Bengaluru: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ವಿಪಕ್ಷಗಳು ರಚನೆ ಮಾಡಿಕೊಂಡಿರುವ ಮೈತ್ರಿಕೂಟಕ್ಕೆ I.N.D.I.A ಅಂದರೆ, (NDA VS INDIA)

Indian National Developmental Inclusive Alliance ಎಂದು ಹೆಸರಿಡಲಾಗಿದೆ. ಈ ಹಿಂದೆ ಇದ್ದ UPA ಹೆಸರಿಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಇದೀಗ I.N.D.I.A ಎಂದು ಹೆಸರಿಡಲಾಗಿದೆ.
ಬೆಂಗಳೂರಿನಲ್ಲಿ ನಿನ್ನೆ ನಡೆದ Indian National Developmental Inclusive Alliance ಸಭೆಯಲ್ಲಿ ದೇಶದ 26 ಪ್ರಾದೇಶಿಕ ಪಕ್ಷಗಳ ನಾಯಕರು ಭಾಗಿಯಾಗಿದ್ದರು. 2014 ಮತ್ತು 2019ರ
ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿ ಸತತ ಎರಡು ಬಾರಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿಯನ್ನು ಸೋಲಿಸುವ ನಿಟ್ಟಿನಲ್ಲಿ ವಿಪಕ್ಷಗಳೆಲ್ಲಾ ಈ ಬಾರಿ ಒಟ್ಟಾಗಿವೆ.
ಆದರೆ ವಿಪಕ್ಷಗಳು ಮುಂದೆ ಐದು ಪ್ರಮುಖ ಸವಾಲುಗಳು (NDA VS INDIA) ಎದುರಾಗಿವೆ.
ಇದನ್ನು ಓದಿ: ಚಂದ್ರಯಾನ ಬೆನ್ನಲ್ಲೇ ಗಗನಯಾನಕ್ಕೆ ಮಾನವ ಜಿಗಿತಕ್ಕೆ ಇಸ್ರೋ ಸಜ್ಜು
ಪ್ರಧಾನಿ ಅಭ್ಯರ್ಥಿ ಘೋಷಣೆ : Indian National Developmental Inclusive Alliance ತನ್ನ ಪ್ರಧಾನಿ ಅಭ್ಯರ್ಥಿಯನ್ನು ಘೋಷಣೆ ಮಾಡದೇ, ಚುನಾವಣೆಗೆ ಹೋದರೆ ಹಿನ್ನಡೆ ಉಂಟಾಗುವ
ಸಾಧ್ಯತೆಯೇ ಹೆಚ್ಚು. ಪ್ರಧಾನಿ ಅಭ್ಯರ್ಥಿ ಘೋಷಣೆ ಮಾಡಲು ಮುಂದಾದರೆ, ಮೈತ್ರಿಕೂಟದಲ್ಲಿರುವ ಬಹುತೇಕ ನಾಯಕರು ನಾನೇ ಪ್ರಧಾನಿ ಅಭ್ಯರ್ಥಿ ಎನ್ನುವುದರಿಂದ ಭಿನ್ನಾಭಿಪ್ರಾಯ ಉಂಟಾಗುತ್ತದೆ.
ರಾಹುಲ್ ಗಾಂಧಿ, ನಿತೀಶ್ ಕುಮಾರ್, ಮಮತಾ ಬ್ಯಾನರ್ಜಿ, ಶರದ್ ಪವಾರ್, ಅರವಿಂದ್ ಕೇಜ್ರಿವಾಲ್ ಹೀಗೆ ಅನೇಕ ಹೆಸರುಗಳು ಚಾಲ್ತಿಯಲ್ಲಿವೆ. ಒಮ್ಮತದ ಅಭ್ಯರ್ಥಿಯನ್ನು
ಘೋಷಣೆ ಮಾಡುವ ಸವಾಲು I.N.D.I.A ಮುಂದಿದೆ.
ಕಾಂಗ್ರೆಸ್ ನಿಂದ ನಾಯಕತ್ವ ತ್ಯಾಗ : I.N.D.I.A ಮೈತ್ರಿಕೂಟದಲ್ಲಿ ಎರಡು ಗುಂಪುಗಳಿವೆ. ಕಾಂಗ್ರೆಸ್ ನಾಯಕತ್ವವನ್ನು ಒಪ್ಪುವ ಗುಂಪು ಇನ್ನೊಂದು ಕಾಂಗ್ರೆಸ್ ನಾಯಕತ್ವ ಒಪ್ಪದೇ ಇರುವ
ಗುಂಪು ಇವೆ. ಎರಡನೇ ಗುಂಪಿನಲ್ಲಿ ಆರ್ಎಲ್ಡಿ, ಕೇರಳ ಕಾಂಗ್ರೆಸ್, ಎನ್ಸಿ ಟಿಎಂಸಿ, ಎಎಪಿ, ಎಸ್ಪಿ, , ಪಿಡಿಪಿ ಪಕ್ಷಗಳಿವೆ. ಹೀಗಾಗಿ ಈ ಪಕ್ಷಗಳಿಗಾಗಿ ಕಾಂಗ್ರೆಸ್ ತನ್ನ ನಾಯಕತ್ವವನ್ನು ತ್ಯಾಗ ಮಾಡಬೇಕಿದೆ.
ಹೊಂದಾಣಿಕೆ ಸಮಸ್ಯೆ : ಈ ಮೈತ್ರಿಕೂಟದ ಮುಖ್ಯ ಸಮಸ್ಯೆ ಎಂದರೆ ಹೊಂದಾಣಿಕೆ. ಅನೇಕ ರಾಜ್ಯಗಳಲ್ಲಿ ಈ ಮೈತ್ರಿದಲ್ಲಿರುವ ಪಕ್ಷಗಳೇ ಪರಸ್ಪರ ಎದುರಾಳಿಗಳು. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಸಿಪಿಐಎಂ,
ಕಾಂಗ್ರೆಸ್ ನಡುವೆ ಹೋರಾಟವಿದೆ. ಕೇರಳದಲ್ಲಿ ಕಾಂಗ್ರೆಸ್, ಸಿಪಿಐಎಂ ಪಕ್ಷಗಳೇ ಶತ್ರುಗಳು. ಪಂಜಾಬ್, ದೆಹಲಿಯಲ್ಲಿ ಎಎಪಿ, ಕಾಂಗ್ರೆಸ್ ನಡುವೆ ಭಿನ್ನಾಭಿಪ್ರಾಯಗಳಿವೆ. ಹೀಗಾಗಿ ಹೊಂದಾಣಿಕೆ
ಮಾಡಿಕೊಳ್ಳುವುದೇ ಈ ಮೈತ್ರಿಕೂಟದ ಮುಂದಿರುವ ದೊಡ್ಡ ಸವಾಲು.

ಸೀಟು ಹಂಚಿಕೆ ಸಮಸ್ಯೆ : ಈ ಮೈತ್ರಿಕೂಟದಲ್ಲಿರುವ ಪ್ರಾದೇಶಿಕ ಪಕ್ಷಗಳು ತಮ್ಮ ರಾಜ್ಯಗಳಲ್ಲಿ ಸೀಟು ಹಂಚಿಕೆ ವಿಷಯ ಬಂದಾಗ ಕಾಂಗ್ರೆಸ್, ಕೆಲ ಕ್ಷೇತ್ರಗಳನ್ನು ತಮಗೆ ಬಿಟ್ಟು ಕೊಡಬೇಕೆಂದು
ಷರತ್ತು ಹಾಕಿವೆ. ಹೀಗಾಗಿ ದೆಹಲಿ, ಪಂಜಾಬ್, ಬಿಹಾರ, ಯುಪಿ, ಮಹಾರಾಷ್ಟ್ರದಲ್ಲಿ ಸೀಟು ಹಂಚಿಕೆ ಸಮಸ್ಯೆಯಾಗುವ ಸಾಧ್ಯತೆಯಿದೆ.
ಸಾಮೂಹಿಕ ಹೋರಾಟ : ಈ ಮೈತ್ರಿಕೂಟದಲ್ಲಿರುವ ಪಕ್ಷಗಳು ಸಿದ್ದಾಂತಿಕವಾಗಿಯೂ ಭಿನ್ನಾಭಿಪ್ರಾಯಗಳನ್ನು ಹೊಂದಿವೆ. ಸಮಾನ ನಾಗರಿಕ ಸಂಹಿತೆ ಪ್ರಸ್ತಾವನೆ ಬಂದಾಗ, ಎಎಪಿ ಪಕ್ಷ ಅದನ್ನು
ಬೆಂಬಲಿಸಿದರೆ, ಕಾಂಗ್ರೆಸ್ ವಿರೋಧಿಸುತ್ತಿದೆ. ಹೀಗಾಗಿ ಸಮಾನ ಸಿದ್ದಾಂತಿಕ ನಿಲುವುಗಳನ್ನು ರೂಪಿಸಿಕೊಳ್ಳುವುದು ಕೂಡಾ ಈ ಮೈತ್ರಿಕೂಟದ ಮುಂದಿರುವ ದೊಡ್ಡ ಸವಾಲು.