- 90.23 ದೂರ ಜಾವೆಲಿನ್ ಎಸೆದ ನೀರಜ್ ಚೋಪ್ರಾ
- ಜಾವೆಲಿನ್ ಕ್ರೀಡಾಕೂಟದಲ್ಲಿ ಅತೀ ದೂರ ಭರ್ಜಿ ಎಸೆದ ಭಾರತೀಯ ಎಂಬ ದಾಖಲೆ
- ದ್ವಿತೀಯ ಸ್ಥಾನ ಅಲಂಕರಿಸಿದ ನೀರಜ್ ಚೋಪ್ರಾ
Doha: ಡೈಮಂಡ್ ಲೀಗ್ (Diamond League) -2025 ನಲ್ಲಿ ನೀರಜ್ ಚೋಪ್ರಾ ಅವರು 90 (Neeraj Chopra made history in jawline) ಮೀಟರ್‌ಗಿಂತ ಹೆಚ್ಚು ದೂರ ಜಾವೆಲಿನ್ (Javelin) ಎಸೆದು ಹೊಸ ಸಾಧನೆ ಮಾಡಿದ್ದಾರೆ.2 ಬಾರಿ ಒಲಿಂಪಿಕ್ ಪದಕ (Olympic medal) ವಿಜೇತ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಅವರು ಹೊಸ ದಾಖಲೆಯೊಂದನ್ನು ಬರೆದಿದ್ದು, ತಮ್ಮ ವೃತ್ತಿ ಬದುಕಿನಲ್ಲಿ (Professional life) ಮೊದಲ ಬಾರಿಗೆ 90 ಮೀ.
ದೂರ ದಾಟಿದ್ದಾರೆ.ಶುಕ್ರವಾರ ರಾತ್ರಿ ಇಲ್ಲಿ ನಡೆದ ಡೈಮಂಡ್ ಲೀಗ್‌ನಲ್ಲಿ ನೀರಜ್ (Neeraj in the Diamond League) , ತಮ್ಮ 3ನೇ ಯತ್ನದಲ್ಲಿ 90.23 ಮೀ. ದೂರಕ್ಕೆ ಜಾವೆಲಿನ್ ಎಸೆದು, ರಾಷ್ಟ್ರೀಯ ದಾಖಲೆ (National record) ಬರೆದಿದ್ದಾರೆ.ನೀರಜ್ ಬಹಳ ಸಮಯದಿಂದ 90 ಮೀಟರ್ ಎಸೆಯಲು ಪ್ರಯತ್ನಿಸುತ್ತಿದ್ದರು. ಆದರೆ, ಯಶ ಕಂಡಿರಲಿಲ್ಲ. ದೋಹಾ ಡೈಮಂಡ್ ಲೀಗ್‌ನಲ್ಲಿ ನೀರಜ್ ಅವರ ಈ ಕನಸು ನನಸಾಗಿದೆ. ಇದು ನೀರಜ್ (Neeraj) ಅವರ ವೃತ್ತಿಜೀವನದ ಅತ್ಯುತ್ತಮ ಸಾಧನೆಯಾಗಿದೆ.
ದೋಹಾದಲ್ಲಿ ನಡೆದ ಡೈಮಂಡ್ ಲೀಗ್‌ನಲ್ಲಿ ಜರ್ಮನಿಯ (Germany in the league) ಜೂಲಿಯನ್ ವೆಬರ್ ಪ್ರಥಮ ಸ್ಥಾನ ಪಡೆದರು. ಐದನೇ ಪ್ರಯತ್ನದಲ್ಲಿ ಅವರು 91.06 ಮೀ ಎಸೆತವನ್ನು ಎಸೆದರು. ನೀರಜ್ ಈ ಟೂರ್ನಿಯಲ್ಲಿ ಅಮೋಘ (Tournament) ಆರಂಭವನ್ನು ಪಡೆದರು.

ಅಲ್ಲದೆ, ತಮ್ಮ ಮೊದಲ ಪ್ರಯತ್ನದಲ್ಲೇ 88.44 ಮೀಟರ್ ದೂರ ಎಸೆದು ಮಿಂಚಿದರು. ಒಲಿಂಪಿಕ್ಸ್‌ನಲ್ಲಿ (Olympics) ಡಬಲ್ ಪದಕ ಗೆದ್ದಿರುವ ನೀರಜ್ ಚೋಪ್ರಾ ಅವರು ಜಾವೆಲಿನ್ ಎಸೆತದಲ್ಲಿ 90 ಮೀಟರ್‌ಗೂ ದೂರ ಎಸೆಯುವ ಆಸೆಯನ್ನು ಹೊಂದಿದ್ದರು. ಆದರೆ ಇದರು ಸಾಕಾರವಾಗಿರಲಿಲ್ಲ (Realized) . ಶುಕ್ರವಾರ ಈ ಆಸೆ ಕೈ ಗೂಡುತ್ತಿದ್ದಂತೆ ಈ ಸಾಧನೆ ಮಾಡಿದ ಏಷ್ಯಾದ ಮೂರನೇ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಇದಕ್ಕೂ ಮೊದಲು ಪಾಕಿಸ್ತಾನದ ಅರ್ಷದ್ ನದೀಮ್ 92.97 ಮತ್ತು ಚೈನೀಸ್ ತೈಪೆಯ (Chinese Taipei) ಚಾವೊ ಸನ್ ಚೆಂಗ್ 91.36 ಈ ಸಾಧೆನ ಮಾಡಿದ್ದರು. ಈಗ ಈ ಸಾಲಿಗೆ ನೀರಜ್ ಚೋಪ್ರಾ (Neeraj Chopra) ಸೇರಿಕೊಂಡಿದ್ದಾರೆ. ಇನ್ನು ನೀರಜ್ ಚೋಪ್ರಾ 90 ಮೀಟರ್ ಮಾರ್ಕ್ ದಾಟಿದ ವಿಶ್ವದ 25ನೇ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ನೀರಜ್ ಚೋಪ್ರಾ ಈ ಲೀಗ್‌ನಲ್ಲಿ 90 ಮೀಟರ್ (90 meters in the league) ಮಾರ್ಕ್ ದಾಟುವಲ್ಲಿ ಸಫಲರಾದರೂ ಸಹ ಬಂಗಾರದ ಸಾಧನೆಯನ್ನು ಮಿಸ್ ಮಾಡಿಕೊಂಡಿದ್ದಾರೆ. ನೀರಜ್ ಚೋಪ್ರಾ ಡೈಮಂಡ್ ಲೀಗ್‌ನಲ್ಲಿ ಬೆಳ್ಳಿ ಸಾಧನೆ ಮಾಡಿದ್ದಾರೆ. ಜರ್ಮನಿಯ ಜೂಲಿಯನ್ ವೆಬರ್ 91.06 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಅಮೋಘ ಸಾಧನೆ (great achievement) ಮಾಡಿದರು.
ಈ ಮೂಲಕ ಇವರು ಬಂಗಾರ ಪಡೆದಿದ್ದಾರೆ.ಅದರ ಬೆನ್ನಲ್ಲೇ ನೀರಜ್ ಚೋಪ್ರಾ 90 ಮೀಟರ್ ದೂರ ಎಸೆದು ದ್ವಿತೀಯ ಸ್ಥಾನ (second place) ಅಲಂಕರಿಸಿದರು. ಹಾಗಾಗಿ ಬೆಳ್ಳಿ ಪದಕ ಪಡೆದರು.ಇನ್ನು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮತ್ತೊಬ್ಬ ಭಾರತೀಯ ಜಾವೆಲಿನ್ ಥ್ರೋ ಸ್ಪರ್ಧಿ ಕಿಶೋರ್ 78.60 ಮೀಟರ್ ದೂರ ಜಾವೆಲಿನ್ (Javelin) ಎಸೆದರು.
ಇದನ್ನು ಓದಿ : http://ಪೂಜೆಗಷ್ಟೇ ಅಲ್ಲ, ಆರೋಗ್ಯಕ್ಕೂ ಒಳ್ಳೆಯದು ಕರ್ಪೂರ
ಡೈಮಂಡ್ ಲೀಗ್ ಕೂಟದಲ್ಲಿ ವೈಯಕ್ತಿಕ ಶ್ರೇಷ್ಠ (Personal best) ಸಾಧನೆ ಮಾಡಿರುವುದಕ್ಕೆ ನೀರಜ್ ಚೋಪ್ರಾ ಅವರಿಗೆ (Neeraj Chopra made history in jawline) ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ