- ಶಿಕ್ಷಣದ ಗುಣಮಟ್ಟ ಸುಧಾರಿಸಲು ಹೆಚ್ಚಿನ ತರಬೇತಿ ಅಗತ್ಯ (Necessary to conduct tests for teachers)
- ಶಿಕ್ಷಕರು ವಿಭಿನ್ನ ಕಲಿಕಾ ತಂತ್ರಜ್ಞಾನದೊಂದಿಗೆ ಪರೀಕ್ಷೆಗೆ ಹಾಜರಾಗಬೇಕು
- ಶಿಕ್ಷಕರು ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರ ಪಾತ್ರ ಪ್ರಮುಖ
Bengaluru: ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ (Government schools) ಓದುತ್ತಿರುವ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಸಭಾ ಸದಸ್ಯೆಯೂ ಆಗಿರುವ, ಇನ್ಫೋಸಿಸ್ ಸುಧಾ ಮೂರ್ತಿ (Infosys Sudha Murthy) ಶಿಕ್ಷಣ ಹಾಗೂ ಶಿಕ್ಷಕರ ಗುಣಮಟ್ಟ ಹೆಚ್ಚಿಸುವ ಬಗ್ಗೆ ಸಲಹೆಯೊಂದನ್ನು ನೀಡಿದ್ದಾರೆ.
ಶಿಕ್ಷಕರಿಗಾಗಿ ಹೊಸ ತರಬೇತಿ ಕೋರ್ಸ್ಗಳನ್ನು (Training courses) ನಡೆಸುವುದು ಮತ್ತು ಪ್ರತಿ ಮೂರು ವರ್ಷಗಳಿಗೊಮ್ಮೆ ಶಿಕ್ಷಕರ ಪರೀಕ್ಷೆಗಳನ್ನು (Teacher exams) ನಡೆಸುವುದು ಮತ್ತು ಪ್ರಾಥಮಿಕ ಹಂತದಲ್ಲಿ ಬೋಧಿಸುವವರಿಗೆ ಇನ್ನಷ್ಟು ತರಬೇತಿಗಳನ್ನು ನೀಡಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.
ಶಿಕ್ಷಣ ಸಚಿವಾಲಯದ (Ministry of Education) ಕಾರ್ಯವೈಖರಿಯ ಕುರಿತು ನಡೆದ ಚರ್ಚೆಯ ಸಂದರ್ಭದಲ್ಲಿ ಅವರು ಈ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ. ಪ್ರತಿ ವಿದ್ಯಾರ್ಥಿಯ ಬಾಳಿನಲ್ಲೂ ಶಿಕ್ಷಕರು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಾರೆ ಮತ್ತು ಉತ್ತಮ ಶಿಕ್ಷಕರಿಲ್ಲದಿದ್ದರೆ ಶಿಕ್ಷಣ ವ್ಯವಸ್ಥೆಯು (Education system) ಸುಧಾರಿಸುವುದಿಲ್ಲ ಎಂದು ಹೇಳಿದ್ದಾರೆ.

ಶಿಕ್ಷಕರು ಒಮ್ಮೆ ಬಿಎ ಅಥವಾ ಎಂಎ, ಅಥವಾ ಕಾಲೇಜು ಮಟ್ಟದಲ್ಲಿ ಪಿಎಚ್ಡಿ ಪರೀಕ್ಷೆಯಲ್ಲಿ (PhD exam) ಉತ್ತೀರ್ಣರಾಗಿ ಅಧ್ಯಾಪನ ವೃತ್ತಿಗೆ ಬರುತ್ತಾರೆ. ನಂತರ ಅವರು ನಿವೃತ್ತರಾಗುವವರೆಗೆ ಯಾವುದೇ ಪರೀಕ್ಷೆಗಳಿಲ್ಲ. ಈ ರೀತಿಯಾಗಬಾರದು. ಪ್ರತಿ ಮೂರು ವರ್ಷಗಳಿಗೊಮ್ಮೆ ಅವರ ಜ್ಞಾನ ವೃದ್ಧಿಸಲು ಪರೀಕ್ಷೆಗಳು ನಡೆಯಬೇಕು. ಇಲ್ಲದಿದ್ದರೆ ಶಿಕ್ಷಣ ಕ್ಷೇತ್ರ ಹಾಗೂ ಶಿಕ್ಷಕರು ಸುಧಾರಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಉತ್ತಮ ಶಾಲಾ ವಾತಾವರಣ, ಉತ್ತಮ ಸೌಕರ್ಯ ಎಲ್ಲವನ್ನೂ ನೀವು ಕೊಡಬಹುದು, ಆದರೆ ಆ ಶಾಲೆಯಲ್ಲಿ ಉತ್ತಮ ಶಿಕ್ಷಕರಿಲ್ಲ ಎಂದರೆ ಏನೂ ಪ್ರಯೋಜನವಿಲ್ಲ. ಶಿಕ್ಷಕರು ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಇದರಲ್ಲಿ ಕೇವಲ ಅವರ ವಿದ್ಯಾರ್ಹತೆ (Educational Qualification) ಮಾತ್ರ ಮುಖ್ಯವಾಗುವುದಿಲ್ಲ.
ಇದನ್ನೂ ಓದಿ: ಕೇಂದ್ರ ರಾಷ್ಟ್ರೀಯ ಶಿಕ್ಷಣ ನೀತಿಗೆ ರಾಜ್ಯಸಭೆ ಸದಸ್ಯೆ ಸುಧಾ ಮೂರ್ತಿ ಬೆಂಬಲ: ತಮಿಳುನಾಡು, ತೆಲಂಗಾಣ, ಕರ್ನಾಟಕ ಸರ್ಕಾರ ವಿರೋಧ
ಬೋಧನಾ ವಿಧಾನ, ಮನವೊಲಿಸುವುದು, ಸ್ನೇಹಪರರಾಗುವುದು, ಕೆಲವೊಮ್ಮೆ ಕಟ್ಟುನಿಟ್ಟಾಗಿರುವುದು ಈ ಎಲ್ಲವೂ ಮುಖ್ಯವಾಗುತ್ತದೆ. ಶಿಕ್ಷಣ ವೃತ್ತಿಯೂ ಕೂಡ ಒಂದು ಕಲೆ ಎಂದಿದ್ದಾರೆ. ಬೇರೆಡೆಗಳಲ್ಲಿ ಶಿಕ್ಷಕರಿಗಾಗಿ ಹಲವಾರು ತರಬೇತಿಗಳು ನಡೆಯುತ್ತವೆ. ಆದರೆ ತರಬೇತಿಗಳಿಗೆ ತಕ್ಕಂತೆ ಪರೀಕ್ಷೆಗಳು ನಡೆಯುವುದಿಲ್ಲ.
ಪ್ರತಿ ಮೂರು ವರ್ಷಗಳಿಗೊಮ್ಮೆ, ಶಿಕ್ಷಕರು ವಿಭಿನ್ನ ಕಲಿಕಾ ತಂತ್ರಜ್ಞಾನದೊಂದಿಗೆ (Learning technology) ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. ಏಕೆಂದರೆ ತಂತ್ರಜ್ಞಾನ ಬದಲಾಗುತ್ತದೆ. ತಾಯಿಯ ಪ್ರೀತಿಯನ್ನು ಹೊರತುಪಡಿಸಿ ಜೀವನದಲ್ಲಿ ಯಾವುದೂ ಉಚಿತವಲ್ಲ. ಎಲ್ಲದಕ್ಕೂ ಒಂದು ಬೆಲೆ ಇದೆ.
ನೀವು ಉತ್ತಮ ಶಿಕ್ಷಕರಾಗಲು ಬಯಸಿದರೆ, ಅದಕ್ಕೆ ಒಂದು ಬೆಲೆ ಇದೆ. ಬೆಲೆ ಹಣವಲ್ಲ, (Necessary to conduct tests for teachers) ಆದರೆ ಶಿಕ್ಷಕರಿಗೆ ಉತ್ತಮ ತರಬೇತಿ ಮತ್ತು ಪರೀಕ್ಷೆ ಎಂದು ಸುಧಾಮೂರ್ತಿ ಹೇಳಿದ್ದಾರೆ.