- ಆಟೋ ಚಾಲಕರ ಹಗಲು ದರೋಡೆ ಇನ್ನೂ ನಿಂತಿಲ್ಲ
- ಹೊಸ ದರವನ್ನು ಅಳವಡಿಸಿಕೋಳ್ಳದ ಆಟೋ ಚಾಲಕರು
- ಮೀಟರ್ ಕಂಪನಿಗಳು ರೀ-ಕ್ಯಾಲಿಬ್ರೇಷನ್‌ಗೆ ಅಧಿಕ ದರ ವಸೂಲಿ
- ಹಳೆಯ ಮೀಟರ್ನಲ್ಲೇ ದುಪ್ಪಟ್ಟು ದರ ವಸೂಲಿ
Bangalore: ಆಗಸ್ಟ್-1 ರಿಂದಲೇ ಬೆಂಗಳೂರಿನಲ್ಲಿ ಆಟೋ ಮೀಟರ್ ದರ(Auto meter rate) ಏರಿಕೆಯಾಗಿದೆ. ಆದರೆ ಇಲ್ಲಿಯವರೆಗೆ ಒಂದೇ ಒಂದು ಆಟೋದಲ್ಲೂ ಸಹ ಹೊಸ ದರ ಜಾರಿಯಾಗುವ ಸೂಚನೆಯೇ ಇಲ್ಲ.
ಹಳೆಯ ಮೀಟರ್ನಲ್ಲೇ ದುಪ್ಪಟ್ಟು ದರ ಪಡೆಯುತ್ತಿದ್ದು, ಇದಕ್ಕೆ ಕಾರಣ ಆಟೋ ಮೀಟರ್ ಕಂಪನಿಗಳು(Auto meter companies) ರೀ-ಕ್ಯಾಲಿಬ್ರೇಷನ್‌ಗೆ ಅಧಿಕ ದರ ವಸೂಲಿ ಮಾಡುತ್ತಿರುವುದು
ಇದರಿಂದಲೇ ದುಪ್ಪಟ್ಟು ದರ ವಸೂಲಿ ಮಾಡಲು ಕಾರಣ ಎನ್ನುತ್ತಿದ್ದಾರೆ, ಆದರೇ ಇದರ ಬಿಸಿ ತಾಗುತ್ತಿರುವುದು ಮಾತ್ರ ಪ್ರಯಾಣಿಕರಿಗೆ. ಹೀಗಾಗಿ ಪ್ರಯಾಣಿಕರು ಹೆಚ್ಚುವರಿ ಹಣ ಪಾವತಿಸಬೇಕೆಂದು ತೀವ್ರ ಆಕ್ರೋಶಕೊಂಡಿದ್ದಾರೆ.
ಮೊದಲಿಗೆ ಎರಡು ಕಿಮೀ ಗೆ ಕನಿಷ್ಟ 30 ರೂ ಇದ್ದ ದರವನ್ನು, 36 ರೂ,ಗೆ ಪ್ರತಿ ಕಿಮೀ 15 ರೂ ಇದ್ದ ದರವನ್ನು 18 ರೂ ಏರಿಕೆ ಮಾಡಿ ಆದೇಶ ಮಾಡಲಾಗಿತ್ತು.

ಆಗಷ್ಟ್ 1ರಿಂದಲೇ ಹೊಸ ದರ ಜಾರಿಯಾಗಬೇಕಿತ್ತು, ಆದರೆ ದರ ಏರಿಕೆ ಆಗಿ 12 ದಿನಗಳು ಕಳೆದರೂ ಇಲ್ಲಿಯವರೆಗೆ ಒಂದೇ ಒಂದು ಆಟೋದಲ್ಲೂ ಹೊಸ ಮೀಟರ್ ದರವನ್ನು
ಅಳವಡಿಸಲು ಆಟೋ ಚಾಲಕರು ಮುಂದಾಗಿಲ್ಲ. ಬದಲಿಗೆ ಹಳೇ ಮೀಟರ್ ನಲ್ಲಿಯೇ ದಪ್ಪಟ್ಟು ಹಣ ವಸೂಲಿಗೆ ಮುಂದಾಗಿದ್ದಾರೆ ಇದಕ್ಕೆ ಪ್ರಮುಖ ಕಾರಣ
ಆಟೋ ಮೀಟರ್ ತಯಾರಿಕ ಕಂಪನಿಗಳು ರೀ ಕ್ಯಾಲಿಬ್ರೇಷನ್ ಮಾಡಲು ಆಟೋ ಚಾಲಕರಿಂದ ದುಪ್ಪಟ್ಟು ಹಣ ದೋಚುತ್ತಿರುವುದು.
ಬೇರೆಡೆ ಹೊಸ ಆಟೋ ಮೀಟರ್ ದರ ರೀ ಕ್ಯಾಲಿಬ್ರೇಷನ್ ಮಾಡಲು ಕೇವಲ 150 ರಿಂದ 400 ರೂ ಪಡೆಯಲು ಮುಂದಾಗಿದ್ದರೆ,
ಆದರೆ ಆಟೋ ಮೀಟರ್ ತಯಾರಿಕ ಕಂಪನಿಗಳು ಮಾತ್ರ 900 ರಿಂದ 1000 ರೂ. ವರೆಗೂ ಹಣ ವಸೂಲಿ ಮಾಡುತ್ತಿದ್ದಾರಂತೆ.
ಇದರಿಂದಲೇ ಆಟೋ ಚಾಲಕರು ಹೊಸ ಮೀಟರ್ ದರವನ್ನು ಬದಲಾಯಿಸಿಕೊಳ್ಳಲು ಮುಂದಾಗುತ್ತಿಲ್ಲ.
ಇನ್ನು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಪ್ರಯಾಣಿಕರು, ಯಾವ ಆಟೋ ಚಾಲಕನು ಮೀಟರ್ ಹಾಕುವುದೇ ಇಲ್ಲ. ಮೆಜೆಸ್ಟಿಕ್ ಹೋಗಲು 10 ಆಟೋಗಳನ್ನು ಕೇಳಿದರೂ ಯಾರು ಬರುವುದಿಲ್ಲ.
200 ರೂ ಕೇಳ್ತಿದ್ದಾರೆ, ಟ್ರಾಫಿಕ್ ಪೋಲಿಸರು ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎನ್ನುತ್ತಿದ್ದಾರೆ.
ಆಟೋ ಮೀಟರ್ ಹಾಕಿಲ್ಲ ಎಂದು ಆರ್ಟಿಓ(RTO) ಮತ್ತು ಟ್ರಾಫಿಕ್ ಪೋಲಿಸರು(Traffic police) ಆಟೋಗಳನ್ನು ಸೀಜ್ ಮಾಡಿ ಸಾವಿರಾರು ರೂಪಾಯಿ ದಂಡ ಹಾಗು ಕೇಸ್ ಹಾಕುತ್ತಿದ್ದಾರೆ.
ಮೀಟರ್ ರಿಪೇರಿ ಮಾಡುವವರ ಬಳಿ ಹೊಸ ದರವನ್ನು ಬದಲಾವಣೆ ಮಾಡಿಸಿಕೊಳ್ಳಲು ಸಾದ್ಯವಾಗುತ್ತಿಲ್ಲ,
ಆಟೋ ಮೀಟರ್ ತಯಾರಿಕ ಕಂಪನಿಗಳು ತೂಕ ಮತ್ತು ಅಳತೆ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ತಂದು ಹೊರಗೆ ಮೀಟರ್ ರೀ ಕ್ಯಾಲಿಬ್ರೇಷನ್ ಮಾಡಿಸಿಕೊಂಡರೇ ಮೀಟರ್ ಟ್ಯಾಂಪರಿಂಗ್ ಆಗುವ ಸಾಧ್ಯತೆ ಎನ್ನುತ್ತಿದ್ದಾರೆ.
ಹಾಗಾಗಿ ಮೀಟರ್ ಕಂಪನಿಗಳಿಂದಲೇ ಹೊಸ ದರವನ್ನು ರೀ ಕ್ಯಾಲಿಬ್ರೇಷನ್ ಮಾಡಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದ್ದು.
ಇದರಿಂದ ಆಟೋ ಚಾಲಕರು ನೂತನ ದರವನ್ನು ಪ್ರಯಾಣಿಕರಿಂದ ಪಡೆಯಲಾಗುತ್ತಿಲ್ಲ.
ಬದಲಿಗೆ ಮೀಟರ್ ದರ ಹೆಚ್ಚಳವಾಗಿದೆ ಎಂದು ಬೇಕಾಬಿಟ್ಟಿ ಹಣವನ್ನು ಪಡೆದುಕೊಳ್ಳಲು ಮುಂದಾಗಿದ್ದಾರೆ.
ಇದರಿಂದ ತೊಂದರೆ ಅನುಭವಿಸುತ್ತಿರುವ ಪ್ರಯಾಣಿಕರು ತಮ್ಮ ಆಕ್ರೋಶ ಹೊರ ಹಾಕಿದ್ದು, ಆಟೋ ಮೀಟರ್ ದರ ಏರಿಕೆ ಆದರೂ ಆಟೋ ಚಾಲಕರು ಹೊಸ ದರವನ್ನು ತೆಗೆದುಕೊಳ್ಳದೆ
ಇದನ್ನು ಓದಿ : ಬೆಂಗಳೂರಲ್ಲಿ ಆಟೋ ದರ ಏರಿಕೆ: ಜನಸಾಮಾನ್ಯರಿಗೆ ಮತ್ತೊಂದು ಆರ್ಥಿಕ ಹೊರೆ!
ದರ ಏರಿಕೆ ಆಗಿದೆ ಎಂದು 40 ರಿಂದ 50 ರೂ ಪಡೆದುಕೊಳ್ಳುತ್ತಿದ್ದಾರೆ, ಈ ಕೂಡಲೇ ಮಾಪನ ಇಲಾಖೆ(Department of Measurement) ರೀ ಕ್ಯಾಲಿಬ್ರೇಷನ್ ಮಾಡಲು ದರ ಫಿಕ್ಸ್ ಮಾಡಬೇಕಿದೆ ಎಂದು ಆಗ್ರಹಿಸಿದ್ದಾರೆ.