- Draft Income Tax Rules 2026 ಜಾರಿಯಿಂದ ತೆರಿಗೆ ಪಾವತಿದಾರರ (New draft income tax rules) ಹಣಕಾಸು ವ್ಯವಹಾರಗಳಲ್ಲಿ ಪಾರದರ್ಶಕತೆ ಹೆಚ್ಚಳ
- ಸ್ಟಾಕ್ ಎಕ್ಸ್‌ಚೇಂಜ್‌ಗಳಿಗೆ ಕಠಿಣ ಮಾರ್ಗಸೂಚಿ; ಹೂಡಿಕೆದಾರರಿಗೆ ಹೊಸ ಜವಾಬ್ದಾರಿ
- Perks & Allowances ಮೇಲೆ ಫಾರ್ಮುಲಾ ಆಧಾರಿತ ತೆರಿಗೆ ವ್ಯವಸ್ಥೆ ಜಾರಿ
ಭಾರತದ ತೆರಿಗೆ ವ್ಯವಸ್ಥೆ 2026ರ ಏಪ್ರಿಲ್ 1ರಿಂದ ಮಹತ್ವದ (New draft income tax rules) ಬದಲಾವಣೆ ಹೊಂದಲಿದೆ.
ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಕರಡು ಆದಾಯ ತೆರಿಗೆ ನಿಯಮಗಳು 2026 ದೇಶದ ಸಂಪೂರ್ಣ ತೆರಿಗೆ ರಚನೆಗೆ ಹೊಸ ರೂಪ ನೀಡಲಿವೆ.
ಈ ನಿಯಮಗಳು ಕೇವಲ ಕಾನೂನು ಬದಲಾವಣೆಗಳಲ್ಲ, ಬದಲಾಗಿ ಪ್ರತಿಯೊಬ್ಬ ತೆರಿಗೆ ಪಾವತಿದಾರರ ದಿನನಿತ್ಯದ ಹಣಕಾಸು ಚಟುವಟಿಕೆಗಳ ಮೇಲೆಯೇ ಪರಿಣಾಮ ಬೀರುವಂತಹವು. ಸಂಬಳ, ಹೂಡಿಕೆ, ಷೇರು ವಹಿವಾಟು, ಡಿಜಿಟಲ್ (Digital) ಪಾವತಿ ಹಾಗೂ ವಿದೇಶಿ ವ್ಯವಹಾರಗಳ ಮೇಲೆ ಸರ್ಕಾರದ ನಿಗಾವ್ಯವಸ್ಥೆ ಇನ್ನಷ್ಟು ಬಲವಾಗಲಿದೆ.

ತೆರಿಗೆ ಪಾರದರ್ಶಕತೆ ಹೆಚ್ಚಿಸುವುದು ಮತ್ತು ತೆರಿಗೆ ತಪ್ಪಿಸುವ ಮಾರ್ಗಗಳನ್ನು ಸಂಪೂರ್ಣವಾಗಿ ಮುಚ್ಚುವುದು ಈ ಹೊಸ ನಿಯಮಗಳ ಪ್ರಮುಖ ಉದ್ದೇಶವಾಗಿದೆ.
ಈ ಹೊಸ ನಿಯಮಗಳಲ್ಲಿ ಷೇರು ಮಾರುಕಟ್ಟೆ ಹೂಡಿಕೆದಾರರಿಗೆ (New draft income tax rules) ಅತ್ಯಂತ ಮಹತ್ವದ ಬದಲಾವಣೆಗಳು ಸೇರಿವೆ.
ಇನ್ನು ಮುಂದೆ ಷೇರು ವಿನಿಮಯ ಕೇಂದ್ರಗಳು (Stock Exchanges) ಪ್ರತಿ ವಹಿವಾಟಿನ ಸಂಪೂರ್ಣ ವಿವರಗಳನ್ನು ಕನಿಷ್ಠ 7 ವರ್ಷಗಳ ಕಾಲ ಸಂಗ್ರಹಿಸಬೇಕಾಗುತ್ತದೆ.
ಸಣ್ಣ ಹೂಡಿಕೆಯಿಂದ ಹಿಡಿದು ದೊಡ್ಡ ವಹಿವಾಟುಗಳವರೆಗೂ ಎಲ್ಲವೂ ತೆರಿಗೆ ಇಲಾಖೆಯ ನಿಗಾದಲ್ಲಿರುತ್ತದೆ.
ವಹಿವಾಟಿನಲ್ಲಿ ಏನಾದರೂ ತಿದ್ದುಪಡಿ ಮಾಡಿದರೂ ಅದರ ಮಾಹಿತಿ ಪ್ರತಿಮಾಸವೂ ತೆರಿಗೆ ಅಧಿಕಾರಿಗಳಿಗೆ ಸಲ್ಲಿಸಬೇಕಾಗುತ್ತದೆ. ಅಲ್ಲದೆ, ಬಂಡವಾಳ ಆಸ್ತಿಗಳ ಹೋಲ್ಡಿಂಗ್ ಅವಧಿ ಕುರಿತು ನಿಯಮಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದೆ.
ಇದರಿಂದ ಅಲ್ಪಾವಧಿ ಮತ್ತು ದೀರ್ಘಾವಧಿ ಕ್ಯಾಪಿಟಲ್ ಗೇನ್ ತೆರಿಗೆಗೆ ಸಂಬಂಧಿಸಿದ ಗೊಂದಲಗಳು ನಿವಾರಣೆಯಾಗಲಿವೆ.
ಉದ್ಯೋಗಿಗಳಿಗೆ ಸಂಬಂಧಿಸಿದಂತೆ, ಸಂಬಳದ ಜೊತೆಗೆ ಸಿಗುವ ಸವಲತ್ತುಗಳ ಮೇಲೂ ಹೊಸ ಲೆಕ್ಕಾಚಾರ ಜಾರಿಗೆ ಬರಲಿದೆ.
ಬಾಡಿಗೆ ರಹಿತ ವಸತಿ, ಕಂಪನಿ ನೀಡುವ ಕಾರು, ಮಕ್ಕಳ ಶಿಕ್ಷಣ ವೆಚ್ಚ, ಕ್ಲಬ್ ಸದಸ್ಯತ್ವ, ಕಡಿಮೆ ಬಡ್ಡಿದರ ಸಾಲಗಳು, ಊಟ ಹಾಗೂ ಪ್ರಯಾಣ ವೆಚ್ಚಗಳಂತಹ ಸೌಲಭ್ಯಗಳಿಗೆ ಇನ್ನು ಮುಂದೆ ನಿಶ್ಚಿತ ಸೂತ್ರದ ಆಧಾರದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಹಿಂದಿನ ವ್ಯವಸ್ಥೆಯಲ್ಲಿ ಈ ಸವಲತ್ತುಗಳ ಮೌಲ್ಯ ನಿರ್ಧಾರ ಸ್ಪಷ್ಟವಾಗಿರಲಿಲ್ಲ.
ಇದರಿಂದ ಉದ್ಯೋಗಿ-ಉದ್ಯೋಗದಾತರ ನಡುವೆ ಹಾಗೂ ತೆರಿಗೆ ಇಲಾಖೆಯೊಂದಿಗೆ ಹಲವು ವಿವಾದಗಳು ಉಂಟಾಗುತ್ತಿದ್ದವು. ಹೊಸ ನಿಯಮಗಳು ಪ್ರತಿ ಸವಲತ್ತಿಗೂ ಮಿತಿ ಮತ್ತು ಕ್ಯಾಪ್ ನಿಗದಿಪಡಿಸಿರುವುದರಿಂದ, ತೆರಿಗೆ ಹೊಣೆಗಾರಿಕೆ ಮೊದಲೇ ತಿಳಿದುಕೊಳ್ಳಲು ಸಾಧ್ಯವಾಗಲಿದೆ.
ವಿದೇಶಿ ಹೂಡಿಕೆ ಹಾಗೂ ಡಿಜಿಟಲ್ ವ್ಯವಹಾರಗಳ ಮೇಲಿನ ನಿಯಂತ್ರಣವೂ ಈ ಹೊಸ ನಿಯಮಗಳಲ್ಲಿ ಪ್ರಮುಖ ಅಂಶವಾಗಿದೆ.
ಭಾರತದಲ್ಲಿ ಆದಾಯ ಗಳಿಸಿ ತೆರಿಗೆ ತಪ್ಪಿಸಿಕೊಳ್ಳುತ್ತಿದ್ದ ವಿದೇಶಿ ಕಂಪನಿಗಳು ಮತ್ತು ಅನಿವಾಸಿಗಳಿಗೆ (Non-Residents) ಈಗ ಕಟ್ಟುನಿಟ್ಟಾದ ನಿಯಮಗಳು ಅನ್ವಯವಾಗಲಿವೆ.
ಭಾರತೀಯ ಆಸ್ತಿಗಳಿಂದ ಮೌಲ್ಯ ಪಡೆಯುವ ಯಾವುದೇ ವಿದೇಶಿ ಆಸ್ತಿಗೆ ಭಾರತದಲ್ಲೇ ತೆರಿಗೆ ವಿಧಿಸುವ ಹೊಸ ಸೂತ್ರ ಜಾರಿಗೆ ಬರಲಿದೆ.
ಜೊತೆಗೆ, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ಸಂಬಂಧಿಸಿದಂತೆ ‘ಸಿಗ್ನಿಫಿಕೆಂಟ್ ಎಕನಾಮಿಕ್ ಪ್ರೆಸೆನ್ಸ್’ (Significant monophonic presence) ಎಂಬ ಮಾನದಂಡವನ್ನು ಮತ್ತಷ್ಟು ಕಠಿಣಗೊಳಿಸಲಾಗಿದೆ.
ಇದರಿಂದ ಜಾಗತಿಕ ಕಂಪನಿಗಳಿಂದಲೂ ಭಾರತ ತನ್ನ ನ್ಯಾಯಸಮ್ಮತ ತೆರಿಗೆ ಪಾಲನ್ನು ವಸೂಲಿ ಮಾಡಿಕೊಳ್ಳಲು ಸಾಧ್ಯವಾಗಲಿದೆ.
ಒಟ್ಟಾರೆ, ಕರಡು ಆದಾಯ ತೆರಿಗೆ ನಿಯಮಗಳು 2026 ಭಾರತದ ತೆರಿಗೆ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕ, ಸರಳ ಮತ್ತು ತಂತ್ರಜ್ಞಾನಾಧಾರಿತವಾಗಿಸಲು ಉದ್ದೇಶಿಸಿದೆ.
ತೆರಿಗೆ ವಂಚನೆಗೆ ಅವಕಾಶ ಕಡಿಮೆಯಾಗಲಿದ್ದು, ತೆರಿಗೆ ಪಾವತಿದಾರರಿಗೆ ನಿಯಮಗಳ ಬಗ್ಗೆ ಹೆಚ್ಚಿನ ಸ್ಪಷ್ಟತೆ ಸಿಗಲಿದೆ. ಹೂಡಿಕೆದಾರರು, ಉದ್ಯೋಗಿಗಳು ಮತ್ತು ಉದ್ಯಮಿಗಳು ಈ ಹೊಸ ನಿಯಮಗಳನ್ನು ಮುಂಚಿತವಾಗಿ ಅರ್ಥಮಾಡಿಕೊಂಡು ತಮ್ಮ ಹಣಕಾಸು ಯೋಜನೆಗಳನ್ನು ರೂಪಿಸಿಕೊಳ್ಳುವುದು ಅತ್ಯಗತ್ಯವಾಗಿದೆ.
ಏಪ್ರಿಲ್ 1ರಿಂದ ಜಾರಿಗೆ ಬರುವ ಈ ಬದಲಾವಣೆಗಳು ಮುಂದಿನ ವರ್ಷಗಳಲ್ಲಿ ದೇಶದ ಆರ್ಥಿಕ ಶಿಸ್ತಿಗೆ ಹೊಸ ದಿಕ್ಕು ನೀಡಲಿವೆ.
ಇದನ್ನು ಓದಿ : https://vijayatimes.com/bmrcl-withdraws-price-hike-decision/