Bengaluru : ಈ ತಿಂಗಳಿಂದ ಬೆಂಗಳೂರು-ಮೈಸೂರು (New 25 E-Bus Says KSRTC) ನಡುವೆ ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗೆ ಬಿಡಲು ಕೆ.ಎಸ್.ಆರ್.ಟಿ.ಸಿ ಚಿಂತನೆ ನಡೆಸಿದೆ ಎನ್ನಲಾಗಿದೆ.
ಟೈಮ್ಸ್ ಆಫ್ ಇಂಡಿಯಾದ ವರದಿಯ ಅನುಸಾರ, ಬೆಂಗಳೂರು-ಮೈಸೂರು ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಇದು ಹೆಚ್ಚು ಅನುಕೂಲವಾಗಲಿದೆ.

ಸುಮಾರು 150 ಕಿಮೀ ದೂರ ಪ್ರಯಾಣವನ್ನು ಬೆಳೆಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಈಗಾಗಲೇ ಹೈದರಾಬಾದ್ ಮೂಲದ Olectra Greentech Ltd ಎಂಬ ಸಂಸ್ಥೆಯೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದು ಡಿಸೆಂಬರ್ 15 ರೊಳಗೆ ಮೂಲ ಮಾದರಿಯ ಇ-ಬಸ್ (New 25 E-Bus Says KSRTC) ಅನ್ನು ತಲುಪುವ ನಿರೀಕ್ಷೆಯಿದೆ. ಡಿಸೆಂಬರ್ ತಿಂಗಳ ಅಂತ್ಯದ ವೇಳೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು 25 ಇ-ಬಸ್ಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ ಎನ್ನಲಾಗಿದೆ.
https://fb.watch/h6_9JrDPUG/ PROMO | ಥೂ ಥೂ..ಇದೆಂಥಾ ರಸ್ತೆ ರೀ? ಎಲ್ಲಿದೆ ಚಿನ್ನದ ರಸ್ತೆ?
ಫೆಬ್ರವರಿ ಅಂತ್ಯದ ವೇಳೆಗೆ ಇನ್ನೂ 25 ಇ-ಬಸ್ಗಳನ್ನು ಪಡೆಯುವ ನಿರೀಕ್ಷೆಯಲ್ಲಿದೆ ಎಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ವಿ. ಅನ್ಬು ಕುಮಾರ್ ಟೈಮ್ಸ್ ಆಫ್ ಇಂಡಿಯಾ (Times Of India) ಸುದ್ದಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಕೆಎಸ್‌ಆರ್‌ಟಿಸಿ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕ ಜಿಲ್ಲೆಗಳಾದ ದಾವಣಗೆರೆ, ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ವಿರಾಜಪೇಟೆ ಮತ್ತು ಮಡಿಕೇರಿಗಳಿಗೆ ಸಂಪರ್ಕಿಸಲು ಇ-ಬಸ್‌ಗಳ ಯೋಜನೆ ರೂಪಿಸಲಾಗಿದೆ.

ಈ ಮಧ್ಯೆ ಇ-ಬಸ್‌ಗಳಿಗೆ ವಿಶೇಷವಾಗಿ ಹೆಸರು ಮತ್ತು ಟ್ಯಾಗ್‌ಲೈನ್ ಸೂಚಿಸಲು ರಾಜ್ಯ ಸಾರಿಗೆ ಸಂಸ್ಥೆ ಜನಸಾಮಾನ್ಯರಿಗೆ ಅವಕಾಶ ಕಲ್ಪಿಸಿದೆ. ವಿಶೇಷ ಹೆಸರು ಸೂಚಿಸಿದವರಿಗೆ ನಗದು ಬಹುಮಾನ ನೀಡಲಾಗುವುದು.
ಗ್ರಾಫಿಕ್ ವಿನ್ಯಾಸಕ್ಕೆ 25,000 ನೀಡಲಾಗುವುದು ಮತ್ತು ಹೆಸರು ನೀಡುವುದಕ್ಕೆ ₹ 10,000 ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ : https://vijayatimes.com/chetan-slams-rishab-shetty/