- ಜನವರಿ 1ರಿಂದ ಜಾರಿಗೆ ಹೊಸ (New financial rules ) ಹಣಕಾಸು ರೂಲ್ಸ್
- ತೆರಿಗೆ ಪಾವತಿ ಸರಳೀಕರಣ, ಬ್ಯಾಂಕಿಂಗ್ ಸುರಕ್ಷತೆ ಮತ್ತು ಹಣದುಬ್ಬರ ನಿಯಂತ್ರಣಕ್ಕೆ ಹೊಸ ನೀತಿಗಳು
- ಪಿಎಫ್, ಆದಾಯ ತೆರಿಗೆ, ವೇತನ ಆಯೋಗ ಮತ್ತು ಬ್ಯಾಂಕಿಂಗ್ ನಿಯಮಗಳಲ್ಲಿ ಹೊಸ ವರ್ಷದಿಂದ ಜಾರಿಗೆ ಬರುವ ಪ್ರಮುಖ ಬದಲಾವಣೆ
ಇನ್ನೇನು ಕೆಲವೇ ಕೆಲವು ದಿನಗಳಲ್ಲಿ 2026 ಆರಂಭವಾಗಲಿದೆ.ಅದರ ಬೆನ್ನಲ್ಲೇ ದೇಶದ (New financial rules) ಆರ್ಥಿಕ ವ್ಯವಸ್ಥೆಗೆ ಸಂಬಂಧಿಸಿದ ಹಲವು ಮಹತ್ವದ ಹಣಕಾಸು ನಿಯಮಗಳು ಜಾರಿಗೆ ಬರಲಿವೆ.
ಸಾಮಾನ್ಯ ನಾಗರಿಕರಿಂದ ಹಿಡಿದು ಸರ್ಕಾರಿ ನೌಕರರು, ಉದ್ಯೋಗಿಗಳು, ತೆರಿಗೆದಾರರು ಹಾಗೂ ಬ್ಯಾಂಕಿಂಗ್ (Banking) ಗ್ರಾಹಕರವರೆಗೆ ಎಲ್ಲರ ಮೇಲೂ ಈ ನಿಯಮ ಬದಲಾವಣೆಗಳು ನೇರ ಪರಿಣಾಮ ಬೀರುತ್ತವೆ.
ಪ್ರತಿದಿನದ ಜೀವನದಲ್ಲಿ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಇವುಗಳ ಬಗ್ಗೆ ತಿಳಿದಿರುವುದು ಅತ್ಯಂತ ಅಗತ್ಯ.

ಪಿಎಫ್ ನಿಯಮಗಳು, ಆದಾಯ ತೆರಿಗೆ ಪಾವತಿ ಪ್ರಕ್ರಿಯೆ, ವೇತನ ಆಯೋಗ, ಬ್ಯಾಂಕಿಂಗ್ (New financial rules) ಸುರಕ್ಷತೆ ಮತ್ತು ಹಣದುಬ್ಬರ ನಿಯಂತ್ರಣ ಈ ಎಲ್ಲಾ ಅಂಶಗಳು ಹೊಸ ವರ್ಷದಲ್ಲಿ ಹೊಸ ರೂಪ ಪಡೆಯಲಿವೆ.
ಇನ್ನು 2026ರ ಪ್ರಮುಖ ನಿರೀಕ್ಷೆಯಾದ 8ನೇ ವೇತನ ಆಯೋಗ ಸರ್ಕಾರಿ ನೌಕರರಿಗೆ ದೊಡ್ಡ ನಿರಾಳತೆಯನ್ನು ತರಲಿದೆ.
ಈ ಆಯೋಗ ಜಾರಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ವೇತನದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ.
ಇದರಿಂದ ನೌಕರರ ಖರ್ಚು ಸಾಮರ್ಥ್ಯ ಹೆಚ್ಚಾಗುವುದರ ಜೊತೆಗೆ ಮಾರುಕಟ್ಟೆಯಲ್ಲೂ ಚಲನವಲನ ಹೆಚ್ಚಾಗಲಿದೆ.
ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಬಜೆಟ್ ಒತ್ತಡ ಅನುಭವಿಸುತ್ತಿರುವ ನೌಕರರಿಗೆ ಇದು ದೊಡ್ಡ ನೆರವಾಗಲಿದೆ.
ಜೊತೆಗೆ ಪಿಂಚಣಿ ಹಾಗೂ ಇತರೆ ಭತ್ಯೆಗಳ ಮೇಲೂ ಇದರ ಪ್ರಭಾವ ಬೀಳುವ ನಿರೀಕ್ಷೆಯಿದೆ.
ಅಷ್ಟೇ ಅಲ್ಲದೆ ಇನ್ನು ತೆರಿಗೆ ಪಾವತಿ ವ್ಯವಸ್ಥೆಯಲ್ಲೂ ಮಹತ್ವದ ಸುಧಾರಣೆಗಳನ್ನು ಸರ್ಕಾರ ಕೈಗೊಂಡಿದೆ.
ಹೊಸ ವರ್ಷದಿಂದ ಫ್ರೀ-ಫಿಲ್ಲ್ಡ್ (Free-filled) ಐಟಿಆರ್ ಫಾರ್ಮ್‌ಗಳ ಬಳಕೆಯನ್ನು ಮತ್ತಷ್ಟು ವಿಸ್ತರಿಸಲಾಗುತ್ತಿದೆ. ಇದರಿಂದ ತೆರಿಗೆದಾರರಿಗೆ ಐಟಿಆರ್ ಸಲ್ಲಿಕೆ ಪ್ರಕ್ರಿಯೆ ಸುಲಭವಾಗಲಿದೆ.
ಹೆಚ್ಚಿನ ದಾಖಲೆಗಳ ಗೊಂದಲ, ಲೆಕ್ಕಾಚಾರದ ದೋಷಗಳು ಕಡಿಮೆಯಾಗಲಿದ್ದು, ಆನ್‌ಲೈನ್ ಮೂಲಕವೇ ವೇಗವಾಗಿ ತೆರಿಗೆ ಪಾವತಿ ಸಾಧ್ಯವಾಗಲಿದೆ.
ಜಿಎಸ್‌ಟಿ ಸಂಬಂಧಿತ ಕೆಲ ಬದಲಾವಣೆಗಳು ಕೂಡ ಸಾಮಾನ್ಯ ಗ್ರಾಹಕರ ಮೇಲಿನ ತೆರಿಗೆ ಭಾರವನ್ನು ಸ್ವಲ್ಪ ಮಟ್ಟಿಗೆ ಇಳಿಸುವ ನಿರೀಕ್ಷೆಯಿದೆ.
ಉದ್ಯೋಗಿಗಳ ಭವಿಷ್ಯ ನಿಧಿ (EPFO) ನಿಯಮಗಳಲ್ಲಿ ಕೂಡ ಹೊಸ ಬದಲಾವಣೆಗಳು ಜಾರಿಗೆ ಬರುತ್ತಿವೆ. ಪಿಎಫ್ ಹಣ ಹಿಂಪಡೆಯುವ ಪ್ರಕ್ರಿಯೆ ಇದುವರೆಗೆ ಸಾಕಷ್ಟು ತೊಂದರೆಗಳಿಗೆ ಕಾರಣವಾಗುತ್ತಿತ್ತು.
ಆದರೆ 2026ರಿಂದ ತುರ್ತು ಅಗತ್ಯಗಳು, ವೈದ್ಯಕೀಯ ಖರ್ಚು, ಮನೆ ಖರೀದಿ ಅಥವಾ ಶಿಕ್ಷಣ ಉದ್ದೇಶಗಳಿಗೆ ಪಿಎಫ್ ಹಣ ಹಿಂಪಡೆಯುವ ಕ್ರಮವನ್ನು ಸರಳಗೊಳಿಸಲಾಗಿದೆ.
ಡಿಜಿಟಲ್ ಪ್ರಕ್ರಿಯೆ ಹೆಚ್ಚಳದಿಂದ ಸಮಯವೂ ಉಳಿಯಲಿದ್ದು, ಉದ್ಯೋಗಿಗಳಿಗೆ ತಮ್ಮದೇ ಹಣವನ್ನು ಸುಲಭವಾಗಿ ಬಳಸಿಕೊಳ್ಳಲು ಅವಕಾಶ ದೊರೆಯಲಿದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿಯೂ ಸುರಕ್ಷತೆ ಮುಖ್ಯ ಗುರಿಯಾಗಿದ್ದು, ಜನವರಿ 1ರಿಂದ ಆಧಾರ್–ಪಾನ್ ಲಿಂಕಿಂಗ್ (Aadhar-Pan Link) ಕಡ್ಡಾಯವಾಗಲಿದೆ.
ಯುಪಿಐ ವಹಿವಾಟು, ಡಿಜಿಟಲ್ (Digital) ಪಾವತಿ ವ್ಯವಸ್ಥೆಗಳಲ್ಲಿ ಹೊಸ ಸುರಕ್ಷತಾ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ.
ಇದರಿಂದ ಆನ್‌ಲೈನ್ ವಂಚನೆ, ಸೈಬರ್ ದಾಳಿ ಮತ್ತು ಹಣದ ದುರುಪಯೋಗವನ್ನು ತಡೆಯಲು ಸಹಾಯವಾಗಲಿದೆ.
ಜೊತೆಗೆ ಹಣದುಬ್ಬರದ ಒತ್ತಡವನ್ನು ತಗ್ಗಿಸುವ ಉದ್ದೇಶದಿಂದ ಸಿಎನ್‌ಜಿ (CNG) ಹಾಗೂ ಪಿಎನ್‌ಜಿ ಗ್ಯಾಸ್ (PNG Gas) ಬೆಲೆಗಳಲ್ಲಿ ಇಳಿಕೆ ಸಾಧ್ಯತೆ ಇರುವುದಾಗಿ ಅಂದಾಜಿಸಲಾಗಿದೆ.
ಒಟ್ಟಿನಲ್ಲಿ, 2026ರ ಹಣಕಾಸು ನಿಯಮಗಳು ಜನಸಾಮಾನ್ಯರ ಆರ್ಥಿಕ ಬದುಕಿಗೆ ಹೊಸ ದಿಕ್ಕು ನೀಡುವ ನಿರೀಕ್ಷೆಯಿದೆ.
ಇದನ್ನು ಓದಿ : https://vijayatimes.com/increase-in-pm-kisan-yojana/