವೆಯ ಬಳಿಕ ಬ್ರೇಕ್ ತೆಗೆದುಕೊಂಡಿದ್ದೆ. ಕಳೆದ ವರ್ಷ ಮತ್ತೆ ಚಿತ್ರರಂಗಕ್ಕೆ ಮರಳಿದ್ದು, ಒಂದು ಹೊಸ ಮಲಯಾಳಂ ಚಿತ್ರದಲ್ಲಿ ನಟಿಸಿದ್ದೇನೆ. ಅದು ಬಿಡುಗಡೆಯಾಗಬೇಕಿದೆ. ಉತ್ತಮ ಅವಕಾಶ ದೊರಕಿದರೆ ಕನ್ನಡದಲ್ಲಿಯೂ ನಟಿಸಲು ತಯಾರಿದ್ದೇನೆ ಎಂದರು.

ಮಲಯಾಳಂನ ಜನಪ್ರಿಯ ಮಾಸ ಪತ್ರಿಕೆಯೊಂದರಲ್ಲಿ ಒಂಬತ್ತು ತಿಂಗಳ ಕಾಲ ಪ್ರಕಟಗೊಂಡ ನವ್ಯಾ ಬದುಕಿನ ಅನುಭವಗಳಿಗೆ ನವ ರಸಗಳು ಎನ್ನುವ ಅರ್ಥದ ಶೀರ್ಷಿಕೆ ನೀಡಲಾಗಿತ್ತು. ಅದರಲ್ಲಿ ಅವರು 2013ರ ವರೆಗೆ ತಮ್ಮ ಬದುಕಿನಲ್ಲಿ ನಡೆದ ಶೃಂಗಾರ, ಶಾಂತದಿಂದ ಹಿಡಿದು ಭಯಾನಕ,ಕರುಣ ಸೇರಿದಂತೆ ಎಲ್ಲ ಒಂಬತ್ತು ಭಾವಗಳು ಮಿಳಿತಗೊಂಡಂಥ ವಿವಿಧ ಘಟನೆಗಳನ್ನು ಹಂಚಿಕೊಂಡಿದ್ದರು. ಅದನ್ನು ಕನ್ನಡಕ್ಕೆ ತರ್ಜುಮೆ ಮಾಡಿದ ಲೇಖಕಿ ಜಾನೆಟ್ ಐ.ಜೆಯವರು ಪುಸ್ತಕಕ್ಕೆ ಧನ್ಯ ವೀಣಾ' ಎಂದು ನಾಮಕರಣ ಮಾಡಿದ್ದಾರೆ. "ನವ್ಯಾ ನಾಯರ್ ಅವರ ಮೂಲ ಹೆಸರು ಧನ್ಯಾ ವಿ.ನಾಯರ್ ಎಂದಾಗಿದೆ. ವೀಣಾ ಎನ್ನುವುದು ಅವರ ತಾಯಿಯ ಹೆಸರು. ಹಾಗಾಗಿಧನ್ಯ ವೀಣಾ’ ಎಂದೇ ಪುಸ್ತಕಕ್ಕೆ ಹೆಸರಿಡಲಾಗಿದೆ” ಎಂದು ಲೇಖಕಿ ಜಾನೆಟ್ ಐ.ಜೆ ಹೇಳಿದರು. ಅಂದಹಾಗೆ ಪುಸ್ತಕದ ನಿರೂಪಣೆ ಮತ್ತು ಕಾರ್ಯಕ್ರಮದ ಸಂಯೋಜನೆಯನ್ನು ಬರಹಗಾರ ಜಿ.ಎಸ್ ಯುದಿಷ್ಠಿರ ಅವರು ವಹಿಸಿಕೊಂಡಿದ್ದರು. ವಿಶೇಷ ಆಹ್ವಾನಿತರಾಗಿ ಬಂದಿದ್ದ ನಟ ಸಂಚಾರಿ ವಿಜಯ್ ಮಾತನಾಡಿ “ನವ್ಯಾ ಅವರ ಕನ್ನಡ ಸಿನಿಮಾಗಳನ್ನು ನಾನು ನೋಡಿದ್ದೇನೆ. ತಮಿಳಿನಿಂದ ತರ್ಜುಮೆಯಾದ ಕತೆಯೊಂದು ನಾನು ಅವಳಲ್ಲ ನಾನು' ಸಿನಿಮಾವಾಗಿ ನನಗೆ ಪ್ರಶಸ್ತಿ ತಂದುಕೊಟ್ಟಿತು. ಹಾಗಾಗಿ ಬೇರೆಭಾಷೆಯಿಂದ ಕನ್ನಡಕ್ಕೆ ಭಾಷಾಂತರವಾಗುವ ಕೃತಿಗಳು ಕೂಡ ಪ್ರಮುಖ ಸ್ಥಾನ ಪಡೆಯುತ್ತವೆ" ಎಂದರು.ಓ ಮನಸೇ’ ಪತ್ರಿಕೆಯ ಸಂಪಾದಕಿ ಭಾವನಾ ಬೆಳಗೆರೆಯವರು ಧನ್ಯವೀಣಾ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು.

Submit Your Article