ಬೆಂಗಳೂರು, ಆ. 12: ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಗಾಂಧಿ ಕ್ಯಾಂಟಿನ್ ಜೊತೆ ನೆಹರೂ ಹುಕ್ಕಾ ಬಾರ್ ಬೇಕಾದರೂ ತೆರೆಯಲಿ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು
ಸಾಕ್ಷಷ್ಟು ದಿನಗಳಿಂದ ನಡೆಯುತ್ತಿರುವ ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆ ಬಗ್ಗೆ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ನವರು ಇಂದಿರಾ ಕ್ಯಾಂಟಿನ್ ತೆರೆದಿರುವುದು ಅವರ ಖಾತೆಗಳನ್ನು ತುಂಬಿಸಿ ಕೊಳ್ಳುವು ಉದ್ದೇಶದಿಂದಲೇ ಹೊರತು ಇದು ಇಂದಿರಾಗಾಂಧಿ ಅವರ ಮೇಲೆ ಇರುವ ಪ್ರಿತಿಯಿಂದಲ್ಲ. ಅವರಿಗೆ ಇಂದಿರಾ ಗಾಂಧಿ ಮೇಲೆ ಪ್ರೀತಿ ಇದ್ದಿದ್ದರೆ ಇದಕ್ಕೂ ಮೊದಲೆ ಅವರ ಹೆಸರಿನಲ್ಲಿ ಕ್ಯಾಂಟಿನ್ ತೆರೆಯಬೇಕಿತ್ತು ಅದರೆ ಇದೀಗ ಅವರ ಎಟಿಎಂ ತುಂಬಿಸಿಕೊಳ್ಳಲು ಅವರು ಇಂದಿರಾ ಕ್ಯಾಂಟಿನ್ ತೆರೆದಿದ್ದಾರೆ ಎಂದರು. ಅವರು ಅವರ ಪಕ್ಷದ ಕಚೇರಿಯಲ್ಲಿ ಇಂದಿರಾ ಗಾಂಧಿ ಕ್ಯಾಂಟಿನ್ ತೆರೆಯಲಿ ಜೊತೆಗೆ ಹುಕ್ಕಾ ಬಾರ್ ಕೂಡ ತೆರೆಯಲಿ ಅದಕ್ಕೆ ನೆಹರೂ ಹುಕ್ಕಾ ಬಾರ್ ಎಂದು ಹೆಸರಿಡಲಿ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.