Neeraj Chopra, the golden boy who won silver in the Olympics!
Paris : ಭಾರತಕ್ಕೆ ಭರ್ಜರಿ ಸುದ್ದಿ ಸಿಕ್ಕಿದೆ, ಒಲಿಂಪಿಕ್ಸ್ ಅಖಾಡದಲ್ಲಿ ಭಾರತ ಮತ್ತೊಮ್ಮೆ ಜಗತ್ತಿನ ಗಮನ ಸೆಳೆದಿದೆ. ಅದ್ರಲ್ಲೂ ಜಾವೆಲಿನ್ ಥ್ರೋ ವಿಭಾಗದಲ್ಲಿ ಶತಕೋಟಿ ಭಾರತೀಯರ ನಿರೀಕ್ಷೆ ಕಾಪಾಡಿಕೊಂಡು ಬಂದಿದ್ದ 'ಚಿನ್ನ'ದ ಹುಡುಗ ನೀರಜ್ ಚೋಪ್ರಾ ಭರ್ಜರಿಯಾಗಿ ಬೆಳ್ಳಿಯ ಪದಕ ಗೆದ್ದಿದ್ದಾರೆ. ಆದರೆ ಕೊನೆಯ ಹಂತದಲ್ಲಿ ಕೇವಲ 3 ಮೀಟರ್ ಅಂತರದಲ್ಲಿ ಚಿನ್ನದ ಪದಕ ಮಿಸ್ ಮಾಡಿಕೊಂಡಿದ್ದಾರೆ. ಹಾಗಾಗಿ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ 5ನೇ ಪದಕ ದಕ್ಕಿದೆ.
ಈ ಹಿಂದೆ ಟೋಕಿಯೋ ಒಲಿಂಪಿಕ್ಸ್ ಅಖಾಡದಲ್ಲಿ ಭಾರತಕ್ಕಾಗಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಇದೀಗ ಪ್ಯಾರಿಸ್ ಒಲಿಂಪಿಕ್ಸ್-2024 ಕ್ರೀಡಾಕೂಟದಲ್ಲೂ ದೊಡ್ಡ ಸಾಧನೆ ಮಾಡಿದ್ದಾರೆ. ಚಿನ್ನದ ಮೇಲೆ ಗುರಿ ಇಟ್ಟಿದ್ದ ಭಾರತದ ಹೆಮ್ಮೆಯ ಪುತ್ರ ನೀರಜ್ ಚೋಪ್ರಾ, ಕೆಲವೇ ಕೆಲವು ಮೀಟರ್ ಅಂತರದಲ್ಲಿ ಚಿನ್ನದ ಪದಕ ಮಿಸ್ ಮಾಡಿಕೊಂಡರು.
Neeraj Chopra Olympics 2024 highlights Kannada
ಆದರೂ ನೀರಜ್ ಚೋಪ್ರಾ ಭರ್ಜರಿಯಾಗಿ ಬೆಳ್ಳಿ ಪದಕ ಗೆದ್ದು ಬೀಗಿದ್ದಾರೆ. ಬೆಳ್ಳಿ ಪದಕವನ್ನು ತನ್ನದಾಗಿಸಿಕೊಳ್ಳುವುದರೊಂದಿಗೆ ನೀರಜ್, ಒಲಿಂಪಿಕ್ಸ್ನಲ್ಲಿ ಸತತ ಎರಡು ಪದಕ ಗೆದ್ದ ಭಾರತದ ನಾಲ್ಕನೇ ಅಥ್ಲೀಟ್ ಎನಿಸಿಕೊಂಡಿದ್ದಾರೆ. ಅಷ್ಟಕ್ಕೂ ನೀರಜ್ ಚೋಪ್ರಾ ಅವರ ಗೆಲುವು ಸುಲಭವಾಗಿ ಇರಲಿಲ್ಲ, ಯಾಕಂದ್ರೆ ಮೊದಲ ಎಸೆತದಲ್ಲಿ ಫೌಲ್ ಮಾಡಿಕೊಂಡ ನೀರಜ್ ಚೋಪ್ರಾ ಬೇಸರಗೊಂಡರು.
ಮೊದಲ ಎಸೆತದಲ್ಲೇ ಅವರು 86 ಮೀಟರ್ಗಿಂತ ಹೆಚ್ಚು ದೂರ ಎಸೆದಿದ್ದರೂ ಅದು ಫೌಲ್ ಆಗಿತ್ತು. ಆ ನಂತರ ಕಂಬ್ಯಾಕ್ ಮಾಡಿದ ನೀರಜ್ ಚೋಪ್ರಾ, ಬರೋಬ್ಬರಿ 89.45 ಮೀಟರ್ ದೂರ ಎಸೆದರೆ. ಇಷ್ಟೊತ್ತಿಗೆ, ಪಾಕಿಸ್ತಾನದ ಅರ್ಷದ್ ನದೀಮ್ 92.97 ಮೀಟರ್ ದೂರ ಎಸೆದು ಚಿನ್ನದ ಪದಕ ಗ್ಯಾರಂಟಿ ಮಾಡಿಕೊಂಡಿದ್ದರು. ಈ ಮೂಲಕ ಭಾರತದ ನೀರಜ್ ಚೋಪ್ರಾ ಖುಷಿ ಖುಷಿಯಾಗಿ ಬೆಳ್ಳಿಯ ಪದಕಕ್ಕೆ ಮುತ್ತಿಟ್ಟಿದ್ದಾರೆ
Paris : India has got great news, India has once again attracted the attention of the world in the Olympics arena. In the javelin throw category, the 'golden' boy Neeraj Chopra, who had kept the hopes of billions of Indians alive, won the silver medal. But in the last stage, he missed the gold medal by just 3 meters. So India got 5th medal in Paris Olympics.
Neeraj Chopra, who earlier won the gold medal for India at the Tokyo Olympics, has now achieved great success in the Paris Olympics-2024. India's proud son Neeraj Chopra, who was aiming for gold, missed the gold medal by just a few meters. However, Neeraj Chopra won the silver medal brilliantly. With the silver medal, Neeraj became the fourth Indian athlete to win two consecutive medals at the Olympics.
However, Neeraj Chopra's victory was not easy, as Neeraj Chopra fouled out in the first ball. He threw the first ball more than 86 meters but it was a foul. After that, Neeraj Chopra, who made a comeback, threw a distance of 89.45 meters. By now, Pakistan's Arshad Nadeem had guaranteed a gold medal by throwing a distance of 92.97 meters. With this, India's Neeraj Chopra happily kissed the silver medal