ಹೊಸ ಕಾರು ಖರೀದಿಸಬೇಕು ಎಂಬುದು ಸಾಕಸ್ಟು ಜನರ ಕನಸಾಗಿರುತ್ತೆ. ಶ್ರೀಮಂತರು (Rich people),ಮದ್ಯಮ ವರ್ಗದವರಿಗೆ ಹೊಸ ಕಾರು (New car) ಖರೀದಿ ಮಾಡಬೇಕು ಎಂಬ ಆಸೆ ಇರುತ್ತೆ ಆದರೆ ಕಾರ್ ಷೋರೂಮ್ ಗಳಲ್ಲಿ (Car showrooms) ಕಾರು ಖರೀದಿ ಮಾಡುವ ಮುಂಚೆ ಒಮ್ಮೆ ಯೋಚಿಸಿ ನಿಮ್ಮ ಕನಸಿನ ಕಾರನ್ನು (Dream car) ಖರೀದಿಸಿ.ಯಾಕಂದ್ರೆ ಕಾರ್ ಷೋರೂಮ್ (Car showroom) ಗಳಲ್ಲಿ ಹಳೇ ಕಾರುಗಳಿಗೆ ಬಣ್ಣ ಹಚ್ಚಿ ಅದನ್ನು ಮಾರಾಟ ಮಾಡುತ್ತಾರೆ.
ಬೆಂಗಳೂರಿನ ಕನಕಪುರ ರಸ್ತೆ (Kanakapura Road Bangalore) ಜರಗನಹಳ್ಳಿ ಯಲ್ಲಿರುವ ಟಾಟಾ ಮೋಟರ್ಸ್ ಕೀ ಷೋರೂಮ್ನಲ್ಲಿ (Tata Motors Key Showroom) ಡಾ.ರಾಘವೇಂದ್ರ ಕೃಷ್ಣ (Dr. Raghavendra Krishna) ಎಂಬುವವರು ಟಾಟಾ ನೆಕ್ಸಾನ್ ಕಾರನ್ನು (Tata Nexon car) ಖರೀದಿ ಮಾಡಿದ್ದರು.ಹೊಸ ಕಾರು (New car) ಎಂದು ತಿಳಿದಿದ್ದ ಅವರಿಗೆ ಬಿಗ್ ಶಾಕ್ (Big shock) ಎದುರಾಗಿತ್ತು ಏಕೆಂದರೆ ಅವರಿಗೆ ಕೀ ಷೋರೂಮ್ (Key showroom) ನೀಡಿದ್ದು ಆಕ್ಸಿಡೆಂಡ್ ಆಗಿರೋ ಕಾರು (Accident car).ಕಾರಿಗೆ ರೀ ಪೈಂಟ್ ಮಾಡಿ (Repaint) ಹೊಸ ಕಾರ್ ಅಂತ ಬಿಂಬಿಸಿ ಡೆಲಿವರಿ ಕೊಟ್ಟು ಡಾ.ರಾಘವೇಂದ್ರ ಕೃಷ್ಣ ಅವರಿಗೆ ದೊಡ್ಡ ಮೋಸ ಮಾಡಿದೆ.ಲಕ್ಷಾತಂರ ರೂಪಾಯಿ (lakhs of rupees) ಕೊಟ್ಟು ಕಾರು ಖರೀದಿಸಿದ ಮೊದಲ ದಿನದಿಂದಲೇ ಸಮಸ್ಯೆಗಳ ಮೇಲೆ ಸಮಸ್ಯೆಗಳು ಬರುತ್ತಿದ್ದವು.ಕಾರ್ ರನ್ನಿಂಗ್ನಲ್ಲಿ ಇದ್ರೂ ಡೋರ್ ಒಪ್ಪನ್ ಆಗಿದೆ ಎಂದು ಸೈರನ್ ಬರುತ್ತಿತ್ತು. ಏಸಿ ಆನ್ ಮಾಡಿದ್ರೆ ಗಬ್ಬು ವಾಸನೆ ಬರುತ್ತಿತ್ತು.ತುಕ್ಕು ಹಿಡಿದ ಪಾರ್ಟ್ಸ್ (Corroded parts) ಹಾಕಿ ಗ್ರಾಹಕನಿಗೆ ಮೋಸ ಮಾಡಿದ್ದಾರೆ.

ಕಾರಿನ ಸಮಸ್ಯೆಗಳ ಬಗ್ಗೆ ಕೀ ಷೋರೂಮ್ (Key showroom) ಮಾಲೀಕರ ಗಮನಕ್ಕೆ ತಂದರು ಅವರು ಲೆಕ್ಕಿಸಲಿಲ್ಲ.ಕನ್ಸೂಮರ್ ಕೋರ್ಟ್ಗೆ (Consumer Court) ಇದರ ಬಗ್ಗೆ ದೂರು ನೀಡಲಾಗಿದ್ದು ನ್ಯಾಯಲಯವು (Court) ಡಾ.ರಾಘವೇಂದ್ರ ಕೃಷ್ಣ ಅವರಿಗೆ ಕೀ ಷೋರೂಮ್ (Key showroom) ಪರಿಹಾರ ನೀಡಬೇಕು ಎಂದು ಆದೇಶ ನೀಡಿದೆ.ಈ ಆದೇಶಕ್ಕೂ ಕೀ ಷೋರೂಮ್ ಕಿವಿಗೊಡದೆ ಅವರಿಗೆ ಪರಿಹಾರದ ಹಣ ನೀಡದೆ ನ್ಯಾಯಾಂಗ ನಿಂದನೆ (Contempt of Court) ಮಾಡಿದೆ.ಈ ರೀತಿ ಗ್ರಾಹಕರಿಗೆ ಕೀ ಷೋರೂಮ್ ಮೋಸ ಮಾಡಿತ್ತಿದೆ.ಹೊಸ ಕಾರು ಖರೀದಿ ಮಾಡುವ ಮುಂಚೆ ಯೋಚಿಸಿ ಖರೀದಿ ಮಾಡಿ.