Udupi : ರಾಜ್ಯದಲ್ಲಿ ನಕ್ಸಲ್ (Naxal organization) ಸಂಘಟನೆಯನ್ನು ಬಲಪಡಿಸಲು ಕಳೆದ 20 ವರ್ಷಗಳಿಂದಲೂ ಓಡಾಡುತ್ತಿದ್ದು ಮಲೆನಾಡು ಭಾಗದ ಪ್ರಮುಖ ನಕ್ಸಲ್ (Prominent Naxal) ಮುಖಂಡ ವಿಕ್ರಂ ಗೌಡನನ್ನು ಉಡುಪಿ ಜಿಲ್ಲೆಯ (Udupi district) ಕಾರ್ಕಳ ತಾಲೂಕಿನ ಹೆಬ್ರಿ ಕಬ್ವಿನಾಲೆಯ ಸೀತಂಬೈಲುವಿನಲ್ಲಿ ಸೋಮವಾರ ರಾತ್ರಿ ಎಎನ್ಎಫ್ (ANF) ತಂಡ ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದೆ.

ನಕ್ಸಲ್ ನಾಯಕ ವಿಕ್ರಂ ಗೌಡ (Vikram Gowda) ಹತ್ಯೆ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿರುವ ಗೃಹಸಚಿವ ಜಿ ಪರಮೇಶ್ವರ್ (G. Parameshwar) ಅವರು, ವಿಕ್ರಂ ಗೌಡನನ್ನು ಕಳೆದ 20 ವರ್ಷಗಳಿಂದ ರಾಜ್ಯ ಪೊಲೀಸರು (State Police) ಹುಡುಕುತ್ತಿದ್ದರು. ಆದರೆ ಹಿಂದೆ ನಡೆದ ಅನೇಕ ಎನ್ಕೌಂಟರ್ಗಳಲ್ಲಿ ಆತ ತಪ್ಪಿಸಿಕೊಂಡಿದ್ದನು. ಆದರೆ ಸೋಮವಾರ ಸಂಜೆ ವಿಕ್ರಂ ಗೌಡ (Vikram Gowda) ಬರುವ ಮಾರ್ಗದ ಬಗ್ಗೆ ನಿಖರ ಮಾಹಿತಿ ಪೊಲೀಸರಿಗಿತ್ತು. ಆದರೆ ಪೊಲೀಸರ ಮೇಲೆಯೇ ಆತ ಶೂಟ್ ಮಾಡಿದ್ದ. ಪ್ರತಿದಾಳಿ ನಡೆಸಿ ಪೊಲೀಸರು ಆತನನ್ನು ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದ್ದಾರೆ. ಇದೇ ವೇಳೆ ಆತನ ಜೊತೆಯಿದ್ದ ಮೂವರು ಓಡಿ ಹೋಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ರಾಜ್ಯದಲ್ಲಿ ನಕ್ಸಲ್ ಸಂಘಟನೆಯ ಶಕ್ತಿ ಕ್ಷೀಣಿಸಿತು ಅಂದುಕೊಂಡಿದ್ದೆವು. ಆದರೆ ಕಳೆದ ವಾರ ರಾಜು ಮತ್ತು ಲತಾ ಎಂಬ ನಕ್ಸಲರು (Naxals) ಪತ್ತೆ ಆಗಿದ್ದರು. ಹೀಗಾಗಿ ಕಳೆದ ಒಂದು ವಾರದಿಂದ ಮಲೆನಾಡು ಭಾಗದಲ್ಲಿ ಕೂಂಬಿಂಗ್ ನಡೆಯುತ್ತಿತ್ತು. ಆಗ ವಿಕ್ರಂ ಗೌಡ (Vikram Gowda) ಬರುವ ಮಾಹಿತಿ ಸಿಕ್ಕಿತ್ತು ಎಂದು ತಿಳಿಸಿದ್ದಾರೆ.