• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Sports

ಆನೆಕಲ್‌ನಲ್ಲಿ 80,000 ಆಸನಗಳ ಕ್ರಿಕೆಟ್ ಕ್ರೀಡಾಂಗಣಕ್ಕೆ ಸರ್ಕಾರದ ಗ್ರೀನ್ ಸಿಗ್ನಲ್

Shwetha Mohan by Shwetha Mohan
in Sports, ಪ್ರಮುಖ ಸುದ್ದಿ, ರಾಜ್ಯ
ಆನೆಕಲ್‌ನಲ್ಲಿ 80,000 ಆಸನಗಳ ಕ್ರಿಕೆಟ್ ಕ್ರೀಡಾಂಗಣಕ್ಕೆ ಸರ್ಕಾರದ ಗ್ರೀನ್ ಸಿಗ್ನಲ್
0
SHARES
38
VIEWS
Share on FacebookShare on Twitter
  • ಆನೆಕಲ್ ಅಲ್ಲಿ ₹2,350 ಕೋಟಿ ವೆಚ್ಚದ ಭವ್ಯ ಯೋಜನೆಗೆ ಸಂಪುಟ ಅಸ್ತು
  • ಆನೆಕಲ್ ತಾಲ್ಲೂಕಿನಲ್ಲಿ 75 ಎಕರೆ ಪ್ರದೇಶದಲ್ಲಿ ವಿಶ್ವದರ್ಜೆಯ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಸಂಪುಟ ಒಪ್ಪಿಗೆ
  • ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ದುರ್ಘಟನೆ ಬಳಿಕ ಹೊಸ ಸುರಕ್ಷತಾ ಮಾನದಂಡಗಳೊಂದಿಗೆ ರಾಜ್ಯದ ಅತ್ಯಾಧುನಿಕ ಕ್ರೀಡಾಂಗಣ ನಿರ್ಮಾಣಕ್ಕೆ ಯೋಜನೆ

Bengaluru: ಬೆಂಗಳೂರು ನಗರದ ಕ್ರೀಡಾ ಸೌಕರ್ಯಗಳಿಗೆ ಹೊಸ ಗರಿ ತಂದುಕೊಡುವ ಮಹತ್ವದ ನಿರ್ಧಾರವನ್ನು ಕರ್ನಾಟಕ ಸರ್ಕಾರ ಕೈಗೊಂಡಿದೆ.(new cricket stadium in anekal)

ಆನೆಕಲ್ ತಾಲ್ಲೂಕಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ಮತ್ತು ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟವು ₹2,350 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ತಾತ್ವಿಕ ಅನುಮೋದನೆ ನೀಡಿದೆ.

ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ಮತ್ತು ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

ಸಂಪುಟ ಸಭೆಯ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ (S.K.Patel) ಅವರು ಮಾಧ್ಯಮದವರೊಂದಿಗೆ ಮಾತನಾಡಿ, “ಆನೆಕಲ್ ತಾಲ್ಲೂಕಿನ ಇಂಡ್ಲವಾಡಿ ಗ್ರಾಮದ ಸೂರ್ಯನಗರ ನಾಲ್ಕನೇ ಹಂತದ ವಿಸ್ತರಣೆಯಲ್ಲಿರುವ ಸುಮಾರು 75 ಎಕರೆ ಪ್ರದೇಶದಲ್ಲಿ ಈ ಕ್ರೀಡಾಂಗಣ ಮತ್ತು ಕ್ರೀಡಾ ಸಂಕೀರ್ಣವನ್ನು ನಿರ್ಮಿಸಲಾಗುತ್ತಿದೆ.

ಈ ಯೋಜನೆಗೆ ವಸತಿ ಇಲಾಖೆಯು ಪ್ರಸ್ತಾವನೆ ಸಲ್ಲಿಸಿದ್ದು, ಅದಕ್ಕೆ ಸಚಿವ ಸಂಪುಟ ತಾತ್ವಿಕ ಅನುಮೋದನೆ ನೀಡಿದೆ. (new cricket stadium in anekal)

ಇದೀಗ ಇಲಾಖೆಗೆ ವಿವರವಾದ ಯೋಜನಾ ವರದಿ (DPR) ಹಾಗೂ ಕಾರ್ಯಸಾಧ್ಯತಾ ಅಧ್ಯಯನ (Feasibility Study) ಸಿದ್ಧಪಡಿಸಲು ಸೂಚನೆ ನೀಡಲಾಗಿದೆ” ಎಂದು ತಿಳಿಸಿದ್ದಾರೆ.

ಇನ್ನು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಅವರ ಪ್ರಕಾರ, ಈ ನೂತನ ಕ್ರೀಡಾಂಗಣವು ಸುಮಾರು 80,000 ಪ್ರೇಕ್ಷಕರ ಸಾಮರ್ಥ್ಯ ಹೊಂದಿರಲಿದೆ.

ಜೊತೆಗೆ 24 ವಿವಿಧ ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳಿಗೆ ಸೌಲಭ್ಯಗಳು ಇರಲಿವೆ.

ಕ್ರೀಡಾ ಅಭಿಮಾನಿಗಳು ಮಾತ್ರವಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಅನುಕೂಲವಾಗುವಂತೆ 3,000 ಆಸನಗಳ ವಿಶಾಲ ಸಭಾಂಗಣ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ.

ಈ ಯೋಜನೆ ಪೂರ್ಣಗೊಂಡ ಬಳಿಕ, ಇದು ದೇಶದ ಅತಿದೊಡ್ಡ ಮತ್ತು ಅತ್ಯಾಧುನಿಕ ಕ್ರೀಡಾ ಸಂಕೀರ್ಣಗಳಲ್ಲಿ ಒಂದಾಗಿ ಪರಿಣಮಿಸುವ ನಿರೀಕ್ಷೆ ಇದೆ.

ಈ ಹೊಸ ಕ್ರೀಡಾಂಗಣವು ಮೈಸೂರು ಮತ್ತು ತುಮಕೂರಿನ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಂಗಣಗಳ ನಂತರ ರಾಜ್ಯದ ಮೂರನೇ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನವಾಗಲಿದೆ.

ಇನ್ನು ಕ್ರೀಡಾಂಗಣವು ಕೇವಲ 38,000 ಆಸನ ಸಾಮರ್ಥ್ಯ ಹೊಂದಿದೆ.

ಈ ಸ್ಟೇಡಿಯಂ ರಾಜ್ಯದ ಪ್ರಮುಖ ಕ್ರೀಡಾ ಕೇಂದ್ರವಾಗಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಅದರ ಸೌಕರ್ಯಗಳು ಹಾಗೂ ಸುರಕ್ಷತಾ ಕ್ರಮಗಳ ಕುರಿತು ಪ್ರಶ್ನೆಗಳು ಮೂಡಿವೆ.

ವಿಶೇಷವಾಗಿ ಈ ವರ್ಷ ನಡೆದ ಆರ್‌ಸಿಬಿ (RCB) ವಿಜಯೋತ್ಸವದ ಕಾಲ್ತುಳಿತದ ದುರ್ಘಟನೆ ಬಳಿಕ 11 ಮಂದಿ ಪ್ರೇಕ್ಷಕರು ಸಾವನ್ನಪ್ಪಿದ ಘಟನೆ ರಾಜ್ಯವ್ಯಾಪಕ ಚರ್ಚೆಗೆ ಗ್ರಾಸವಾಯಿತು.

ಆ ಘಟನೆಯ ನಂತರ ಚಿನ್ನಸ್ವಾಮಿಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳು ನಡೆಯದಂತಾಗಿದೆ.

ಈ ಹಿನ್ನೆಲೆಯಲ್ಲೇ ಸರ್ಕಾರವು ಹೊಸ ಕ್ರೀಡಾಂಗಣದ ಅಗತ್ಯವನ್ನು ಗುರುತಿಸಿ, ಭದ್ರತೆ, ಸಾಮರ್ಥ್ಯ ಮತ್ತು ವಿಶ್ವಮಟ್ಟದ ಸೌಲಭ್ಯಗಳೊಂದಿಗೆ ಹೊಸ ಕ್ರೀಡಾಂಗಣ ನಿರ್ಮಿಸಲು ನಿರ್ಧರಿಸಿದೆ.

ಸರ್ಕಾರದ ಪ್ರಕಾರ, ಇದು ಕೇವಲ ಕ್ರಿಕೆಟ್ ಪಂದ್ಯಗಳಿಗಲ್ಲ, ಬದಲಾಗಿ ಬಹುಮುಖ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆಯಾಗಿ ಬಳಕೆಯಾಗಲಿದೆ.

₹2,350 ಕೋಟಿ ರೂಪಾಯಿಗಳ ಬೃಹತ್ ಯೋಜನೆ ರಾಜ್ಯದ ಆರ್ಥಿಕ ಚಟುವಟಿಕೆಗೆ ಹೊಸ ಜೀವ ತುಂಬಲಿದೆ. ನಿರ್ಮಾಣ ಹಂತದಲ್ಲಿ ಸಾವಿರಾರು ಜನರಿಗೆ ಉದ್ಯೋಗಾವಕಾಶ ಸಿಗುವ ನಿರೀಕ್ಷೆ ಇದೆ.

ಸ್ಥಳೀಯ ವ್ಯಾಪಾರ, ಹೋಟೆಲ್, ಸಾರಿಗೆ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳು ಇದರಿಂದ ಲಾಭಪಡೆಯಲಿವೆ.

ಜೊತೆಗೆ ಕ್ರೀಡಾಂಗಣದ ಸುತ್ತಮುತ್ತ ಮೂಲಸೌಕರ್ಯ ರಸ್ತೆ, ಬೆಳಕು, ಸಾರ್ವಜನಿಕ ಸಾರಿಗೆ ಹಾಗೂ ವಸತಿ ಸೌಲಭ್ಯಗಳು ಅಭಿವೃದ್ಧಿಯಾಗಲಿವೆ.

Tags: bengaluruCricketsportsState Government

Related News

₹10.49 ಲಕ್ಷದಿಂದ 28.65 ಕಿ.ಮೀ ಮೈಲೇಜ್: ಟಾಪ್ ಹೈಬ್ರಿಡ್ ಕಾರುಗಳು
ಪ್ರಮುಖ ಸುದ್ದಿ

₹10.49 ಲಕ್ಷದಿಂದ 28.65 ಕಿ.ಮೀ ಮೈಲೇಜ್: ಟಾಪ್ ಹೈಬ್ರಿಡ್ ಕಾರುಗಳು

October 5, 2026
ಮೆದುಳಿನ ಆರೋಗ್ಯಕ್ಕೆ ಈ 5 ಅಭ್ಯಾಸ ಸಾಕು
ಆರೋಗ್ಯ

ಮೆದುಳಿನ ಆರೋಗ್ಯಕ್ಕೆ ಈ 5 ಅಭ್ಯಾಸ ಸಾಕು

October 5, 2026
ಉದ್ಯೋಗಿಗಳಾಗದೇ ಉದ್ಯಮಿಗಳಾಗಿ: ಕರಾವಳಿ–ಮಲೆನಾಡು ಯುವಕರಿಗೆ ಸಿಎಂ ಡಿಕೆ ಶಿವಕುಮಾರ್ ಕರೆ
ಪ್ರಮುಖ ಸುದ್ದಿ

ಉದ್ಯೋಗಿಗಳಾಗದೇ ಉದ್ಯಮಿಗಳಾಗಿ: ಕರಾವಳಿ–ಮಲೆನಾಡು ಯುವಕರಿಗೆ ಸಿಎಂ ಡಿಕೆ ಶಿವಕುಮಾರ್ ಕರೆ

October 5, 2026
ಅನಧಿಕೃತ ಪಿಜಿಗಳ ವಿರುದ್ಧ GBA ಕಠಿಣ ಕ್ರಮ: ಕರೆಂಟ್‌, ನೀರಿನ ಸಂಪರ್ಕ ಕಡಿತಕ್ಕೆ ಸಿದ್ಧತೆ
ಪ್ರಮುಖ ಸುದ್ದಿ

ಅನಧಿಕೃತ ಪಿಜಿಗಳ ವಿರುದ್ಧ GBA ಕಠಿಣ ಕ್ರಮ: ಕರೆಂಟ್‌, ನೀರಿನ ಸಂಪರ್ಕ ಕಡಿತಕ್ಕೆ ಸಿದ್ಧತೆ

October 3, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.