Health News: If you consume sugary drinks, cancer and liver problems are guaranteed.
Dont Drink Sugary Drinks: ನಾವೆಲ್ಲರೂ ದಿನನಿತ್ಯ ಚಹಾ, ಕಾಫಿ, ಸಿಹಿತಿಂಡಿ (Tea, Coffee, Sweets) ಸೇರಿದಂತೆ ಸಕ್ಕರೆಯಂಶವಿರುವ ಪದಾರ್ಥಗಳು ಹಾಗೂ ಪಾನೀಯಗಳನ್ನೆಲ್ಲ ಹೆಚ್ಚು ಸೇವಿಸುತ್ತೇವೆ. ಆದರೆ ಈ ರೀತಿ ಸಕ್ಕರೆ ಪಾನೀಯಗಳನ್ನು ಸೇವಿಸಿದಾಗ ನಮ್ಮ ದೇಹದಲ್ಲಿ ಏನೆಲ್ಲಾ ಬದಲಾವಣೆಗಳಾಗುವುದಲ್ಲದೆ, ನಾನಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ನಾವು ಸೇವಿಸುವ ಕೆಲವು ಆಹಾರಗಳಿಂದ ಆರೋಗ್ಯಕ್ಕೆ ಅಡ್ಡಪರಿಣಾಮಗಳು ಹೆಚ್ಚಿದೆ ಎಂದು ತಿಳಿದಿದ್ದರೂ ಸೇವಿಸುವ ಪ್ರಮಾಣವಂತೂ ಕಡಿಮೆ ಮಾಡಲ್ಲ. ಇಂದಿನ ಜೀವನಶೈಲಿ ಹಾಗೂ ಆಹಾರ ಕ್ರಮದಿಂದಾಗಿ ಬೇಡದ ಆರೋಗ್ಯ ಸಮಸ್ಯೆಗಳನ್ನು (Health Problem) ಮೈ ಮೇಲೆ ಎಳೆದುಕೊಳ್ಳುವವರೇ ಹೆಚ್ಚಾಗಿರುತ್ತಾರೆ.
ಸಕ್ಕರೆ ಪಾನೀಯಗಳು ಆರೋಗ್ಯಕರವಾಗಿ ಹಿತಕರವಲ್ಲ. ಪ್ಯಾಕ್ ಮಾಡಿದ ಹಣ್ಣಿನ ರಸವಾಗಲಿ ಅಥವಾ ತಂಪು ಪಾನೀಯಗಳನ್ನು ಮಿತವಾಗಿ ಸೇವಿಸುವುದು ಉತ್ತಮ. ಸಕ್ಕರೆ ಪಾನೀಯಗಳು ನಮ್ಮ ದೇಹಕ್ಕೆ ಉತ್ತಮವಲ್ಲ ಎಂದು ನಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿದ್ದರೂ ಇದನ್ನು ನಿರ್ಲಕ್ಷಿಸುತ್ತೇವೆ.
ಸಕ್ಕರೆಯಂಶಯುಕ್ತ ಪಾನೀಯಗಳ ಸೇವನೆಯಿಂದ ಕ್ಯಾನ್ಸರ್, ಲಿವರ್ (Cancer, Liver Damage) ಹಾನಿಗೊಳಗಾಗುವ ಸಾಧ್ಯತೆ ಹೆಚ್ಚಾಗಿದ್ದು, ಚರ್ಮ ಸುಕ್ಕುಗಟ್ಟುವಿಕೆ ಮತ್ತು ಡ್ರೈ ಸ್ಕಿನ್ (Dry Skin) ಸಮಸ್ಯೆಗಳು ಕಂಡು ಬರುತ್ತದೆ. ದೇಹದ ತೂಕ ಹೆಚ್ಚಳ ಹಾಗೂ ಶಕ್ತಿ ಸಾಮರ್ಥ್ಯ ಕುಂಠಿತವಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಅದಲ್ಲದೇ ಹಣ್ಣುಗಳಲ್ಲಿ ಫೈಬರ್ (Fiber), ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳು ಅಧಿಕವಾಗಿದ್ದು, ಇದನ್ನು ಆಹಾರದಲ್ಲಿ ಅತ್ಯಮೂಲ್ಯ ಭಾಗವಾಗಿ ಬಳಸಬಹುದು. ಆದರೆ ಪ್ಯಾಕ್ ಮಾಡಿದ ಹಣ್ಣಿನ ರಸದ ಅತಿಯಾದ ಸೇವನೆಯೂ ಒಳ್ಳೆಯದಲ್ಲ ಎಂದು ಹೇಳಿದ್ದಾರೆ. ಕೊನೆಯಲ್ಲಿ, ನಿಮ್ಮ ಅಗತ್ಯತೆಗಳಿಗೆ ಅನುಗುಣವಾಗಿ ಆರೋಗ್ಯಕ್ಕೆ ಉತ್ತಮವಾದ ಆಹಾರ ಕ್ರಮಗಳನ್ನು ಸೇರಿಸಿಕೊಳ್ಳಿ ಎಂದು ತಿಳಿಸಿದ್ದಾರೆ
Negative Effects of Sugary Drinks Health Tips
Dont Drink Sugary Drinks: We all consume a lot of sugary drinks including tea, coffee, sweets on a daily basis. But when we consume sugary drinks in this way, apart from all the changes in our body, we have to face various health problems. Here is the complete information about this.
Even though we know that some of the foods we eat have more health side effects, we do not reduce the amount we consume. Due to today’s lifestyle and diet, there are many people who get unwanted health problems.
Sugary drinks are not healthy. It is better to consume soft drinks, be it packaged fruit juice or soft drinks, in moderation. Most of us know that sugary drinks are not good for our body but ignore it.
By consuming sugary drinks, the possibility of cancer, liver damage is increased, skin wrinkling and dry skin problems are found. Experts have said that body weight increases and energy capacity decreases.
Apart from that, fruits are high in fiber, nutrients and antioxidants, which can be used as a valuable part of food. But excessive consumption of packaged fruit juice is also not good. In the end, it is said that according to your needs, incorporate the best healthy eating habits